ಶಾರುಖ್ ಪತ್ನಿ ಗೌರಿ ಖಾನ್ ವಿರುದ್ಧ ಎಫ್ಐಆರ್
Team Udayavani, Mar 2, 2023, 11:42 AM IST
ಮುಂಬೈ: ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್ಐಆರ್ ದಾಖಲಾಗಿದೆ.
ಗೌರಿ ಖಾನ್ ವಿರುದ್ಧ ಮುಂಬೈ ನಿವಾಸಿ ಜಸ್ವಂತ್ ಶಾ ಎಂಬವರು ದೂರು ದಾಖಲಿಸಿದ್ದು ಸದ್ಯ ಗೌರಿ ವಿರುದ್ದ ಐಪಿಸಿ ಸೆಕ್ಷನ್ 409ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತುಳಸಿಯಾನಿ ಕಟ್ಟಡ ನಿರ್ಮಾಣ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗಿರುವ ಗೌರಿ ಖಾನ್ ವಿರುದ್ಧ ಕಂಪನಿ ಮಾಡಿರುವ ತಪ್ಪಿನಿಂದಾಗಿ ದೂರು ದಾಖಲಾಗಿದೆ.
ʻತುಳಸಿಯಾನಿ ಕಟ್ಟಡ ನಿರ್ಮಾಣ ಕಂಪನಿಗೆ ಗೌರಿ ಖಾನ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇವರ ಪ್ರಭಾವದಿಂದ ನಾನು ಲಖನೌನಲ್ಲಿರುವ ತುಳಸಿಯಾನಿ ಕಂಪನಿ ನಿರ್ಮಾಣದ ಸುಶಾಂತ್ ಗಾಲ್ಫ್ಸಿಟಿಯಲ್ಲಿ ಫ್ಲಾಟ್ ಖರೀದಿಸಿದ್ದೆ. ಅದಕ್ಕಾಗಿ ನಾನು 86 ಲಕ್ಷ ರೂ. ಹಣವನ್ನೂ ಪಾವತಿಸಿದ್ದೇನೆ. ಆದರೆ ಕಂಪನಿ ನನಗೆ ನೀಡಬೇಕಾಗ ಫ್ಲಾಟನ್ನು ಬೇರೆಯವರಿಗೆ ನೀಡಿ ನನಗೆ ಮೋಸ ಮಾಡಿದೆʼ ಎಂದು ಜಸ್ವಂತ್ ಶಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಗೌರಿ ಖಾನ್ ಜೊತೆ ಕಂಪನಿಯ ಎಂಡಿ ಅನಿಲ್ ಕುಮಾರ್ ತುಳಸಿಯಾನಿ, ನಿರ್ದೇಶಕ ಮಹೇಶ್ ತುಳಸಿಯಾನಿ ವಿರುದ್ಧವೂ ಜಸ್ವಂತ್ ಶಾ ದೂರು ನೀಡಿದ್ದಾರೆ.
ಇದನ್ನೂ ಓದಿ : ಕೈಯಲ್ಲಿ ನಿತ್ಯಾನಂದನ ಟ್ಯಾಟೋ, ಮನದಲ್ಲಿ ನಿತ್ಯನ ಧ್ಯಾನ: ಯಾರು ಈಕೆ ವಿಜಯಪ್ರಿಯಾ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