ಮಾಜಿ ಸಚಿವ ಮಾಲೀಕಯ್ಯಗೆ ಸೆಡ್ಡು; ಬಿಜೆಪಿ ಟಿಕೆಟ್ ದೊರಕುವ ವಿಶ್ವಾಸದಲ್ಲಿ ನಿತಿನ್

ಪರೋಕ್ಷವಾಗಿ ಸೆಡ್ಡು ಹೊಡೆಯುವ ಸೂಚನೆ ನೀಡಿದ ಸಹೋದರ

Team Udayavani, Mar 9, 2023, 5:08 PM IST

1–sdaswe

ಕಲಬುರಗಿ: ಈ ಸಲ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಬದಲು ಅವರ ಸಹೋದರ ನಿತಿನ್ ಗುತ್ತೇದಾರ ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಆಗ್ರಹಿಸಿದ್ದಾರೆ.

ನಗರದ ಸತೀಶ ವಿ ಗುತ್ತೇದಾರ ಮನೆಯಲ್ಲಿ ನಡೆದ ಅಫಜಲಪುರ ಕ್ಷೇತ್ರದ ಸಮಾನ ಮನಸ್ಕರ ಹಿರಿಯ ಮತ್ತು ಪ್ರಮುಖರ ವಿಶೇಷ ಸಮಾಲೋಚನಾ ಸಭೆ ನಂತರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಸಭೆಯ ಸಂಚಾಲಕರಾದ ವಿಶ್ವನಾಥ ರೇವೂರ ಸೇರಿ ಮತ್ತಿತರರು  ಮಾತನಾಡಿ, ಕ್ಷೇತ್ರದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ನಿತಿನ್ ವಿ.ಗುತ್ತೇದಾರ ಪರವೇ ಒಲವು ಇರುವುದರಿಂದ ಜತೆಗೆ ಕಳೆದ ಐದು ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಕ್ಷೇತ್ರದ ಸರ್ವರೂ ನಿತಿನ್ ಪರವಾಗಿ ಇರುವುದಾಗಿ ಹೇಳಿದರು.

2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿತಿನ್ ಗುತ್ತೇದಾರ ರಾಗಲಿ ಎಂಬ ನಿಟ್ಟಿನ ಅಭಿಪ್ರಾಯ ಕ್ಷೇತ್ರದ ಎಲ್ಲರ ಅಭಿಪ್ರಾಯವಾಗಿದೆ. ಸರ್ವೆಯಲ್ಲೂ ನಿತಿನ್ ಹೆಸರು ಮುಂಚೂಣಿಗೆ ಬಂದಿದೆ ಎಂಬುದನ್ನು ಕೇಳಿದ್ದೇವೆ. ಪ್ರಮುಖವಾಗಿ ಕಳೆದ 2018ರ ಚುನಾವಣೆಯಲ್ಲೇ ಸ್ವತ: ಮಾಲೀಕಯ್ಯ ಗುತ್ತೇದಾರ ಮುಂದಿನ ಸಲ ನಿತಿನ್ ಗುತ್ತೇದಾರ ಅವರೇ ಉತ್ತರಾಧಿಕಾರಿಯಾಗುತ್ತಾರೆ ಎಂದು ಹೇಳಿದ್ದರು.‌ ಹೀಗಾಗಿ ಟಿಕೆಟ್ ಕೊಡಿಸುವ ಮೂಲಕ ನುಡಿದಂತೆ ನಡೆದುಕೊಳ್ಳಬೇಕೆಂದರು.‌

