
ನಿಂತಿದ್ದ ಲಾರಿಗೆ ಕ್ರೂಸರ್ ಢಿಕ್ಕಿ: ಐವರ ಸಾವು
Team Udayavani, Jun 7, 2023, 8:32 AM IST

ಸೈದಾಪುರ: ನಿಂತಿದ್ದ ಲಾರಿಗೆ ಕ್ರೂಸರ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೀದರ-ಗುತ್ತಿ ರಾಷ್ಟ್ರೀಯ ಹೆದ್ದಾರಿ 150ರ ಬಳಿಚಕ್ರ ಗ್ರಾಮದಲ್ಲಿ ನಡೆದಿದೆ.
ದುರ್ಘಟನೆಯಲ್ಲಿ ರಮಿಜಾಬಿ (54), ಮುನೀರ್ ಅಹ್ಮದ್ (50), ನ್ಯಾಮತಾಉಲ್ಲಾ(40), ಮುದ್ದಶೀರ್ (12), ಸುಮಯಾ (12) ಮೃತಪಟ್ಟಿದ್ದಾರೆ. ಉಳಿದ 13 ಜನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆರೆಯ ಆಂಧ್ರದ ನಂದ್ಯಾಳ ಜಿಲ್ಲೆಯ ಬಂಡಿ ಆತ್ಮಕೂರು ಹಾಗೂ ವೆಲಗೊಡ ಗ್ರಾಮದಿಂದ ಕಲಬುರಗಿಯಲ್ಲಿ ನಡೆಯುತ್ತಿರುವ ಖಾಜಾ ಬಂದೇನವಾಜ ದರ್ಗಾದ ಉರೂಸ್ ಜಾತ್ರೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರು. ವೆಲಗೂಡ ಗ್ರಾಮದ ರಮಿಜಾಬಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಸೇರಿ ಕ್ರೂಸರ್ ವಾಹನದಲ್ಲಿ ಸುಮಾರು 18 ಜನರಿದ್ದರು. ನಸುಕಿನ ಜಾವ ಮೂರು ಗಂಟೆ ಸುಮಾರಿಗೆ ಬಳಿಚಕ್ರ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಕ್ರೂಸರ್ ವಾಹನವು ಢಿಕ್ಕಿ ಹೊಡೆದಿದೆ. ಕ್ರೂಸರ್ ಚಾಲಕ ನಿದ್ದೆ ಮಂಪರಿನಲ್ಲಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Khalistani:ಭಾರತವನ್ನು ವಿಭಜಿಸಿ ಹಲವು ದೇಶಗಳನ್ನು ಸೃಷ್ಟಿಸಬೇಕು: ಖಲಿಸ್ತಾನಿ ಉಗ್ರ ಪನ್ನು !

Cauvery issue: ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ತೀರ್ಥಹಳ್ಳಿ ಕರವೇ ಘಟಕ

Panaji: ಗೋವಾ- ಪೋರ್ಚುಗಲ್ ಫುಟ್ಬಾಲ್ ಪಂದ್ಯ

Kerala: ಮಹಿಳೆಗೆ ದೈಹಿಕ ಕಿರುಕುಳ; ʼಮಲ್ಲು ಟ್ರಾವೆಲರ್ʼ ಯೂಟ್ಯೂಬರ್‌ಗೆ ಲುಕ್ ಔಟ್ ನೋಟಿಸ್

Supreme Court: ಕಪಾಳ ಮೋಕ್ಷ ಪ್ರಕರಣ: ಮಗುವಿನ ಶಿಕ್ಷಣದ ಹೊಣೆ ರಾಜ್ಯವೇ ಹೊರಬೇಕು: ಸುಪ್ರೀಂ