
ಗೃಹ ಜ್ಯೋತಿ: ಜೂ.15ರಿಂದ ನೋಂದಣಿ
ಉಚಿತ ವಿದ್ಯುತ್ ಯೋಜನೆ ಬಗ್ಗೆ ಪ್ರಶ್ನೆಗಳ ಮಹಾಪೂರ. ಇಲ್ಲಿದೆ ಅವುಗಳಿಗೆ ಉತ್ತರ
Team Udayavani, Jun 8, 2023, 8:00 AM IST

ಬೆಂಗಳೂರು: ಉಚಿತ ವಿದ್ಯುತ್ ಯೋಜನೆಯನ್ನು ಸರಕಾರ ಘೋಷಿಸಿದ ಬೆನ್ನಲ್ಲೇ ವಿದ್ಯುತ್ ಸರಬರಾಜು ಕಂಪೆನಿ(ಎಸ್ಕಾಂ)ಗಳಿಗೆ ಪ್ರಶ್ನೆಗಳ ಮಹಾಪೂರವೇ ಹರಿದುಬರುತ್ತಿದೆ. ಅವುಗಳಿಗೆ ಉತ್ತರ ಇಲ್ಲಿದೆ.
- ಈ ಯೋಜನೆ ಪಡೆಯಲು ಏನು ಮಾಡಬೇಕು?
ಇದನ್ನು ಪಡೆಯಲು ಗೃಹ ಬಳಕೆ ಗ್ರಾಹಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಇದರ ಲಿಂಕ್ ಅನ್ನು ಶೀಘ್ರ ಹಂಚಿಕೊಳ್ಳಲಾಗುವುದು. ಜೂ. 15ರಿಂದ ನೋಂದಣಿ ಪ್ರಾರಂಭವಾಗುತ್ತದೆ.
- ಯೋಜನೆ ಯಾವಾಗ ಜಾರಿಗೆ ಬರಲಿದೆ?
2023ರ ಜುಲೈನಲ್ಲಿ ಬಳಸಿದ ವಿದ್ಯುತ್ ಬಳಕೆಯನ್ನು ಆಗಸ್ಟ್ 2023ರಲ್ಲಿ ನೀಡುವ ಬಿಲ್‌ಗೆ ಅನ್ವಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು.
- ಈ ಯೋಜನೆಯನ್ನು ಆಫ್ಲೈನ್ ಮೂಲಕ ಪಡೆಯಬಹುದೇ?
ಹೌದು, ಎಲ್ಲ ಗೃಹಬಳಕೆ ಗ್ರಾಹಕರಿಗೆ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ..
- ಈ ಯೋಜನೆ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು ಯಾವುವು?
ಆಧಾರ್ ಸಂಖ್ಯೆ, ಬಿಲ್‌ನಲ್ಲಿ ನಮೂದಿಸ ಲಾಗಿರುವ ಗ್ರಾಹಕರ ಸಂಖ್ಯೆ/ ಖಾತೆ ಸಂಖ್ಯೆ, ಬಾಡಿಗೆ ಭೋಗ್ಯದ ಕರಾರು ಪತ್ರ (ಬಾಡಿಗೆ/ ಭೋಗ್ಯದಾರರಾಗಿದ್ದಲ್ಲಿ) ಸಲ್ಲಿಸುವುದು ಅಥವಾ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ಐಡಿ ಸಲ್ಲಿಸುವುದು.
- ಅರ್ಜಿ ಸಲ್ಲಿಸಲು ಶುಲ್ಕ ಇದೆಯೇ?
ಸೇವಾ ಸಿಂಧು ಪೋರ್ಟಲ್‌ನಲ್ಲಿ ಶುಲ್ಕ ಇಲ್ಲ.
- ಒಂದಕ್ಕಿಂತ ಹೆಚ್ಚು ವಿದ್ಯುತ್ ಮಾಪಕಗಳಿದ್ದರೆ ನಾನು ಈ ಯೋಜನೆಗೆ ಅರ್ಹನೇ?
ಇಲ್ಲ. ಒಬ್ಬ ಗ್ರಾಹಕರು ಒಂದು ಮೀಟರ್‌ಗೆ ಮಾತ್ರ ಯೋಜನೆಗೆ ಅರ್ಹರಾಗಿರುತ್ತಾರೆ.
- ಅರ್ಜಿ ಸಲ್ಲಿಸಿದ ಬಳಿಕ ಸ್ವೀಕೃತಿ ಇದೆಯೇ?
ಹೌದು. ಸೇವಾ ಸಿಂಧುವಿನಿಂದ ಸ್ವೀಕೃತಿ ಸಂದೇಶವನ್ನು ನೋಂದಾಯಿತ ಗ್ರಾಹಕರಿಗೆ ಇಮೇಲ…/ಖMಖ ಮೂಲಕ ಕಳುಹಿಸಲಾಗುತ್ತದೆ.
- ನಾನು ಅಪಾರ್ಟ್‌ಮೆಂಟ್ (ವಸತಿ ಸಮುಚ್ಚಯ) ಮಾಲಕನಾಗಿದ್ದರೆ ಅರ್ಜಿ ಸಲ್ಲಿಸಬಹುದೇ?
ಹೌದು, ಪ್ರತ್ಯೇಕ ವಿದ್ಯುತ್ ಮೀಟರ್‌ಗಳು ಲಭ್ಯವಿದ್ದರೆ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ನಾನು ಬಾಡಿಗೆದಾರ; ಬಿಲ್ ಮಾಲಕರ ಹೆಸರಿನಲ್ಲಿದೆ, ನನಗೂ ಯೋಜನೆ ಅನ್ವಯವಾಗುವುದೇ?
ಹೌದು, ಆಧಾರ್ ಸಂಖ್ಯೆ, ಬಿಲ್‌ನಲ್ಲಿ ನಮೂದಿಸಲಾಗಿ ರುವ ಗ್ರಾಹಕರ ಸಂಖ್ಯೆ/ ಖಾತೆ ಸಂಖ್ಯೆ, ಬಾಡಿಗೆ ಭೋಗ್ಯದ ಕರಾರು ಪತ್ರ (ಬಾಡಿಗೆ/ ಭೋಗ್ಯದಾರರಾಗಿದ್ದಲ್ಲಿ ಸಲ್ಲಿಸುವುದು ಅಥವಾ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ಐಡಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು).
