
ಜ.16ರಿಂದ ಮೈಸೂರು–ಬೆಂಗಳೂರು ಮಧ್ಯೆ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭ
ಇನ್ನೊಂದು ತಿಂಗಳಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಮಡಿಕೇರಿಗೂ ಸಂಚಾರ
Team Udayavani, Jan 14, 2023, 7:30 AM IST

ಬೆಂಗಳೂರು: ಬೆಂಗಳೂರು ಮತ್ತು ಮೈಸೂರು ಮಧ್ಯೆ ಸೋಮವಾರ(ಜ. 16)ದಿಂದ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಗೊಳ್ಳಲಿದೆ.
ಮುಂದಿನ ಒಂದು ತಿಂಗಳಲ್ಲಿ ಬೆಂಗಳೂರಿನಿಂದ ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಮಡಿಕೇರಿ ಮತ್ತು ವಿರಾಜಪೇಟೆಗಳಿಗೆ ಎಲೆಕ್ಟ್ರಿಕ್ ಬಸ್ ಸಂಚಾರ ಪ್ರಾರಂಭಗೊಳ್ಳಲಿದೆ.
ಕೆಎಸ್‌ಆರ್‌ಟಿಸಿಯು ಕೇಂದ್ರ ಸರಕಾರದ ಫೇಮ್ -2 ಯೋಜನೆಯಡಿ ಮೊದಲ ಬಾರಿಗೆ ಅಂತರ ನಗರ (ಬೆಂಗಳೂರು – ಮೈಸೂರು)ದ ಮಧ್ಯೆ ಎಲೆಕ್ಟ್ರಿಕ್ ಬಸ್ ಸಂಚಾರ ಪ್ರಾರಂಭಿ ಸಲಿದೆ.
ಓಲೆಕ್ಟ್ರಾ ಗ್ರೀನ್ಟೆಕ್ ಕಂಪೆನಿಯಿಂದ ಜಿಸಿಸಿ(ಗ್ರಾಸ್ ಕಾಸ್ಟ್ ಕಂಟ್ರಾಕ್ಟ್) ಮಾದರಿಯಲ್ಲಿ 50 ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಪಡೆಯು ತ್ತಿದ್ದು, ಇದರ ಮೊದಲ ಬಸ್ ಈ ಮಾರ್ಗದಲ್ಲಿ ಸಂಚರಿಸಲಿದೆ. ಉಳಿದ 49 ಬಸ್‌ಗಳು ವಿವಿಧ ಹಂತದಲ್ಲಿ ಮಾರ್ಗಕ್ಕಿಳಿಯಲಿದ್ದು ಅವು ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗ ಳೂರು ಮಧ್ಯೆ ಸಂಚರಿಸಲಿದೆ.
ಫೆಬ್ರವರಿ 2ನೇ ವಾರದ ಹೊತ್ತಿಗೆ ಎಲ್ಲ 50 ಬಸ್‌ಗಳು ವಾಣಿಜ್ಯ ಸಂಚಾರಕ್ಕೆ ಲಭ್ಯ ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T Narasipura ಭೀಕರ ಅಪಘಾತ: ಮೈಸೂರು ಆಸ್ಪತ್ರೆಗೆ ಸಚಿವ ನಾಗೇಂದ್ರ ಭೇಟಿ

ಮೈಸೂರು: ಕುರುಬೂರು ಬಳಿ ನಡೆದ ಅಪಘಾತ: ಆಸ್ಪತ್ರೆಗೆ ಸಚಿವರ ಭೇಟಿ, ಗಾಯಾಳುಗಳ ಅರೋಗ್ಯ ವಿಚಾರಣೆ

2018 ರಲ್ಲಿ ಪತ್ನಿ ಮತ್ತು ಮಗುವನ್ನು ಕೊಲೆಗೈದ ಪ್ರಕರಣ…: ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

ಅಳಿವಿನಂಚಿನಲ್ಲಿರುವ ಗೀಜಗದ ಹಕ್ಕಿ ಗೂಡುಗಳು… ಗೀಜಗದ ಹೆಣಿಕೆಗೆ ಸರಿಸಾಟಿ ಯಾರಿಲ್ಲ