
ಏಳು ಪಂದ್ಯಗಳಿಗೆ ಹೇಝಲ್‌ವುಡ್ ಇಲ್ಲ
Team Udayavani, Apr 1, 2023, 7:29 AM IST

ಮೆಲ್ಬರ್ನ್: ಆರ್‌ಸಿಬಿಯ ಪ್ರಧಾನ ವೇಗಿ ಜೋಶ್ ಹೇಝಲ್‌ವುಡ್ ಹಿಮ್ಮಡಿ ನೋವಿನಿಂದಾಗಿ ಮೊದಲ 7 ಪಂದ್ಯಗಳಿಗೆ ಲಭ್ಯರಿರುವುದಿಲ್ಲ. ಜತೆಗೆ ಆಲ್‌ರೌಂಡರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ ಸೇವೆಯೂ ಮೊದಲ ಪಂದ್ಯಕ್ಕೆ ಸಿಗುತ್ತಿಲ್ಲ. ಚೊಚ್ಚಲ ಟ್ರೋಫಿಯ ನಿರೀಕ್ಷೆಯಲ್ಲಿರುವ ಬೆಂಗಳೂರು ತಂಡಕ್ಕೆ ಇದರಿಂದ ಭಾರೀ ಹಿನ್ನಡೆಯಾಗಿದೆ.
ಜೋಶ್ ಹೇಝಲ್‌ವುಡ್ ಎ. 14ರ ಹೊತ್ತಿಗೆ ಭಾರತಕ್ಕೆ ಆಗಮಿಸಲಿದ್ದಾರೆ. ಅನಂತರ ಒಂದು ವಾರ “ಮ್ಯಾಚ್ ಫಿಟ್”ಗೋಸ್ಕರ ಕಾಯಬೇಕಾಗುತ್ತದೆ. ಹೀಗಾಗಿ ಅವರು ಕನಿಷ್ಠ 7 ಪಂದ್ಯಗಳಿಂದ ಬೇರ್ಪಡು ವುದು ಅನಿವಾರ್ಯ ಎಂಬುದೊಂದು ಲೆಕ್ಕಾಚಾರ.
“ಮುಂದಿನ ಎರಡು ವಾರಗಳ ಕಾಲ ಹಿಮ್ಮಡಿ ಸ್ಥಿತಿ ಹೇಗಿದ್ದೀತು ಎಂಬುದು ಮುಖ್ಯ. ಹೀಗಾಗಿ ಎ. 14ರ ಹೊತ್ತಿಗೆ ನಾನು ಹೊರಡುತ್ತೇನೆ. ಭಾರತಕ್ಕೆ ಕಾಲಿಟ್ಟೊಡನೆಯೇ ನನಗೆ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದು. ಇದಕ್ಕೆ ಇನ್ನೂ ಒಂದು ವಾರ ಬೇಕಾಗಬಹುದು’ ಎಂಬುದಾಗಿ ಹೇಝಲ್‌ವುಡ್ “ದಿ ಏಜ್”ಪತ್ರಿಕೆಗೆ ತಿಳಿಸಿದ್ದಾರೆ.
ಭಾರತದಲ್ಲಿ ಆಡಲಾದ ಕಳೆದ ಬೋರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಿಂದಲೂ ಹೇಝಲ್‌ವುಡ್ ಹೊರಗುಳಿದಿದ್ದರು. ಮುಂದಿನ ಆ್ಯಶಸ್‌ಗೆ ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ಸಜ್ಜಾಗು ವುದು ಅವರ ಯೋಜನೆ.
ಮ್ಯಾಕ್ಸ್‌ವೆಲ್ ಗೈರು
ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ರವಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ”ನಲ್ಲಿ ಆಡಲಿದೆ. ಆಸ್ಟ್ರೇಲಿಯದ ಮತ್ತೋರ್ವ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಆಡುವುದು ಅನುಮಾನ. ಹಾಗೆಯೇ ಶ್ರೀಲಂಕಾದ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ವನಿಂದು ಹಸರಂಗ ಕೂಡ ಮೊದಲ ಪಂದ್ಯಕ್ಕೆ ಲಭ್ಯವಾಗುತ್ತಿಲ್ಲ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Junior Asia Cup hockey: ದಾಖಲೆ 4ನೇ ಸಲ ಪ್ರಶಸ್ತಿ ಗೆದ್ದ ಭಾರತ

Thailand Open Badminton: ಸೆಮಿಫೈನಲ್ ಪ್ರವೇಶಿಸಿದ ಲಕ್ಷ್ಯ ಸೇನ್; ಕಿರಣ್ ಔಟ್

Wrestlers protest : 1983ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಬೆಂಬಲ

World Test Championship Final: ಐಪಿಎಲ್ ಆಟ ಟೆಸ್ಟ್ ನಲ್ಲೂ ಕಾಣುತ್ತಾ?

ಮಹಿಳಾ Asia Cup ಗೆ ಭಾರತ ಎ ತಂಡ ಪ್ರಕಟ: ಕರ್ನಾಟಕದ ಶ್ರೇಯಾಂಕಾ ಪಾಟೀಲ್ ಗೆ ಸ್ಥಾನ
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