- ಬಾಡಿಗೆ/ ಭೋಗ್ಯದಾರರಾಗಿ ನಾನು ನೋಂದಾಯಿ ಸಲು ಸಲ್ಲಿಸಬೇಕಾದ ದಾಖಲೆಗಳು ಯಾವುವು?
ಬಾಡಿಗೆ/ ಭೋಗ್ಯದಾರರು ವಿಳಾಸ ಪುರಾವೆಯೊಂದಿಗೆ ನೋಂದಾಯಿಸಿಕೊಳ್ಳಬಹುದು. ಸದರಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಆಧಾರ್ ಜತೆಗೆ ಬಾಡಿಗೆ/ ಭೋಗ್ಯದ ಕರಾರು ಪತ್ರವನ್ನು ಸಲ್ಲಿಸುವುದು.
– ನಾನು 2 ತಿಂಗಳ ಹಿಂದೆ ಮನೆಯನ್ನು ಬದಲಾಯಿಸಿ ದ್ದೇನೆ. ನನಗೆ ಲಾಭ ಸಿಗುತ್ತದೆಯೇ?
ಹೌದು, ಹೊಸ ಸಂಪರ್ಕಕ್ಕಾಗಿ ನಿಯಮಾವಳಿಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು.
– ನಾನು ಅಂಗಡಿಯ ಮಾಲಕನಾಗಿದ್ದು, ಈ ಯೋಜನೆಗಾಗಿ ಅರ್ಜಿ ಸಲ್ಲಿಸಬಹುದೇ?
ಇಲ್ಲ, ಈ ಯೋಜನೆ ಗೃಹಬಳಕೆದಾರರಿಗೆ ಮಾತ್ರ.
- ವಿದ್ಯುತ್ ಬಿಲ್‌ನ ಖಾತೆ ಸಂಖ್ಯೆಯನ್ನು ನಾನು ಎಲ್ಲಿ ಹುಡುಕಬೇಕು?
ವಿದ್ಯುತ್ ಬಿಲ್ಲಿನ ಖಾತೆ ಸಂಖ್ಯೆಯು ಪ್ರತಿ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಲಭ್ಯವಿರುತ್ತದೆ.
- ನನ್ನ ಆಧಾರ್ ಕರ್ನಾಟಕದ ಹೊರಗೆ ನೋಂದಾ ಯಿಸಲ್ಪಟ್ಟಿದೆ. ನಾನು ಈ ಯೋಜನೆ ಪಡೆಯಬಹುದೇ?
ಹೌದು, ನೀವು ಕರ್ನಾಟಕದ ವಿಳಾಸ ಪುರಾವೆಯೊಂದಿಗೆ ಕರ್ನಾಟಕದಲ್ಲಿ ಎಲ್ಲಿಯಾದರೂ ವಾಸಿಸುತ್ತಿದ್ದರೆ, ನೀವು ಯೋಜನೆಗೆ ಅರ್ಹರಾಗಿದ್ದೀರಿ.
- ನಾನು ವಿದ್ಯುತ್ ಬಿಲ್ ಬಾಕಿಯನ್ನು ಉಳಿಸಿಕೊಂಡಿದ್ದರೆ ಯೋಜನೆಗೆ ಅರ್ಹನೇ?
ಹೌದು. ಆದರೆ ಜೂನ್ 30ರ ವರೆಗಿನ ವಿದ್ಯುತ್ ಬಾಕಿಯನ್ನು 3 ತಿಂಗಳೊಳಗೆ ಪಾವತಿಸಬೇಕು, ಪಾವತಿಸದಿದ್ದರೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.
- ಒಂದು ವೇಳೆ ನಾನು ಈ ಯೋಜನೆಯ ಫಲಾನುಭವಿ ಯಾಗಿ, ನನಗೆ ನಿಗದಿಪಡಿಸಿರುವ ಉಚಿತ ವಿದ್ಯುತ್‌ಗಿಂತ ಜಾಸ್ತಿ ಯೂನಿಟ್ ಬಳಸಿದರೆ, ನಾನು ಆ ಹೆಚ್ಚಿನ ಯೂನಿಟ್‌ಗಳಿಗೆ ಪಾವತಿಸಬೇಕಾಗುತ್ತದೆ ಎಂಬುದು ನನಗೆ ತಿಳಿದಿದೆ. ಆದರೆ ಹೆಚ್ಚಿನ ಯೂನಿಟ್ ಬಳಕೆಯ ಬಿಲ್ ಪಾವತಿಸದಿದ್ದರೆ, ನನ್ನನ್ನು ಈ ಯೋಜನೆಯಿಂದ ಅನರ್ಹಗೊಳಿಸಲಾಗುವುದೇ?
ಇಲ್ಲ. ಬಾಕಿ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಬಾಕಿಯನ್ನು ಪಾವತಿಸಿದ ಬಳಿಕ ಪುನಃ ಈ ಯೋಜನೆಯ ಸೌಲಭ್ಯಗಳನ್ನು ಪಡೆಯಬಹುದು.
- ವಿದ್ಯುತ್ ಬಿಲ್ ನನ್ನ ದಿವಂಗತ ತಂದೆಯ ಹೆಸರಿನ ಲ್ಲಿದೆ? ಇದಕ್ಕಾಗಿ ನಾನು ಹೇಗೆ ಅರ್ಜಿ ಸಲ್ಲಿಸಬಹುದು?
ವಿದ್ಯುತ್ ಸಂಪರ್ಕವನ್ನು ನಿಮ್ಮ ಹೆಸರಿಗೆ ವರ್ಗಾ ಯಿಸಬೇಕು ಮತ್ತು ಅನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಹೆಸರಿನ ಬದಲಾವಣೆಯನ್ನು ಎಲ್ಲ ಉಪ ವಿಭಾಗಗಳಲ್ಲಿನ ಜನ ಸ್ನೇಹಿ ವಿದ್ಯುತ್ ಸೇವಾ ಕೌಂಟರ್‌ಗಳಲ್ಲಿ ಮಾಡಲಾಗುತ್ತದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka Bandh: ಕಾವೇರಿಗಾಗಿ ಜನಾಕ್ರೋಶ, ಹಲವೆಡೆ ಪ್ರತಿಭಟನೆ; ಬಿಗಿ ಪೊಲೀಸ್ ಭದ್ರತೆ

