
ಕೆರೆ ಸಂರಕ್ಷಣೆಗೆ “ಹಸುರು ಸರೋವರ” ಯೋಜನೆ
ಸಿಮೆಂಟ್, ಪ್ಲಾಸ್ಟಿಕ್ ಬಳಸದೆ ನೈಸರ್ಗಿಕವಾಗಿ ಅಭಿವೃದ್ಧಿ 100 ಕೆರೆಗಳ ಪುನರುಜ್ಜೀವ ಅಭಿಯಾನ
Team Udayavani, Jun 9, 2023, 7:49 AM IST

ದಾವಣಗೆರೆ: ಕೆರೆಗಳ ನಿರ್ಮಾಣವೆಂದರೆ ಕಾಂಕ್ರೀಟ್, ಕಬ್ಬಿಣದ ಸರಳುಗಳನ್ನು ಬಳಸಬೇಕು ಎನ್ನುವುದು ಈಗಿನವರ ಯೋಚನೆ. ಅದಕ್ಕೆ ತದ್ವಿರುದ್ಧವಾಗಿ ಇದ್ಯಾ ವು ದನ್ನು ಬಳಕೆ ಮಾಡದೆ ನೈಸರ್ಗಿಕವಾಗಿಯೇ ಕೆರೆಗಳನ್ನು ಅಭಿವೃದ್ಧಿಪಡಿಸಿ, ಅವುಗಳ ಸೌಂದರ್ಯ ಹೆಚ್ಚಿಸಲು ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ “ಹಸುರು ಸರೋವರ’ ಎಂಬ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.
ಪರಿಸರ ಸಂರಕ್ಷಣೆ, ಹಸುರೀಕರಣ ಮತ್ತು ಪ್ರದೇಶಾಭಿವೃದ್ಧಿಗಾಗಿ ಇಲಾ ಖೆಯು ನರೇಗಾ ಯೋಜನೆಯಡಿ ಜಲಸಂಜೀವಿನಿ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿರುವ “ಪಂಚ ಅಭಿ ಯಾನ’ಗಳಲ್ಲಿ ಹಸುರು ಸರೋವರ ಅಭಿಯಾನವೂ ಒಂದಾಗಿದೆ. ಇದು ಕೆರೆಗಳ ಅಭಿವೃದ್ಧಿಯನ್ನೂ ಹೆಚ್ಚು ಪರಿಸರ ಸ್ನೇಹಿಯಾಗಿಸಿದೆ. ಇಲಾಖೆಯು ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ನೂರು ಕೆರೆಗಳನ್ನು ಹಸುರು ಸರೋವರಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಂಡಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಈಗಾಗಲೇ “ಆಜಾದಿ ಕಾ ಅಮೃತ್ ಸರೋವರ’ ಯೋಜನೆಯಡಿ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಒಂದು ಎಕ್ರೆಗಿಂತ ಹೆಚ್ಚು ವಿಸೀ¤ರ್ಣದ 75 ಕೆರೆಗಳನ್ನು ಗುರುತಿಸಿ, ಅಭಿವೃದ್ಧಿಗೆ ಮುಂದಾಗಿದೆ. ಅಮೃತ್ ಸರೋವರಗಳ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಆಯ್ಕೆ ಮಾಡಿರುವ ಕೆರೆಗಳಲ್ಲಿಯೇ 100 ಕೆರೆಗಳನ್ನು ಆಯ್ಕೆ ಮಾಡಿಕೊಂಡು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಸುರು ಸರೋವರಗಳನ್ನಾಗಿ ಅಭಿವೃದ್ಧಿ ಪಡಿಸಲು ಇಲಾಖೆ ಯೋಜನೆ ಹಾಕಿಕೊಂಡಿದೆ.
ಅನುಷ್ಠಾನ ಹೇಗೆ?
ಹಸುರು ಸರೋವರ ಯೋಜನೆಯ ಅನುಷ್ಠಾನವೇ ವಿಶೇಷವಾಗಿದೆ. ಕೆರೆಯ ಒಳಾಂಗಣದ ಅತಿಇಳಿಜಾರಿನಲ್ಲಿ ಮಣ್ಣನ್ನು ಹಿಡಿದಿಟ್ಟುಕೊಳ್ಳುವ, ಜೀವ ವೈವಿಧ್ಯಕ್ಕೆ ಆಶ್ರಯ ನೀಡುವ ವಿವಿಧ ಜಾತಿಯ ಹುಲ್ಲು, ಗರಿಕೆ ಬೆಳೆಸಲಾಗುತ್ತದೆ. ಜತೆಗೆ ಸ್ಥಳೀಯವಾಗಿ ಲಭ್ಯವಿರುವ ಸಸಿಗಳನ್ನು ನಾಟಿ ಮಾಡಲಾಗುತ್ತದೆ. ಕೆರೆಯ ತೂಬು ನೈಸರ್ಗಿಕವಾಗಿ ಸುಧಾರಿಸಲಾಗುತ್ತದೆ. ಕೆರೆಗೆ ನೀರು ಸರಾಗವಾಗಿ ಹರಿದುಬರಲು ಸುತ್ತ ಕಚ್ಚಾ ನಾಲೆಗಳನ್ನು ನಿರ್ಮಿಸಲಾಗುತ್ತದೆ. ಕೆರೆಯ ಸುತ್ತ ತಂತಿ ಬೇಲಿ ಬದಲಿಗೆ ಜೈವಿಕ ಬೇಲಿ ನಿರ್ಮಿಸಲಾಗುತ್ತದೆ. ಜೀವ ವೈವಿಧ್ಯಕ್ಕೆ ಹಾನಿಯಾಗದ ರೀತಿಯಲ್ಲಿ ವೈಜ್ಞಾನಿಕವಾಗಿ ಹೂಳು ಎತ್ತಲಾಗುತ್ತದೆ. ಕೋಟಿ ವೃಕ್ಷ ಅಭಿಯಾನದಡಿ ಹಸಿರು ಸರೋವರಗಳ ಸುತ್ತ ಆಲ, ಅರಳಿ, ಬೇವು ಮರಗಳನ್ನು ನೆಡಲಾಗುತ್ತದೆ. ಜಾನುವಾರುಗಳಿಗೆ ನೀರು ಕುಡಿಯಲು ನೈಸರ್ಗಿಕ ವಸ್ತುಗಳನ್ನೇ ಉಪಯೋಗಿಸಿ ರ್‍ಯಾಂಪ್ ನಿರ್ಮಿಸಲಾಗುತ್ತದೆ.
ಏನಿದು ಹಸುರು ಸರೋವರ?
ಕೆರೆಗಳ ಅಭಿವೃದ್ಧಿಯಲ್ಲಿ ಸಿಮೆಂಟ್ ಕಾಂಕ್ರೀಟ್, ಪ್ಲಾಸ್ಟಿಕ್ ಬಳಸದೆ ಕೇವಲ ನೈಸರ್ಗಿಕವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಅಭಿವೃದ್ಧಿಪಡಿಸುವ ಕೆರೆಗಳೇ ಹಸುರು ಸರೋವರಗಳು.
ಉದ್ದೇಶವೇನು?
ಹಸುರು ಸರೋವರಗಳ ಅಭಿವೃದ್ಧಿಯಿಂದ ಜೀವ ವೈವಿಧ್ಯದ ಸಂರಕ್ಷಣೆ, ಪರಿಸರ ರಕ್ಷಣೆ, ನೀರಿನ ಗುಣಮಟ್ಟ ಸುಧಾರಣೆ, ಅಂತರ್ಜಲ ಮಟ್ಟ ಹೆಚ್ಚಿಸುವುದು, ನಿಸರ್ಗ ಮಹತ್ವ ಮತ್ತು ಪಾರಂಪರಿಕ ಜೀವನದ ಉದ್ದೇಶ ಸಾರುವುದು, ಮಣ್ಣಿನ ಸವೆತ ನಿಯಂತ್ರಣ, ಹವಾಮಾನ ವೈಪರೀತ್ಯದ ಪರಿಣಾಮಗಳ ಪರಿಹಾರ, ಶೈಕ್ಷಣಿಕ ಪ್ರವಾಸ ಹಾಗೂ ಸಂಶೋಧನೆಗೆ ಸಹಕಾರಿಯಾಗುತ್ತದೆ ಎಂಬ ಮಹದುದ್ದೇಶದೊಂದಿಗೆ ಇಲಾಖೆ ಈ ಹಸಿರು ಸರೋವರ ಅಭಿಯಾನ ಹಮ್ಮಿಕೊಂಡಿದೆ.
ಹಸುರು ಸರೋವರ ಅಭಿಯಾನದಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 100 ಕೆರೆಗಳನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಅದರಂತೆ ಜಿಲ್ಲೆಯ ಪ್ರತಿಯೊಂದು ತಾಲೂಕಿಗೆ ಒಂದರಂತೆ ಹಸುರು ಸರೋವರ ಅಭಿವೃದ್ಧಿಪಡಿಸಲಾಗುವುದು.
-ಸುರೇಶ್ ಇಟ್ನಾಳ್, ದಾವಣಗೆರೆ ಜಿ.ಪಂ. ಸಿಇಒ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka Bandh: ಕಾವೇರಿಗಾಗಿ ಜನಾಕ್ರೋಶ, ಹಲವೆಡೆ ಪ್ರತಿಭಟನೆ; ಬಿಗಿ ಪೊಲೀಸ್ ಭದ್ರತೆ

