ವಿಮಾನದಲ್ಲಿ ಮೇಸ್ತ್ರಿಗಳ ಕರೆಸಿಕೊಂಡ ಬಿಲ್ಡರ್‌!

ಮಂಗಳೂರಿನಲ್ಲಿ ಕಟ್ಟಡ ಕಾರ್ಮಿಕರ ಕೊರತೆ ಕಾರಣ

Team Udayavani, Jul 5, 2020, 6:00 AM IST

ವಿಮಾನದಲ್ಲಿ ಮೇಸ್ತ್ರಿಗಳ ಕರೆಸಿಕೊಂಡ ಬಿಲ್ಡರ್‌!

ವಿಶೇಷ ವರದಿ-ಮಂಗಳೂರು: ಲಾಕ್‌ಡೌನ್‌ ಅನಂತರ ನಿರ್ಮಾಣ ಕ್ಷೇತ್ರಕ್ಕೆ ಕಾರ್ಮಿಕರ ಭಾರೀ ಕೊರತೆ ಉಂಟಾಗಿದ್ದು, ಕರಾವಳಿಯಲ್ಲೂ ಇದೇ ಸ್ಥಿತಿ ಇದೆ. ಈ ಕ್ಷೇತ್ರವನ್ನು ತಮ್ಮ ಶ್ರಮದಿಂದ ಆಧರಿಸಿದ್ದ ಉತ್ತರ ಭಾರತ, ಉತ್ತರ ಕರ್ನಾಟಕದ ಮಂದಿ ಊರಿಗೆ ತೆರಳಿರುವುದೇ ಇದಕ್ಕೆ ಕಾರಣ. ಕಾಮಗಾರಿ ಮುಂದುವರಿಯಲು ಅವರೇ ಬೇಕು ಎಂಬಂಥ ಸ್ಥಿತಿಯಿದೆ. ಪರಿಹಾರವೆಂಬಂತೆ, ಮಂಗಳೂರಿನ ನಿರ್ಮಾಣ ಉದ್ಯಮಿಯೊಬ್ಬರು ಸ್ವತಃ ಟಿಕೆಟ್‌ ವೆಚ್ಚ ಭರಿಸಿ ದೂರದ ಕೋಲ್ಕತಾದಿಂದ ಮೇಸ್ತ್ರಿಗಳನ್ನು ವಿಮಾನದಲ್ಲಿ ಕರೆತಂದಿದ್ದಾರೆ.

ಕರಾವಳಿಯಾದ್ಯಂತ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಸಿಕೊಂಡವರಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳ ಜನರೇ ಹೆಚ್ಚಿದ್ದರು. ಶ್ರಮ ಹಾಕಿ ದುಡಿಯುವ ಜಾಯಮಾನ, ಸ್ಥಳೀಯ ಕಾರ್ಮಿಕರ ಕೊರತೆ ಅವರ ಮೇಲಿನ ಅವಲಂಬನೆಯನ್ನು ಹೆಚ್ಚಿಸಿದೆ. ಮಂಗಳೂರಿನಲ್ಲೂ ಪ. ಬಂಗಾಲದ ಕಾರ್ಮಿಕರು, ಮೇಸ್ತ್ರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಲಾಕ್‌ಡೌನ್‌ ಸಂದರ್ಭ ಸರಕಾರ ಊರಿಗೆ ತೆರಳಲು ಅವಕಾಶ ನೀಡಿದಾಗ ಇವರೆಲ್ಲ ಹೋಗಿ ದ್ದರು. ಕೋವಿಡ್‌ ಕಡಿಮೆಯಾಗಿ ಸ್ವಲ್ಪ ದಿನ ಬಿಟ್ಟು ಕಾರ್ಮಿಕರು ಮತ್ತೆ ಬರಬಹುದು ಎಂಬ ನಿರೀಕ್ಷೆ ಬಿಲ್ಡರ್‌ಗಳಲ್ಲಿದ್ದರೂ ಹಾಗಾಗಿಲ್ಲ. ಅನಿವಾರ್ಯವಾಗಿ ಈಗ ಬಿಲ್ಡರ್‌ಗಳೇ ಸ್ವತಃ ಸಂಚಾರ ವ್ಯವಸ್ಥೆ ಮಾಡಿ ಕಾರ್ಮಿಕರು, ಮೇಸ್ತ್ರಿಗಳನ್ನು ಕರೆತರಲು ಮುಂದಾಗಿದ್ದಾರೆ. ಇನ್ನು ಕೆಲವು ಮಂದಿ ಬಿಲ್ಡರ್‌ಗಳು ಕಾರ್ಮಿಕರ ನಿರೀಕ್ಷೆಯಲ್ಲಿದ್ದಾರೆ.