Congress ಜಗದೀಶ್ ಶೆಟ್ಟರ್‌ಗೆ ಆಪರೇಷನ್ ಹಸ್ತದ ಹೊಣೆ

Tomorrow ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದಿಲ್ಲಿಗೆ ?

JDS ಫ್ಯಾಮಿಲಿ ಟ್ರಸ್ಟ್; ಸಿಎಂ ಇಬ್ರಾಹಿಂ “ಭೂಗತ’: ಲಕ್ಷ್ಮಣ್ ವ್ಯಂಗ್ಯ

Cauvery issueತಮಿಳುನಾಡು ಸಿಎಂ ಭೇಟಿಗೆ 48 ತಾಸು ಕಾದು ಬರಿಗೈಯಲ್ಲಿ ಮರಳಿದ ಲೆಹರ್ ಸಿಂಗ್!
MUST WATCH
ಹೊಸ ಸೇರ್ಪಡೆ

Karnataka Bandh; ‘ನೀರು ನಿಲ್ಲಿಸದಿದ್ದರೆ ಡ್ಯಾಂ ಒಡೆಯುತ್ತೇವೆ’; ರಾಮನಗರದಲ್ಲಿ ಪ್ರತಿಭಟನೆ

Karnataka Bandh; ಚಿಕ್ಕಮಗಳೂರಿನಲ್ಲಿ ವ್ಯಾಪಕ ಬೆಂಬಲ; ಪ್ರತಿಕೃತಿ ದಹಿಸಿ ಪ್ರತಿಭಟನೆ

Canada; ಭಾರತದೊಂದಿಗೆ ಸ್ನೇಹಕ್ಕೆ ಸದಾ ಬದ್ಧ: ಬಿಕ್ಕಟ್ಟಿನ ನಡುವೆ ಟ್ರುಡೊ

Baana Daariyalli movie review; ಗಣೇಶ್- ಗುಬ್ಬಿ ಚಿತ್ರ ಹೇಗಿದೆ?

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