ನನಗೂ ಅನುಭವವಿದೆ
ಜಿಲ್ಲಾ ಪಂಚಾಯತಿ ಅಧ್ಯಕ್ಷನಾಗಿ ಜತೆಗೆ ಕಳೆದ 15 ವರ್ಷಗಳಿಂದ ರಾಜಕೀಯದಲ್ಲಿ ಎಲ್ಲ ಹಂತದ ಆಡಳಿತ ಅನುಭವ ಹೊಂದಲಾಗಿದೆ. ನನಗೀಗ 40 ವರ್ಷ ಹೀಗಾಗಿ ರಾಜಕೀಯ ಸ್ಥಾನಕ್ಕಾಗಿ ಬಡಿದಾಡುವುದು ಅಗತ್ಯವಾಗಿದೆ. ಕಳೆದ ಸಲವೇ ಮುಂದಿನ ಸಲ ಕ್ಷೇತ್ರ ಬಿಟ್ಟು ಸ್ಪರ್ಧೆಗೆ ಅವಕಾಶ ಮಾಡಿ ಕೊಡುವುದಾಗಿ ಹೇಳಿದ್ದರು.‌ ಇನ್ನೂ ಕಾಲ ಮಿಂಚಿಲ್ಲ. ಮನಸ್ಸು ದೊಡ್ಡದು ಮಾಡಿ ತಮ್ಮ ಬೆಂಬಲಕ್ಕೆ ಬರುತ್ತಾರೆಂಬ ವಿಶ್ವಾಸವಿದೆ. ಪ್ರಮುಖವಾಗಿ ಬಿಜೆಪಿ ಟಿಕೆಟ್ ತಮಗೆ ದೊರಕಲು ಪಕ್ಷದ ವರಿಷ್ಠರು ದೃಢ ನಿರ್ಧಾರ ಕೈಗೊಳ್ಳುತ್ತಾರೆಂಬ ದೃಢ ವಿಶ್ವಾಸ ಹೊಂದಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಿತಿನ್ ವಿ.ಗುತ್ತೇದಾರ ತಿಳಿಸಿದರು.

ತಮ್ಮ ಸಹೋದರ ಮಾಲೀಕಯ್ಯ ಗುತ್ತೇದಾರ ಅವರೇ ನಿತಿನ್ ಹಿಂದೆ ಯಾರೂ ಇಲ್ಲ. ನಾಲ್ಕು ಹುಡುಗರಿದ್ದಾರೆ ಅನ್ನುತ್ತಿದ್ದಾರೆ. ಆದರೆ ಕ್ಷೇತ್ರದ ಎಲ್ಲ ಹಿರಿಯರು, ಮುಖಂಡರು ತಮ್ಮ ಹಿಂದೆ ಇದ್ದಿರುವುದಕ್ಕೆ ಇಂದು ನಡೆದ ಸಮಾನ ಮನಸ್ಕರ ಸಭೆಯೇ ಸಾಕ್ಷಿಯಾಗಿದೆ. ಕುಟುಂಬ ಒಡೆಯಲು ಸಹೋದರನನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಮಾಲೀಕಯ್ಯ ಅವರು ಆರೋಪಿಸಿದ್ದರು.‌ ಆದರೆ ತಾವು ಚಿಕ್ಕ‌ಮಗುವಲ್ಲ.‌ ಎಲ್ಲ ತಿಳಿಯುತ್ತದೆ. ತಾವು ಪ್ರಬುದ್ಧರಿದ್ದು, ಯಾರೂ ಎತ್ತಿ ಕಟ್ಟುವ ಪ್ರಶ್ನೆಯೇ ಇಲ್ಲ ಎಂದು ನಿತಿನ್ ತಿರುಗೇಟು ನೀಡಿದರು.

ಈ ಹಿಂದೆ ಹೇಳಿರುವಂತೆ ತಮಗೆ ಸ್ಪರ್ಧೆಗೆ ಅವಕಾಶ ನೀಡಿ, ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಎಲ್ಲ 41 ಕ್ಷೇತ್ರಗಳಲ್ಲಿ ಸಂಚರಿಸಿ ಪಕ್ಷದ ಗೆಲುವಿಗೆ ಶ್ರಮಿಸಲಿ. ದೊಡ್ಡಣ್ಣನಾಗಿ ತಮಗೆ ನ್ಯಾಯ ಕಲ್ಪಿಸಲಿ ಎಂದರು.

