
ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಭಾರಿ ಮಳೆ; ತಂಪಾದ ಗಾಳಿ
Team Udayavani, Mar 18, 2023, 2:59 PM IST

ನವದೆಹಲಿ: ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಶುಕ್ರವಾರ ರಾತ್ರಿ ಲಘು ಮಳೆಯ ನಂತರ ಶನಿವಾರ ಮಧ್ಯಾಹ್ನ (ಮಾ18) ಭಾರಿ ಮಳೆಯಾಗಿದೆ.
ಮುಂದಿನ ಕೆಲವು ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ತುಂತುರು ಮಳೆಯ ನಂತರ ಮೋಡ ಕವಿದ ವಾತಾವರಣ ಮತ್ತು ತಂಪಾದ ಗಾಳಿಗೆ ದೆಹಲಿ ಸಾಕ್ಷಿಯಾಯಿತು. ಮಾರ್ಚ್ 17 ರಿಂದ ಮಾರ್ಚ್ 20 ರವರೆಗೆ ದೇಶದ ಹಲವಾರು ಭಾಗಗಳಲ್ಲಿ ಸಂಭವನೀಯ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಈಗಾಗಲೇ ನೀಡಿತ್ತು.
ವಾತಾವರಣದಲ್ಲಿನ ಬದಲಾವಣೆಯನ್ನು ಆಚರಿಸಿದ ದೆಹಲಿಯ ಹಲವು ಜನರು ತಮ್ಮ ಮನೆಗಳು ಮತ್ತು ಬೀದಿಗಳಿಂದ ಭಾರೀ ಮಳೆಯ ದೃಶ್ಯಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ದೆಹಲಿ-ಎನ್‌ಸಿಆರ್ ಪ್ರದೇಶವನ್ನು ಹೊರತುಪಡಿಸಿ, ಪಂಜಾಬ್, ಹರಿಯಾಣ, ಚಂಡೀಗಢ, ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿಯೂ ಸಹ ಮಾರ್ಚ್ 20 ರ ವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Video; ಗಣೇಶೋತ್ಸವದಲ್ಲಿ ಬುರ್ಖಾ ಧರಿಸಿ ಡ್ಯಾನ್ಸ್ ಮಾಡಿದ ಹಿಂದೂ ಯುವಕ

Video: ಕಾಣೆಯಾದ ನಾಯಿಯ ಪೋಸ್ಟರ್ ತೆಗೆದಿದ್ದಕ್ಕಾಗಿ ವ್ಯಕ್ತಿ ಮೇಲೆ ಹಲ್ಲೆ ಮಾಡಿದ ಮಹಿಳೆ

Crime News: ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ; ವಿಷ ಸೇವಿಸಿ ಪ್ರಾಣ ಕಳೆದುಕೊಂಡ ದಂಪತಿ

Vande Bharat: ಇಂದು 9 ವಂದೇ ಭಾರತ್ ಶುರು; ದಿಲ್ಲಿಯಿಂದ ವರ್ಚುವಲ್ ಮೂಲಕ ಪ್ರಧಾನಿ ಚಾಲನೆ

Election: ಏಕ ಚುನಾವಣೆ: ಸಲಹೆ ಆಹ್ವಾನಿಸಿದ ಕೋವಿಂದ್ ಸಮಿತಿ