ತಲಾ 7,500 ರೂ. ವೆಚ್ಚ
ಕೆಲವು ದಿನಗಳ ಹಿಂದೆ ಕೋಲ್ಕೊತಾ ದಿಂದ ವಿಮಾನ ಮೂಲಕ ಐವರು ಮೇಸ್ತ್ರಿಗಳನ್ನು ಕರೆತರಲಾಗಿದೆ. ಟಿಕೆಟ್‌ ವೆಚ್ಚ ತಲಾ 7,500 ರೂ.ಗಳನ್ನು ಬಿಲ್ಡರ್‌ ಭರಿಸಿದ್ದಾರೆ. ನಿಯಮದಂತೆ ಅವರಿಗೆ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದ್ದು, ಅದರ ವೆಚ್ಚವನ್ನೂ ಬಿಲ್ಡರ್‌ ನೋಡಿಕೊಳ್ಳುತ್ತಿದ್ದಾರೆ. ಹಲವು ಕಟ್ಟಡಗಳು ಮುಕ್ತಾಯ ಹಂತಕ್ಕೆ ಬಂದಿರುವುದರಿಂದ ಅವುಗಳ ಮೇಲ್ವಿಚಾರಣೆ ವಹಿಸಿದ್ದ ಮೇಸ್ತ್ರಿಗಳೇ ಪೂರ್ಣಗೊಳಿಸಲು ಅಗತ್ಯವಿದ್ದು, ಹೀಗಾಗಿ ತುರ್ತಾಗಿ ಕರೆತರಲಾಗಿದೆ ಎಂದು ಬಿಲ್ಡರ್‌ ಕಡೆಯ ಮೂಲಗಳು ತಿಳಿಸಿವೆ.

ವಾಪಸಾಗದ ಉ.ಕ. ಕಾರ್ಮಿಕರು
ಪ್ರತೀ ವರ್ಷವೂ ಮಳೆಗಾಲ ಸಂದರ್ಭ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರಲ್ಲಿ ಹೆಚ್ಚಿನವರು ತಮ್ಮೂರಿಗೆ ಕೃಷಿ ಕೆಲಸಕ್ಕಾಗಿ ವಾಪಸಾಗುತ್ತಾರೆ. ಆದರೂ ಸುಮಾರು ಶೇ.40ರಷ್ಟು ಮಂದಿ ಇಲ್ಲಿ ಉಳಿದುಕೊಳ್ಳುತ್ತಿದ್ದರು. ಆದರೆ ಈ ಬಾರಿ ಬಹುತೇಕರು ಊರಿಗೆ ತೆರಳಿದ್ದು, ಹಿಂದೆ ಬಂದಿಲ್ಲ. ಹಾಗಾಗಿ ಉತ್ತರ ಭಾರತದ ಕಾರ್ಮಿಕರನ್ನೇ ಕರೆಸಲು ಬಿಲ್ಡರ್‌ಗಳು ಮುಂದಾಗಿದ್ದಾರೆ.

ಬಂಗಾಲಕ್ಕೆ ಬಸ್‌ ವ್ಯವಸ್ಥೆ
ಪ. ಬಂಗಾಲದಿಂದ ಬಸ್‌ ಮೂಲಕ ಕಾರ್ಮಿಕರನ್ನು ಕರೆ ತರಲು ಯೋಜನೆ ಹಾಕಿಕೊಳ್ಳಲಾಗಿದ್ದು, ಜಿಲ್ಲಾಡಳಿತದ ಅನುಮತಿ ಕೇಳಲಾಗಿದೆ. ಒಂದು ಬಸ್‌ನಲ್ಲಿ 30 ಜನ ಕಾರ್ಮಿಕರಂತೆ ಸಾಧ್ಯವಾದಷ್ಟು ಮಂದಿಯನ್ನು ಕರೆತರಲು ಸಿದ್ಧತೆ ನಡೆಸಲಾಗಿದೆ. ಮಂಗಳೂರಿನಿಂದ ಪ. ಬಂಗಾಲಕ್ಕೆ ಹೋಗಿ ಬರುವುದು ಸುಮಾರು 5 ಸಾವಿರ ಕಿ.ಮೀ.ಗಳ ಪ್ರಯಾಣ. ಒಬ್ಬ ಕಾರ್ಮಿಕನ ಮೇಲೆ 5ರಿಂದ 6 ಸಾವಿರ ರೂ. ವೆಚ್ಚವಾಗಲಿದೆ. ಆದರೂ ಇದು ಅನಿವಾರ್ಯ ಎನ್ನುತ್ತಾರೆ ಬಿಲ್ಡರ್‌ಗಳು.

