ನೆಗೆದ ಗೃಹ ಬಳಕೆ ವಸ್ತು ಮಾರಾಟ : ಜುಲೈ- ಸೆಪ್ಟಂಬರ್ ತ್ತೈಮಾಸಿಕದ ಬೆಳವಣಿಗೆ
Team Udayavani, Feb 19, 2021, 6:40 AM IST
ಕೋಲ್ಕತಾ: ಲಾಕ್ಡೌನ್ ವೇಳೆಯಲ್ಲಿ ತೀರಾ ತಳಮಟ್ಟಕ್ಕೆ ಕುಸಿದಿದ್ದ ಗೃಹೋಪಯೋಗಿ ವಸ್ತುಗಳ ಮಾರಾಟವು ಅನ್ಲಾಕ್ ಅವಧಿಯಲ್ಲಿ ಏರಿಕೆ ಕಂಡು, ಮಾರುಕಟ್ಟೆಯಲ್ಲಿ ಸಂಭ್ರಮ ಹೆಚ್ಚಿಸಿದೆ.
ಜುಲೈಯಿಂದ ಸೆಪ್ಟಂಬರ್ ವರೆಗಿನ ದ್ವಿತೀಯ ತ್ತೈಮಾಸಿಕ ಅವಧಿಯಲ್ಲಿ ಟಿವಿ, ಎಸಿ, ಫ್ರಿಜ್, ವಾಷಿಂಗ್ ಮೆಷಿನ್ ಖರೀದಿ ಬಿರುಸಾಗಿತ್ತು ಎಂದು ಜಿಎಫ್ಕೆ ಇಂಡಿಯಾ ತನ್ನ ವರದಿಯಲ್ಲಿ ಹೇಳಿದೆ.
ಇದು ಹಬ್ಬದ ಋತುವಾಗಿದ್ದು, ಗ್ರಾಹಕರು ಮನೆ ವಸ್ತುಗಳನ್ನು ಮೇಲ್ದರ್ಜೆಗೇರಿಸಿಕೊಳ್ಳಲು ಮುಂದಾಗಿದ್ದರು ಎಂದು ವರದಿ ಹೇಳಿದೆ.
ತೃತೀಯ ತ್ರೈಮಾಸಿಕ ಮತ್ತಷ್ಟು ಹೆಚ್ಚಳ
ಅಕ್ಟೋಬರ್ -ಡಿಸೆಂಬರ್ನ ತೃತೀಯ ತ್ರೈಮಾಸಿಕದಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಇನ್ನೂ ಏರಿಕೆಯಾಗಿದೆ .ಈ ಅವಧಿಯಲ್ಲಿ ಎಸಿ ಮತ್ತು ಮೈಕ್ರೋವೇವ್ ಓವನ್ ವಿಭಾಗದಲ್ಲಿ ಶೇ. 49, ಫ್ರಿಜ್ ಶೇ. 25, ವಾಷಿಂಗ್ ಮೆಷಿನ್ ಶೇ. 31 ಮತ್ತು ಟಿವಿ ಖರೀದಿಯಲ್ಲಿ ಶೇ. 8ರಷ್ಟು ಏರಿಕೆಯಾಗಿದೆ. ಸ್ಮಾರ್ಟ್ಫೋನ್ ಖರೀದಿ ಶೇ. 8ರಷ್ಟು ಹೆಚ್ಚಳವಾಗಿದೆ. ಜುಲೈ-ಸೆಪ್ಟಂಬರ್ ಅವಧಿಯಲ್ಲಿ ಸ್ಮಾರ್ಟ್ಫೋನ್ ಖರೀದಿಯಲ್ಲಿ ಶೇ. 1ರಷ್ಟು ಮಾತ್ರ ಏರಿಕೆ ಕಂಡುಬಂದಿತ್ತು.
ಖರೀದಿಗೆ ಕಾರಣಗಳು
– ಮನೆಯ ಗೃಹೋಪಯೋಗಿ ವಸ್ತುಗಳನ್ನು ಮೇಲ್ದರ್ಜೆಗೇರಿಸಲು ಮುಂದಾಗಿದ್ದು.
– ಮನೆಗೆ ವಿಶಾಲ ಪರದೆಯ ಟಿವಿ ಖರೀದಿಗಾಗಿ ಮನಸ್ಸು ಮಾಡಿದ್ದು
– ಪ್ರೀಮಿಯಂ ಸ್ಮಾರ್ಟ್ಫೋನ್ಗಳು ದೀರ್ಘಕಾಲ ಬಾಳಿಕೆ ಬರುತ್ತವೆ ಎಂಬ ಕಾರಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್