Congress ಜಗದೀಶ್ ಶೆಟ್ಟರ್‌ಗೆ ಆಪರೇಷನ್ ಹಸ್ತದ ಹೊಣೆ

Tomorrow ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದಿಲ್ಲಿಗೆ ?

JDS ಫ್ಯಾಮಿಲಿ ಟ್ರಸ್ಟ್; ಸಿಎಂ ಇಬ್ರಾಹಿಂ “ಭೂಗತ’: ಲಕ್ಷ್ಮಣ್ ವ್ಯಂಗ್ಯ

Cauvery issueತಮಿಳುನಾಡು ಸಿಎಂ ಭೇಟಿಗೆ 48 ತಾಸು ಕಾದು ಬರಿಗೈಯಲ್ಲಿ ಮರಳಿದ ಲೆಹರ್ ಸಿಂಗ್!
MUST WATCH
ಹೊಸ ಸೇರ್ಪಡೆ

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ

ICC World Cup 2023; ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಆರ್.ಅಶ್ವಿನ್ ಗೆ ಬುಲಾವ್

Karnataka Bandh: ಕಾವೇರಿಗಾಗಿ ಜನಾಕ್ರೋಶ, ಹಲವೆಡೆ ಪ್ರತಿಭಟನೆ; ಬಿಗಿ ಪೊಲೀಸ್ ಭದ್ರತೆ

Sept 29: ವಿಶ್ವ ಹೃದಯ ದಿನ: ಹೃದಯ ಆರೋಗ್ಯಕ್ಕೆ ಸಹಕಾರಿ ಆಹಾರಾಭ್ಯಾಸಗಳು

UK ವಿಶ್ವದಲ್ಲೇ ಬಲಿಷ್ಠ ಲೇಸರ್ ನಿರ್ಮಾಣ? ಸೂರ್ಯನಿಗಿಂತಲೂ ಶತಕೋಟಿ ಪಟ್ಟು ಪ್ರಕಾಶಮಾನ