ಕೋವಿಡ್ ಲಸಿಕೆ ನೀಡಿದ್ದಕ್ಕೆ ಭಾರತಕ್ಕೆ ಬ್ರೆಜಿಲ್, ವಿಶ್ವಸಂಸ್ಥೆ ಅಭಿನಂದನೆ
Team Udayavani, Jan 23, 2021, 9:25 PM IST
ನವದೆಹಲಿ: ಕೊರೊನಾ ವಿರುದ್ಧ ಹೋರಾಟದಲ್ಲಿ ಭಾರತದ ಪಾತ್ರ ಮಹತ್ವದ್ದು. ಇತರೆ ರಾಷ್ಟ್ರಗಳಿಗೆ ಲಸಿಕೆ ಪೂರೈಸುವುದರಲ್ಲೂ ಭಾರತ ಪ್ರಮುಖ ಪಾತ್ರವಹಿಸಿದೆ. ಈ ಕಾರ್ಯಕ್ಕಾಗಿ ಬ್ರೆಜಿಲ್ ಅಧ್ಯಕ್ಷ ಜೇರ್ ಬೊಲ್ಸೊನಾರೊ, ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಟೆಡ್ರೊಸ್ ಅಧಾನಾಮ್ ಘೆಬ್ರೆಯೆಸಸ್ ಮುಕ್ತಕಂಠದಿಂದ ಅಭಿನಂದನೆ ಸಲ್ಲಿಸಿದ್ದಾರೆ.
ಕೊರೊನಾದಿಂದ ಗರಿಷ್ಠ ಪೀಡನೆಗೊಳಗಾಗಿರುವ ಬ್ರೆಜಿಲ್‌ಗೆ ಭಾರತ 20 ಲಕ್ಷ ಲಸಿಕೆಗಳನ್ನು ಕಳುಹಿಸಿಕೊಟ್ಟಿದೆ. ಇದಕ್ಕೆ ಬ್ರೆಜಿಲ್ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿರುವ ರೀತಿ ವಿಶೇಷವಾಗಿದೆ. ರಾಮಾಯಣದಲ್ಲಿ ಯುದ್ಧ ನಡೆಯುತ್ತಿದ್ದಾಗ, ಹನುಮಂತ ಓಷಧ ಪರ್ವತಕ್ಕೆ ತೆರಳಿ, ಅಲ್ಲಿಂದ ಸಂಜೀವಿನಿ ಪರ್ವತವನ್ನು ಹೊತ್ತು ಲಂಕೆಗೆ ತೆರಳಿ ಲಕ್ಷ್ಮಣನ ಜೀವ ಉಳಿಸುತ್ತಾನೆ. ಆ ಚಿತ್ರವನ್ನು ಟ್ವೀಟ್ ಮಾಡಿರುವ ಬೊಲ್ಸೊನಾರೊ, “ಧನ್ಯವಾದ ಭಾರತ’ ಎಂದಿದ್ದಾರೆ. ಭಾರತದಂತಹ ಸ್ನೇಹಿತ ನಮ್ಮ ಜೊತೆಗಿರುವುದು ಬಹಳ ಗೌರವದ ವಿಷಯ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೋವಿಡ್ ಹಿನ್ನೆಲೆ: ಬಜೆಟ್ ಗಾತ್ರ ತಗ್ಗಿಸುವುದು ಅನಿವಾರ್ಯ: ಸಿಎಂ
ಭಾರತ ತನ್ನ ನೆರೆಯ ರಾಷ್ಟ್ರಗಳಾದ ನೇಪಾಳ, ಭೂತಾನ್, ಬಾಂಗ್ಲಾ, ಮಾಲ್ಡೀವ್ಸ್‌ಗಳಿಗೆ ಉಚಿತವಾಗಿ 32 ಲಕ್ಷ ಲಸಿಕೆ ಕಳುಹಿಸಿಕೊಟ್ಟಿದೆ. ದ.ಆಫ್ರಿಕಾ, ಮೊರೊಕ್ಕೊಗಳಿಗೂ ಕೋವಿಶೀಲ್ಡ್ ಅನ್ನು ತಲುಪಿಸಿದೆ. ಇದನ್ನು ಪ್ರಶಂಸಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಟೆಡ್ರೊಸ್, ಭಾರತ ಮತ್ತು ಪ್ರಧಾನಿ ಮೋದಿಗೆ ಧನ್ಯವಾದಗಳು. ನಾವೆಲ್ಲ ಒಗ್ಗೂಡಿ ಹೋರಾಡಿದರೆ ಮಾತ್ರ ಕೊರೊನಾ ವಿರುದ್ಧ ಗೆಲ್ಲಲು ಸಾಧ್ಯ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿಕೆ ತಪ್ಪುನಿರ್ಧಾರ; ಆದರೆ RSS ಇಂದು.. :ರಾಹುಲ್ ಗಾಂಧಿ
ರಸಗೊಬ್ಬರ ಬೆಲೆಯೇರಿಕೆ ಇಲ್ಲ : ರೈತರ ಹಿತ ಕಾಯುವ ನಿರ್ಧಾರಕ್ಕೆ ಬದ್ಧ ; IFFCO
ತನಿಖಾ ಸಂಸ್ಥೆಗಳಲ್ಲಿ ಸಿಸಿಟಿವಿಗೆ ಮೀನ ಮೇಷ: ಸುಪ್ರೀಂ ಗರಂ
ಗುಜರಾತ್ ನಲ್ಲಿ ಕಾಂಗ್ರೆಸ್ ಹಿನ್ನಡೆ : ಅಮಿತ್ ಚಾವ್ ಡಾ ರಾಜೀನಾಮೆ
ಮೋದಿಗೆ ಬಹುಪರಾಕ್ : ಜಮ್ಮುವಿನಲ್ಲಿ ಆಜಾದ್ ವಿರುದ್ಧ ಆಕ್ರೋಶ ..!
MUST WATCH
ಹೊಸ ಸೇರ್ಪಡೆ
ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿಕೆ ತಪ್ಪುನಿರ್ಧಾರ; ಆದರೆ RSS ಇಂದು.. :ರಾಹುಲ್ ಗಾಂಧಿ
ನಿತ್ಯಭವಿಷ್ಯ: ಈ ರಾಶಿಯವರು ಇಂದು ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ವಹಿಸಿ !
ಕಾಂಗ್ರೆಸ್ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್ ಪ್ರಯತ್ನ
ನಾಳೆಯಿಂದ ಬಜೆಟ್ ಅಧಿವೇಶನ : ಸಿ.ಡಿ. ಬಾಂಬ್, ಮೀಸಲಾತಿ ಸದ್ದಿನ ನಿರೀಕ್ಷೆ
ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