ಮಸೀದಿಯ ಬಗ್ಗೆ ವಿವಾದಿತ ಹೇಳಿಕೆ : ಕಾಳಿ ಸ್ವಾಮೀಜಿಗೆ ಜಾಮೀನು
Team Udayavani, Jan 19, 2022, 7:49 PM IST
ಶ್ರೀರಂಗಪಟ್ಟಣ: ಟಿಪ್ಪುವಿನ ಜಾಮೀಯ ಮಸೀದಿಯ ಬಗ್ಗೆ ವಿವಾದಿತ ಹೇಳಿಕೆ ನೀಡಿ ನ್ಯಾಯಾಂಗ ಬಂಧನದಲ್ಲಿದ್ದ ಕಾಳಿ ಮಠದ ರಿಷಿಕುಮಾರ ಸ್ಚಾಮೀಜಿಗೆ ಶ್ರೀರಂಗಪಟ್ಟಣದ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಆಯೇಷಾ ಬಿ ಮಜೀದಾ ಆರೋಪಿ ಸ್ವಾಮೀಜಿಗೆ 1 ಲಕ್ಷದ ಬಾಂಡ್ 1, ಪ್ರತಿ ಭಾನುವಾರದಂದು ಪಟ್ಟಣದ ಠಾಣೆ ಹಾಜರಾಗಿ ಸಹಿ ಹಾಕುವುದು ಸೇರಿದಂತೆ ಸ್ಥಳೀಯ ವ್ಯಕ್ತಿಯ ಭದ್ರತೆಯ ಮೇರೆಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದ್ದಾರೆ.
ಆರೋಪಿ ಸ್ವಾಮೀಜಿ ಪರವಾಗಿ ಪಟ್ಟಣದ ವಕೀಲ ಸಿದ್ದೇಶ್ ಮತ್ತು ಬಾಲರಾಜ್ ಜಾಮೀನಿಗೆ ಅರ್ಜಿ ಸಲ್ಲಿಸಿ ಜಾಮೀನು ಕೊಡಿಸುವಲ್ಲಿ ಯಶಸ್ಚಿಯಾಗಿದ್ದಾರೆ.