ಪಕ್ಷದ ಹಿರಿಯರ ಹಾಗೂ ‌ಮುಖಂಡರ ಸಭೆಯ ನಿರ್ಧಾರವನ್ನು ಹಾಗೂ ಕ್ಷೇತ್ರದ ಪ್ರಮುಖರ ಅಭಿಪ್ರಾಯವನ್ನು ಇನ್ನಷ್ಟು ಜನರನ್ನು ಸೇರಿಸಿ ಅಭಿಪ್ರಾಯ ಕ್ರೋಢಿಕರಿಸಿ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು.‌ ಪಕ್ಷದ ಸಂಘಟನೆಗಾಗಿ ದುಡಿದಿರುವುದು ಎಲ್ಲರ ಗಮನಕ್ಕಿದೆ. ಹೀಗಾಗಿ ಟಿಕೆಟ್ ತಮಗೆ ದೊರಕುತ್ತದೆ ಎಂಬುದು ಶೇ.‌90ರಷ್ಟು ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ದೊರಕದಿದ್ದರೆ ಮತ್ತೆ ಎಲ್ಲ ಹಿರಿಯರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಒಟ್ಟಾರೆ ಸ್ಪರ್ಧೆಗೆ ಸಿದ್ದ ಎಂಬುದಾಗಿ ನಿತಿನ್ ಗುತ್ತೇದಾರ ಪರೋಕ್ಷವಾಗಿ ಸೆಡ್ಡು ಹೊಡೆಯುವ ರೀತಿಯಲ್ಲಿ ಹೇಳಿದರು.

ಸಹೋದರ ಮಾಲೀಕಯ್ಯ ಗುತ್ತೇದಾರ ಆರು ಸಲ ಗೆದ್ದಿದ್ದು, ಮೂರು ಸಲ ತಮ್ಮ ತಂದೆ ವೆಂಕಯ್ಯ ಗುತ್ತೇದಾರ ಪ್ರಮುಖ ಪಾತ್ರ ವಹಿಸಿದ್ದರೆ ಇನ್ಮೂರು ಸಲ ಸಹೋದರರೇ ಪ್ರಮುಖತ್ವ ವಹಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ ಮಾಲೀಕಯ್ಯ ಗುತ್ತೇದಾರ ಯಾವುದಕ್ಕೂ ಆವಕಾಶ ನೀಡದೇ ದೊಡ್ಡಣ್ಣನ ಸ್ಥಾನದಲ್ಲಿ ಕುಳಿತು ನ್ಯಾಯ ಕಲ್ಪಿಸಲಿ ಎಂದರು.

ಸುದ್ದಿ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಸಹೋದರ ಸತೀಶ್ ವಿ. ಗುತ್ತೇದಾರ ಮಾತನಾಡಿ, ದೊಡ್ಡಣ್ಣ ಮಾಲೀಕಯ್ಯ ಗುತ್ತೇದಾರ ಅವರನ್ನು ತಂದೆಯ ರೂಪದಲ್ಲಿ ನೋಡಲಾಗಿದೆ. ಪ್ರಮುಖ ವಾಗಿ ಕ್ಷೇತ್ರದಲ್ಲಿ ನಿತಿನ್ ಪರ ಜನ ಬೆಂಬಲವಿದೆ. ನಿತಿನ್ ಗೆ ಟಿಕೆಟ್ ಗೆ ಅವಕಾಶ ಕಲ್ಪಿಸಬೇಕೆಂಬುದು ಕುಟುಂಬ ವಲಯದಲ್ಲಿ ಚರ್ಚೆಯಾಗಿದೆ. ಅದಲ್ಲದೇ ಎಲ್ಲ ಹಿರಿಯರ ಆಶೀರ್ವಾದ ವಿದೆ. ಜನ‌ಬೆಂಬಲ‌‌ ಮುಂದೆ ಏನೂ‌‌‌‌ ನಡೆಯದು. ಈ ಹಿಂದೆ ಮಂಡ್ಯದಲ್ಲಿ ಎಲ್ಲ ರಾಷ್ಟ್ರೀಯ ಪಕ್ಷಗಳ ನ್ನು ಸೋಲಿಸಿ ಪಕ್ಷೇತರ ಅಭ್ಯರ್ಥಿ ಗೆದ್ದಿಲ್ಲವೇ? ಎಂದು ಮಾರ್ಮಿಯವಾಗಿ ಪ್ರಶ್ನಿಸಿದರು

ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ಬಸವಣ್ಣೆಪ್ಪ ಅಂಕಲಗಿ, ಅರವಿಂದ‌ ಹಾಳಕಿ, ಕಲ್ಯಾಣರಾವ ನಾಗೋಜಿ, ಸಿದ್ದು ಹಳಗೋಧಿ, ಪ್ರೇಮಕುಮಾರ ರಾಠೋಡ, ಅಣ್ಣಾರಾವ ಪಾಟೀಲ್ ಸಿರಸಗಿ, ಮಹಾದೇವ ಗುತ್ತೇದಾರ ಸೇರಿದಂತೆ ಪ್ರಮುಖರಿದ್ದರು.

