
Jammu ನಲ್ಲಿ ಶ್ರೀ ತಿರುಪತಿ ಬಾಲಾಜಿ ದೇಗುಲ ಲೋಕಾರ್ಪಣೆ
Team Udayavani, Jun 9, 2023, 7:16 AM IST

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಹೊರವಲಯದ ಮಜೀನ್ ಪ್ರದೇಶದಲ್ಲಿ ತಿರುಮಲ ತಿರುಪತಿ ದೇವಸ್ಥಾನಗಳು ಟ್ರಸ್ಟ್(ಟಿಟಿಡಿ) ವತಿಯಿಂದ ನಿರ್ಮಿಸಿರುವ ಶ್ರೀ ತಿರುಪತಿ ಬಾಲಾಜಿ ದೇಗುಲ ಗುರುವಾರ ಲೋಕಾರ್ಪಣೆಗೊಂಡಿತು. ದರ್ಶನಕ್ಕೆ ಭಕ್ತರಿಗೆ ಗುರುವಾರದಿಂದಲೇ ಪ್ರವೇಶ ಆರಂಭವಾಗಿದೆ.
ವೇದ ಮಂತ್ರ ಪಠಣಗಳ ಮಧ್ಯೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಮತ್ತು ಜಿ.ಕಿಶನ್ ರೆಡ್ಡಿ ಅವರು ಶ್ರೀ ವೆಂಕಟೇಶ್ವರ ದೇಗುಲ ಉದ್ಘಾಟಿಸಿದರು. ಈ ವೇಳೆ ಟಿಟಿಡಿ ಅಧ್ಯಕ್ಷ ಯು.ವಿ.ಸುಬ್ಟಾ ರೆಡ್ಡಿ ಹಾಜರಿದ್ದರು. ನಂತರ “ಮಹಾ ಸಂಪ್ರೊಕ್ಷಣಂ” ಕಾರ್ಯಕ್ರಮ ನಡೆಯಿತು. ಜಮ್ಮು ಮತ್ತು ಕಾಶ್ಮೀರ ಹಾಗೂ ಆಂಧ್ರ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.
ಜಮ್ಮು ಮತ್ತು ಕಾಶ್ಮೀರದ ಶಿವಾಲಿಕ್ ಕಾಡಿನಲ್ಲಿ 62 ಎಕರೆಗಳ ವಿಸ್ತೀರ್ಣದಲ್ಲಿ ಈ ದೇಗುಲ ನಿರ್ಮಿಸಲಾಗಿದೆ. ಇದು ರಾಜ್ಯದ ಮತ್ತೂಂದು ಪ್ರಸಿದ್ಧ ಪ್ರವಾಸಿ ತೀರ್ಥ ಕ್ಷೇತ್ರವಾಗಲಿದೆ ಎಂದು ಟಿಟಿಡಿ ತಿಳಿಸಿದೆ.
ಟಾಪ್ ನ್ಯೂಸ್