ಪ. ಬಂಗಾಲ ಕಾರ್ಮಿಕರಿಂದ ಕರೆ
ಪ. ಬಂಗಾಲದ ಕಾರ್ಮಿಕರು ಸ್ವತಃ ಆಸಕ್ತಿ ತೋರಿ ಕರೆ ಮಾಡುತ್ತಿದ್ದಾರೆ. ನಿರ್ಮಾಣ ಕ್ಷೇತ್ರ ಈಗಾಗಲೇ ಮರಳು ಸಮಸ್ಯೆಯಿಂದಾಗಿ ಸಂಕಷ್ಟ ದಲ್ಲಿದೆ. ಸರಕಾರವೂ ನಿರ್ಲಕ್ಷ್ಯ ವಹಿಸಿದೆ. ನಾವು ಕಾರ್ಮಿಕರನ್ನು ಒತ್ತಾಯಿಸುವುದಿಲ್ಲ. ಎಲ್ಲರ ಸುರಕ್ಷತೆಯೂ ಅಗತ್ಯ.
-ನವೀನ್‌ ಕಾಡೋìಜಾ, ಅಧ್ಯಕ್ಷರು, ಕ್ರೆಡಾೖ ಮಂಗಳೂರು

ಕ್ವಾರಂಟೈನ್‌ ಕಡ್ಡಾಯ
ಕಾರ್ಮಿಕರನ್ನು ಸರಕಾರದ ಆದೇಶದಂತೆ ಉಚಿತವಾಗಿ ಅವರ ಊರಿಗೆ ಕಳುಹಿಸಿಕೊಟ್ಟಿದ್ದೇವೆ. ಮಂಗಳೂರಿಗೆ ವಾಪಸಾಗುವ ಕಾರ್ಮಿಕರಿಗೆ ಇಲಾಖೆಯಿಂದ ನಿರ್ಬಂಧವಿಲ್ಲ. ಆದರೆ ಬೇರೆ ರಾಜ್ಯಗಳಿಂದ ಬರುವವರಿಗೆ ಕ್ವಾರಂಟೈನ್‌ ಕಡ್ಡಾಯ.
-ನಾಗರಾಜ್‌, ಕಾರ್ಮಿಕ ಅಧಿಕಾರಿ, ದ.ಕ. ಜಿಲ್ಲೆ

ಟಾಪ್ ನ್ಯೂಸ್

ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?

ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?

Mithali Raj and Jhulan Goswami rested from Women’s T20 Challenge

ಮಹಿಳಾ ಟಿ20 ಚಾಲೆಂಜ್: ಮಿಥಾಲಿ ರಾಜ್-ಜೂಲನ್ ಗೋಸ್ವಾಮಿಗೆ ಇಲ್ಲ ಜಾಗ

robbers

‘ದುಃಸ್ವಪ್ನ’ ಬಿದ್ದ ಮೇಲೆ ಕದ್ದ ದೇವಸ್ಥಾನದ 14 ವಿಗ್ರಹಗಳನ್ನು ಹಿಂದಿರುಗಿಸಿದ ಕಳ್ಳರು

kejriwal 2

ಅತಿಕ್ರಮಣ ವಿರೋಧಿ ಅಭಿಯಾನ : ಕೇಜ್ರಿವಾಲ್ ಆಕ್ರೋಶ

hd-kumarswaamy

ಸೈದ್ದಾಂತಿಕ ಬದ್ಧತೆಯ ಬಗ್ಗೆ ರಾಹುಲ್ ಗಾಂಧಿ ಬಿಡಿಸಿ ಹೇಳಬೇಕು: ಕುಮಾರಸ್ವಾಮಿ

ct-ravi

ಪಠ್ಯದಲ್ಲಿ ಹೆಗಡೆವಾರ್ ಭಾಷಣ ಸೇರ್ಪಡೆಯಾದರೆ ತಪ್ಪೇನು?: ಸಿ.ಟಿ.ರವಿ

ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ

ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dogs

ಬೀದಿನಾಯಿ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಚಿಕಿತ್ಸೆ

apmc

ಎಪಿಎಂಸಿ ಚುನಾವಣೆಗೆ ಜಿಲ್ಲಾದ್ಯಂತ ಭಾರೀ ಸಿದ್ಧತೆ

distilled-water

ಪಚ್ಚನಾಡಿ ಶುದ್ಧೀಕರಿಸಿದ ತ್ಯಾಜ್ಯ ನೀರು ಹರಿಸಲು ಪ್ರತ್ಯೇಕ ಪೈಪ್‌ಲೈನ್‌

bus

ಉಪಯೋಗಕ್ಕೆ ಇಲ್ಲದ ಬಸ್‌ ತಂಗುದಾಣಗಳು

thumb 4

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಪುನರಾರಂಭಗೊಳ್ಳದ ದೇಶೀಯ ಸರಕು ಸಾಗಾಟ

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?

ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?

mango

ಮಾರುಕಟ್ಟೆಗೆ ಲಗ್ಗೆ ಇಟ್ಟ ಹಣ್ಣಿನ ರಾಜ

Mithali Raj and Jhulan Goswami rested from Women’s T20 Challenge

ಮಹಿಳಾ ಟಿ20 ಚಾಲೆಂಜ್: ಮಿಥಾಲಿ ರಾಜ್-ಜೂಲನ್ ಗೋಸ್ವಾಮಿಗೆ ಇಲ್ಲ ಜಾಗ

16education

ಶಿಕ್ಷಣದಿಂದ ವ್ಯಕ್ತಿಯ ಸಮಗ್ರ ಅಭಿವೃದ್ದಿ

9

ಕೇರಳದಲ್ಲಿ ಮಳೆ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.