ಹಿಂದೂ-ಹಿಂದುತ್ವ ಒಂದೇ ನಾಣ್ಯದ ಎರಡು ಮುಖ : ವಿಪಕ್ಷಗಳ ವಿರುದ್ಧ ಸಿ.ಟಿ.ರವಿ ಕಿಡಿ

ಸೊರಬ ಬಿಜೆಪಿಯಲ್ಲಿ ಗೊಂದಲ? ; ಚುನಾವಣ ಸಮಯದಲ್ಲಿ ಸಾಮಾನ್ಯ ಎಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Team Udayavani, Feb 6, 2023, 4:45 PM IST

CT RAVI 2

ಶಿವಮೊಗ್ಗ : ”ಹಿಂದೂ-ಹಿಂದುತ್ವ ಅನ್ನೋದು ಒಂದೇ ನಾಣ್ಯದ ಎರಡು ಮುಖ.ಸನಾತನ ಧರ್ಮ ಬೇರೆ ಅಲ್ಲ. ಹಿಂದೂ, ಹಿಂದುತ್ವ ಬೇರೆ ಅಲ್ಲ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೋಮವಾರ ನೀಡಿದ್ದಾರೆ.

ಹಿಂದುತ್ವದ ಕುರಿತು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸೊರಬದಲ್ಲಿ ಪ್ರತಿಕ್ರಿಯಿಸಿ , ಹಿಂದುತ್ವ ಎಲ್ಲವನ್ನೂ ಒಪ್ಪಿಕೊಳ್ಳುವಂತದ್ದು.ದೇವನೊಬ್ಬ ನಾಮ ಹಲವು ಎಂಬ ತತ್ವ ಹಿಂದುತ್ವದಲ್ಲಿದೆ. ಹಿಂದೂ ಎಲ್ಲಾರಲ್ಲೂ ಕೂಡ ಸಮಾನತೆ ಬಯಸುತ್ತಾನೆ. ಇವರು ಸಮಾನತೆಯನ್ನು ಬಯಸಲ್ಲ. ಜಾತಿ ಸಮಾನತೆ ಬಯಸಲ್ಲ. ಸಿದ್ದರಾಮಯ್ಯ ಹಿಂದುತ್ವ ಒಪ್ಪಲ್ಲ ಅಂದರೆ ಸಮಾನತೆ ಬೇಕಾಗಿಲ್ಲ ಎಂದು ಅರ್ಥ.ಅವರಿಗೆ ಜಾತೀಯತೆ, ಅಸ್ಪೃಶ್ಯತೆ ಬೇಕು.ಅದಕ್ಕಾಗಿಯೇ ಅವರು ಪರಮೇಶ್ವರ್ ಸೋಲಿಸುವ ಕೆಲಸ ಮಾಡಿದರು ಎಂದು ಕಿಡಿ ಕಾರಿದರು.

ಸಮಾನತೆ ಬಯಸದ ಅವರು ಹಿಂದುತ್ವ ಒಪ್ಪಿಕೊಳ್ಳದಿರುವುದು ಸರಿ ಇದೆ.ಜಾತಿ ಬೇಳೆ ಬೇಯಿಸುವ ರಾಜಕೀಯ ಮಾ ಡುತ್ತಿರುವುದು ಅವರ ಹೇಳಿಕೆಯಿಂದ ಸ್ಪಷ್ಟ ಎಂದರು.

