ಮಗುವನ್ನು ದತ್ತು ನೀಡಲು ನಿರಾಕರಿಸಿದ ಪತ್ನಿಗೆ ಕಿರುಕುಳ: ಪತಿ ಸೇರಿ 6 ಮಂದಿಯ ವಿರುದ್ಧ FIR
Team Udayavani, Feb 17, 2021, 6:46 PM IST
ಥಾಣೆ: ಸಂಬಂಧಿಯೊಬ್ಬರಿಗೆ ತನ್ನ 5 ವರ್ಷದ ಮಗನನ್ನು ದತ್ತು ಕೊಡಲು ನಿರಾಕರಿಸಿದ ಮಹಿಳೆಗೆ ಕಿರುಕುಳ ನೀಡಿದ ಪ್ರಕರಣ ಸಂಬಂಧ ಆಕೆಯ ಪತಿ ಹಾಗೂ ಕುಟುಂಬದ ಐವರು ಸದಸ್ಯರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
26 ವರ್ಷದ ಮಹಿಳೆಗೆ 2015ರಲ್ಲಿ ವಿವಾಹವಾಗಿದ್ದು, 2016ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಕೆಯ ಪತಿಯ ಮನೆ ಥಾಣೆಯ ಭಿವಂಡಿಯಲ್ಲಿದೆ. ಮಗುವನ್ನು ಪತಿಯ ಸಹೋದರಿಗೆ ದತ್ತು ನೀಡುವಂತೆ ಪತಿಯ ಮನೆಯವರು ಮಹಿಳೆಗೆ ಒತ್ತಾಯಿಸತೊಡಗಿದ್ದರು. ಆದರೆ, ಆಕೆ ಮಗುವನ್ನು ನೀಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪತಿ ಮತ್ತು ಅತ್ತೆ-ಮಾವ, ಆಕೆಗೆ ನಿರಂತರ ಕಿರುಕುಳ ನೀಡಿದ್ದಲ್ಲದೆ, ವಿಚ್ಛೇದನದ ಬೆದರಿಕೆಯನ್ನೂ ಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದು, ಪತಿ ಮತ್ತು ಆತನ ಕುಟುಂಬದ ಐವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ:ವಾಟ್ಸ್ಯಾಪ್ ನಲ್ಲಿ ಅತಿ ಶೀಘ್ರದಲ್ಲಿ ಬರಲಿದೆ “ಲಾಗ್ ಔಟ್” ಆಪ್ಶನ್..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ
4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!
ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ
ರಾಘವ್ ಛಡ್ಡಾ-ಪರಿಣಿತಿ ಛೋಪ್ರಾ ಶೀಘ್ರವೇ ಎಂಗೇಜ್
ಉದ್ಯೋಗ ಖಾತ್ರಿ ಕೂಲಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರ್ಧಾರ