
ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!
Team Udayavani, Dec 3, 2022, 12:15 AM IST

ಕ್ರಿಕೆಟ್‌ನಲ್ಲಿ ಅಂಪಾಯರ್ ತೀರ್ಪು ಮರು ಪರಿಶೀಲನೆ ಮಾಡಲು ಡಿಆರ್‌ಎಸ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದು ಸದಾ ವಿವಾದಗಳಿಗೆ ಕಾರಣವಾಗಿದೆ.
ಫುಟ್‌ಬಾಲ್‌ನಲ್ಲಿ ಗೋಲು ಆಗಿದೆಯೋ, ಅದರಲ್ಲೇನಾದರೂ ದೋಷವಾಗಿದೆಯೋ ಎಂದು ಪರಿಶೀಲಿಸಲು ವಾರ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದೂ ಅಂತಹದ್ದೇ ವಿವಾದಗಳಿಗೆ ಸದಾ ಕಾರಣವಾಗುತ್ತದೆ. ಗುರುವಾರ ತಡರಾತ್ರಿ ನಡೆದ ಜಪಾನ್-ಸ್ಪೇನ್ ನಡುವಿನ ಪಂದ್ಯದಲ್ಲಿ ಅಂತಹದ್ದೊಂದು “ವಾರ್’ ನಡೆಯಿತು. ಇದರ ಪರಿಣಾಮ ಇನ್ನೊಂದು ಪಂದ್ಯದಲ್ಲಿ ಕೋಸ್ಟಾರಿಕ ವಿರುದ್ಧ ಗೆದ್ದರೂ ಜರ್ಮನಿ ವಿಶ್ವಕಪ್‌ನಿಂದ ಹೊರಬಿತ್ತು.
ವಿವಾದವೇನು?
ಜಪಾನ್ 2ನೇ ಗೋಲು ಹೊಡೆದಿದ್ದು 51ನೇ ನಿಮಿಷದಲ್ಲಿ. ಅವೊ ತನಾಕ ಇದನ್ನು ಸಾಧಿಸಿದರು. ವಿವಾದ ಹುಟ್ಟಿದ್ದೇ ಇಲ್ಲಿಂದ. ಈ ಗೋಲು ಹೊಡೆಯುವ ಮುನ್ನ ಚೆಂಡು ಗೋಲುಪೆಟ್ಟಿಗೆಯ ಪಕ್ಕದ ಬೌಂಡರಿ ಗೆರೆಯನ್ನು ದಾಟಿತ್ತು. ಇದನ್ನೇ ಒಳಕ್ಕೆಳೆದುಕೊಂಡು ಜಪಾನೀಯರು ಗೋಲು ಬಾರಿಸಿದ್ದಾರೆ. ಗೆರೆ ದಾಟಿ ಹೊರಹೋದ ಚೆಂಡನ್ನು ಒಳ ತಂದು ಗೋಲುಪೆಟ್ಟಿಗೆಯೊಳಕ್ಕೆ ಬಾರಿಸುವುದು ಅಸಿಂಧು ಎನ್ನುವುದು ಪ್ರೇಕ್ಷಕರ ವಾದ. ಇದನ್ನು ವಾರ್ ತಂತ್ರಜ್ಞಾನದ ಮೂಲಕ ರೆಫ್ರಿಗಳು ಸುದೀರ್ಘವಾಗಿ ಪರಿಶೀಲಿಸಿದರು. ಅಂತಿಮವಾಗಿ ಗೋಲು ಸರಿಯಿದೆ ಎಂದು ತೀರ್ಪಿತ್ತರು. ಅದೇನೇ ಇದ್ದರೂ, ಚೆಂಡು ಗೆರೆ ದಾಟಿದ್ದು ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಿರುವಾಗ ಯಾವ ಆಧಾರದಲ್ಲಿ ಅದನ್ನು ಗೋಲೆಂದು ಪರಿಗಣಿಸಿದರು ಎನ್ನುವುದು ಖಚಿತವಾಗಿಲ್ಲ.
ಇವೆಲ್ಲದರಿಂದ ಒಟ್ಟಾರೆ ಆಗಿದ್ದಿಷ್ಟೇ: ಜರ್ಮನಿ ಕೂಟದಿಂದ ಹೊರಬಿದ್ದದ್ದು. ಒಂದು ವೇಳೆ ಈ ಗೋಲು ನೀಡದಿದ್ದರೆ, ಜಪಾನ್ ಹೊರಹೋಗಿ, ಜರ್ಮನಿ ನಾಕೌಟ್‌ಗೆ ಹೋಗುವ ಅವಕಾಶವೊಂದಿತ್ತು. ಬಾರಿಸಿದ ಗೋಲು, ಬಿಟ್ಟುಕೊಟ್ಟ ಗೋಲುಗಳನ್ನೆಲ್ಲ ಲೆಕ್ಕಾಚಾರ ಮಾಡಿದಾಗ ಜಪಾನ್ ಹಿಂದುಳಿಯುವ ಅವಕಾಶವೊಂದಿತ್ತು. ಜರ್ಮನಿ ಆಗ ಮೇಲೇರುತ್ತಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