ಟಾಪ್ ನ್ಯೂಸ್

1-fffrr

‘Bhut jolokia’ ಚಿಪ್ಸ್‌ ತಿಂದು ಜಪಾನ್‌ನ 14 ವಿದ್ಯಾರ್ಥಿಗಳು ಅಸ್ವಸ್ಥ

1-kanwar

UP Police;ಕನ್ವರ್‌ ಯಾತ್ರೆ ಮಾರ್ಗದ ಹೊಟೇಲ್‌ ಮಾಲಕರ ಹೆಸರು ಪ್ರದರ್ಶನ ಕಡ್ಡಾಯ!

1-insta

Instagram Influencer ಆನ್ವಿ ಕಾಮ್ದಾರ್‌ ಕಮರಿಗೆ ಬಿದ್ದು ಮರಣ

modi (4)

J&K ಉಗ್ರ ನಿಗ್ರಹಕ್ಕೆ ಹೆಚ್ಚು ಪಡೆ ನಿಯೋಜಿಸಿ: ಪ್ರಧಾನಿ ಮೋದಿ

Heavy Rains ಅದ್ಯಪಾಡಿ ಗ್ರಾಮದ 30 ಮನೆಗಳು ಜಲಾವೃತ

Heavy Rains ಅದ್ಯಪಾಡಿ ಗ್ರಾಮದ 30 ಮನೆಗಳು ಜಲಾವೃತ

Heavy Rains ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ; ಕೆಲವೆಡೆ ಹಾನಿ

Heavy Rains ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ; ಕೆಲವೆಡೆ ಹಾನಿ

Mangalore ಮಾನಸಿಕ ಅಸ್ವಸ್ಥನನ್ನು ಮನೆ ತಲುಪಿಸಿದ ಆಧಾರ್‌ ಕಾರ್ಡ್‌!

Mangalore ಮಾನಸಿಕ ಅಸ್ವಸ್ಥನನ್ನು ಮನೆ ತಲುಪಿಸಿದ ಆಧಾರ್‌ ಕಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sci

Agricultural scientist ತಳಿ ಸಂಶೋಧಕ ಡಾ. ಎಸ್.ಎ.ಪಾಟೀಲ್ ನಿಧನ

ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು

Kaduru; ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು

Serial Thief: ಚಿತ್ತಾಪುರ ಪಟ್ಟಣದ ಐದು ಮನೆಗಳಲ್ಲಿ ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

Serial Thief: ಚಿತ್ತಾಪುರ ಪಟ್ಟಣದ ಐದು ಮನೆಗಳಲ್ಲಿ ಕಳ್ಳತನ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

Chittapura; ಹಾಡಹಗಲೇ ಕಳ್ಳತನ ಮಾಡಿದ ಆರೋಪಿಯ ಸೆರೆ, ಸೊತ್ತು ವಶ

Chittapura; ಹಾಡಹಗಲೇ ಕಳ್ಳತನ ಮಾಡಿದ ಆರೋಪಿಯ ಸೆರೆ, ಸೊತ್ತು ವಶ

1-sharan

Soon ನಿಗಮ ಮಂಡಳಿಗಳಿಗೆ ಕಾರ್ಯಕರ್ತರ ನೇಮಕ: ಡಾ. ಶರಣಪ್ರಕಾಶ ಪಾಟೀಲ್

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-wqewqewq

Mauritius ನಲ್ಲಿಯೂ ಭಾರತದ ಜನೌಷಧ ಕೇಂದ್ರ

1-fffrr

‘Bhut jolokia’ ಚಿಪ್ಸ್‌ ತಿಂದು ಜಪಾನ್‌ನ 14 ವಿದ್ಯಾರ್ಥಿಗಳು ಅಸ್ವಸ್ಥ

Suicide 3

Temple; ತಮಟೆ ಬಾರಿಸಲು ಹೋಗದ್ದಕ್ಕೆ ದಲಿತರಿಗೆ ಬಹಿಷ್ಕಾರ!

Suspended

US; ಭಾರತೀಯಳನ್ನು ಕೊಂದು ನಕ್ಕಿದ್ದ ಪೊಲೀಸ್‌ ವಜಾ

Bhagavant mann

AAP; ಹರಿಯಾಣದ ಎಲ್ಲ 90 ಕ್ಷೇತ್ರಗಳಲ್ಲೂ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.