
ವಿದ್ಯಾರ್ಥಿನಿ ಅನಮಾನಸ್ಪದ ಸಾವು: ಸಮಗ್ರ ತನಿಖೆ ನಡೆಸಿನ್ಯಾಯ ಒದಗಿಸಲು ಆಗ್ರಹ
Team Udayavani, Jun 11, 2023, 5:05 AM IST

ಉಡುಪಿ: ಕುಂದಾಪುರ ವಿದ್ಯಾಸಂಸ್ಥೆಯೊಂದರ ವಸತಿ ನಿಲಯದ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ವಿದ್ಯಾರ್ಥಿನಿ ತನ್ವಿ ಸಾವಿನ ಪ್ರಕರಣ ಅನುಮಾನಸ್ಪದವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಲು ಪೋಷಕರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮೃತ ವಿದ್ಯಾರ್ಥಿನಿ ತಂದೆ ರೋಶನ್ ನಾರಾಯಣ ಪಾಲೆಕರ್ ಮಾತನಾಡಿ, ತನ್ವಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, 8ನೇ ತರಗತಿಯವರೆಗೆ ಕಾರವಾರದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಮುಗಿಸಿ 9ನೇ ತರಗತಿಗೆ ಕುಂದಾಪುರ ವಿದ್ಯಾಸಂಸ್ಥೆಗೆ ಸೇರಿಸಲಾಗಿತ್ತು. ಧೈರ್ಯವಂತೆ ಆಗಿದ್ದ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮನಃಸ್ಥಿತಿ ಹೊಂದಿರಲಿಲ್ಲ. ಪೊಲೀಸರು ಈ ಬಗ್ಗೆ ವ್ಯವಸ್ಥಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ವಿನಂತಿಸಿದರು.
ಕಾರವಾರ ಮೂಲದ ಕಾಜುಬಾರು ನಿವಾಸಿಯಾಗಿರುವ ತನ್ವಿ ಈ ವರ್ಷ ಇಲ್ಲಿ ಪ್ರವೇಶ ಪಡೆದಿದ್ದಳು. ಮನೆಯಿಂದ ಹೊರಡುವಾಗಲೂ ಖುಷಿಯಿಂದ ಹೊರಟಿದ್ದಳು. ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಮೇಲೆ ನಮಗೆ ಅನುಮಾನವಿಲ್ಲ. ಆದರೆ ಈ ಸಾವು ಅನುಮಾನದಿಂದ ಕೂಡಿದೆ ಎಂದು ತಂದೆ ರೋಶನ್ ತಿಳಿಸಿದರು.
ಕಾರವಾರ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ರಾಘು ನಾಯ್ಕ ಮಾತನಾಡಿ, ಆತ್ಮಹತ್ಯೆಗೆ ಶರಣಾಗುವಷ್ಟು ನೋವಿನಲ್ಲಿ ಆಕೆ ಇರಲಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಈ ಸಾವಿನಲ್ಲಿ ಅನುಮಾನವಿದ್ದು, ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಮೃತ ತನ್ವಿ ಅವರ ತಾಯಿ ರಂಜನಾ ರೋಶನ್ ಪಾಲೆಕರ್, ಜ್ಯೋತಿ, ಈಶ್ವರ ನಾಯ್ಕ, ದತ್ತರಾಮ, ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

India-Canada ಸಂಬಂಧ ಹದಗೆಡಿಸಲು ನಿಜ್ಜರ್ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ

Sandalwood: ‘ಟಿಆರ್‌ಪಿ ರಾಮ’ನಿಗಾಗಿ ಮತ್ತೇ ಬಂದ್ರು ಮಹಾಲಕ್ಷ್ಮೀ

World Tourism Day: ಚಾರಣದ ಹುಚ್ಚು ಆರೋಗ್ಯಕ್ಕೆ ಒಳ್ಳೆಯದೇ…ಆದರೆ ಮೈಮರೆಯಬೇಡಿ!