ಓದು ಎಂದು ಬುದ್ಧಿವಾದ ಹೇಳಿದ್ದಕ್ಕೆ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ
Team Udayavani, Apr 29, 2022, 6:07 PM IST
ಹಾವೇರಿ: ತಾಲೂಕಿನ ಗುತ್ತಲ ಸಮೀಪದ ಹೊಸಮೇಲ್ಮುರಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಹೊಸಮೇಲ್ಮುರಿಯ ಪಕ್ಕಿರೇಶ ಸುರೇಶ ಅರಳಿ (18) ಮೃತ ಯುವಕ.
ವಿದ್ಯಾರ್ಥಿ ಗುರುವಾರ ಪರೀಕ್ಷೆ ಬರೆದು ಬಂದಿದ್ದ. ಸಂಜೆಯ ವೇಳೆ ಪಾಲಕರು ಕಾಲ ಹರಣ ಮಾಡದೇ ಓದಲು ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ಬೇಜಾರು ಮಾಡಿಕೊಂಡು ಅವರ ಹೊಲದಲ್ಲಿನ ರೇಷ್ಮೆ ಮನೆಯಲ್ಲಿ ಶುಕ್ರವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಗುತ್ತಲ ಠಾಣೆಯ ಪಿಎಸ್ಐ ಜಗದೀಶ್. ಜಿ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.