
ಪ್ರಧಾನಿ ಮೋದಿಗೂ ಅವರೇ ಸ್ಪೂರ್ತಿ: ಕಂಗನಾ ವಿರುದ್ಧ ಬಿಜೆಪಿ ವಕ್ತಾರ ಕಿಡಿ
Team Udayavani, Nov 18, 2021, 11:41 AM IST

ನವದೆಹಲಿ: ಮಹಾತ್ಮಾ ಗಾಂಧಿ ವಿರುದ್ಧದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ನಟಿ ಕಂಗನಾ ರಣಾವತ್ ಅವರ ವಿರುದ್ಧ ದೆಹಲಿ ಬಿಜೆಪಿ ವಕ್ತಾರ ನಿಘತ್ ಅಬ್ಬಾಸ್ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ಟ್ವೀಟರ್ ನಲ್ಲಿ ವಿಡಿಯೋದಲ್ಲಿ ಮಾತನಾಡಿದ ಅಬ್ಬಾಸ್ , ‘ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಂದ ಸ್ಫೂರ್ತಿ ಪಡೆದಿದ್ದಾರೆ, ಈ ರೀತಿಯ ಹೇಳಿಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೆಟ್ಟ ಹೆಸರು ತರುತ್ತವೆ’ ಎಂದು ಕಿಡಿ ಕಾರಿದರು.
‘ಕಂಗನಾ ರಣಾವತ್ ಅವರು ಗಾಂಧಿ ಕುರಿತಾಗಿ ಅಸಂಬದ್ಧವಾಗಿ ಹೇಳುವ ಮೂಲಕ ಏನಾಗಲು ಬಯಸುತ್ತಾರೆ ಎಂಬುದನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಇಂತಹ ಅಸಂಬದ್ಧ ಮಾತುಗಳನ್ನು ಹೇಳುವ ಮೂಲಕ ನಿತ್ಯವೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾ ದೇಶದ ಜನತೆಗೆ ನೋವುಂಟು ಮಾಡುತ್ತಿದ್ದಾರೆ. ಆಕೆ ಕೇವಲ ದೇಶದ ಜನರನ್ನು ನೋಯಿಸುತ್ತಿಲ್ಲ ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ದೂಷಿಸುತ್ತಿದ್ದಾಳೆ ಎಂದು ನಾನು ಹೇಳುತ್ತೇನೆ’ ಎಂದು ಹೇಳಿದ್ದಾರೆ.
‘ಸುಭಾಸ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಅವರನ್ನು ಮಹಾತ್ಮಾ ಗಾಂಧಿ ಬೆಂಬಲಲಿಸಲಿಲ್ಲ’ ಎಂದು ಹೇಳುವ ಮೂಲಕ ಅಹಿಂಸೆಯ ಮಂತ್ರವನ್ನು ಅಪಹಾಸ್ಯ ಮಾಡುವ ಮೂಲಕ’1947 ರಲ್ಲಿ ದೊರಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ’ ಎಂಬ ಹೇಳಿಕೆಯನ್ನು ಕಂಗನಾ ಸಮರ್ಥಿಸಿಕೊಂಡಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ; ಕುಸಿದು ಬಿದ್ದ ಹಳೆಯ ಸೇತುವೆ: ಕನಿಷ್ಠ 6 ಮಂದಿ ನೀರುಪಾಲು ಶಂಕೆ

Video: ಬೈಕ್ನಲ್ಲಿ ಚಲಿಸುವ ವೇಳೆ ಹಾವು ಕಡಿತ; ಸೆರೆ ಹಿಡಿದ ಹಾವಿನಿಂದಲೇ ಪ್ರಾಣ ಹಾನಿ.!

Congress ಛತ್ತೀಸ್ಗಢ, ಮಧ್ಯಪ್ರದೇಶದಲ್ಲಿ ಗೆಲ್ಲುವುದು ಖಚಿತ, ರಾಜಸ್ಥಾನದಲ್ಲಿ…: ರಾಹುಲ್

Vande Bharat; ಭಾರತೀಯ ರೈಲ್ವೆಯ ಪರಿವರ್ತನೆಗಾಗಿ ನಮ್ಮ ಸರ್ಕಾರದ ಕೆಲಸ: ಪ್ರಧಾನಿ ಮೋದಿ

WrestlersCase ಅವಕಾಶ ಸಿಕ್ಕಾಗೆಲ್ಲಾ ಬ್ರಿಜ್ ಭೂಷಣ್ ಕಿರುಕುಳ:ಕೋರ್ಟ್ ನಲ್ಲಿ ದೆಹಲಿಪೊಲೀಸರು