ಸೊರಬದಲ್ಲಿ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣ ಸಮಯದಲ್ಲಿ ಇದು ಸಾಮಾನ್ಯ, ಎಲ್ಲವನ್ನು ಮೀರಿ, ಬಿಜೆಪಿ ಇಲ್ಲಿ ಗೆಲ್ಲುತ್ತದೆ. ರಾಜ್ಯ ಸಮಿತಿ ಚುನಾವಣೆಗೆ ಅಭ್ಯರ್ಥಿ ಪಟ್ಟಿ ಕಳುಹಿಸುತ್ತದೆ. ಟಿಕೆಟ್ ನೀಡುವ ಬಗ್ಗೆ ಪಾರ್ಲಿಮೆಂಟ್ರಿ ಬೋರ್ಡ್ ನಿರ್ಧಾರ ಮಾಡುತ್ತದೆ. ನಮ್ಮದು ಜೆಡಿಎಸ್ ರೀತಿ ಫ್ಯಾಮಿಲಿ ಶೋ ಅಲ್ಲ ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಬ್ರಾಹ್ಮಣ ಸಮುದಾಯದ ಕುರಿತು ಮಾಜಿ ಸಿಎಂ ಹೆಚ್ ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಬೆಂಬಲ ನೋಡಿ ಕುಮಾರಸ್ವಾಮಿಗೆ ಹತಾಶೆ ಆಗಿದೆ. ಕಳೆದ ಬಾರಿ ಹಾಸನದಲ್ಲಿ ಗೆದ್ದಿದ್ದೇ ಅವರಿಗೆ ಅರಗಿಸಿಕೊಳ್ಳಲಾಗಲಿಲ್ಲ.ಈ ಬಾರಿ ಇನ್ನೂ ನಾಲ್ಕು ಸ್ಥಾನ ಗೆಲ್ಲುತ್ತೇ ಅನ್ನುವ ವರದಿ ಅವರಿಗೆ ಸಿಕ್ಕಿದೆ. ಹಾಸನದಲ್ಲೂ ಈ ಬಾರಿ 7 ರಲ್ಲಿ 5 ಕ್ಷೇತ್ರ ಗೆಲ್ಲುತ್ತೇವೆ. ಹೀಗಾಗಿ ನಿರಾಶೆಯಿಂದ ಮಾತನಾಡುತ್ತಿದ್ದಾರೆ ಎಂದರು.

ಸಾಮಾನ್ಯ ಕಾರ್ಯಕರ್ತನಿಗೂ ಸಿಎಂ, ಪಿಎಂ ಆಗುವ ಯೋಗ್ಯತೆ ಇದೆ. ಚಹಾ ಮಾರುವ ಮೋದಿ ಪ್ರಧಾನಿ, ರೈತನ ಮಗ ಯಡಿಯೂರಪ್ಪ ಸಿಎಂ ಆದರು. ಆದರೆ ಅವರ ಪಕ್ಷದಲ್ಲಿ ಹಾಗೇ ಇಲ್ಲ.ಹಾಸನ ಅಂದರೇ ಭವಾನಿ ರೇವಣ್ಣ ಕ್ಯಾಂಡಿಡೇಟ್ ಆಗಬೇಕು. ಎಂಎಲ್ಸಿ ಟಿಕೆಟ್ ಸೂರಜ್, ಎಂಪಿ ಟಿಕೆಟ್ ಬೇಕು ಅಂದರೆ ಪ್ರಜ್ವಲ್ ರೇವಣ್ಣರಿಗೆ ಕೊಡಬೇಕು. ರಾಮನಗರ ಬಿಟ್ಟು ಕೊಡಲು ಅನಿತಾ ಕುಮಾರಸ್ವಾಮಿ ಅವರಿಗೆ ಯೋಗ್ಯತೆ ಇರೋದು, ಬಿಟ್ಟು ಕೊಟ್ಟರೂ ನಿಖಿಲ್ ಕುಮಾರಸ್ವಾಮಿ ಅವರಿಗೆ ಮಾತ್ರ.ಮತ್ತೆ ಅದನ್ನೆಲ್ಲಾ ಕರಿಯೋದು ತ್ಯಾಗ ಎಂದು. ಅವರ ಪಕ್ಷದಲ್ಲಿ ದೊಡ್ಡಗೌಡ್ರು, ಸಣ್ಣಗೌಡ್ರು, ಮರೀಗೌಡ್ರಿಗೆ ಮಾತ್ರ ಅವಕಾಶ ಇರುವುದು ಎಂದು ಕಿಡಿ ಕಾರಿದರು.

ಟಾಪ್ ನ್ಯೂಸ್

ಪ್ರತ್ಯೇಕತವಾದಿ ಅಮೃತ್‌ ಪಾಲ್‌ ಪರಾರಿ? ಉತ್ತರಾಖಂಡದಲ್ಲೂ ಪೊಲೀಸರ ಶೋಧ

ಪ್ರತ್ಯೇಕತವಾದಿ ಅಮೃತ್‌ ಪಾಲ್‌ ಪರಾರಿ? ಉತ್ತರಾಖಂಡದಲ್ಲೂ ಪೊಲೀಸರ ಶೋಧ

ಬಹ್ರೈನ್‌ನಿಂದ ಮಂಗಳೂರು ವಿಮಾನ ಬರಲು ಬರೋಬ್ಬರಿ 2 ದಿನ!

ಬಹ್ರೈನ್‌ನಿಂದ ಮಂಗಳೂರು ವಿಮಾನ ಬರಲು ಬರೋಬ್ಬರಿ 2 ದಿನ!

ಮೂಲರಪಟ್ನ ಮಸೀದಿ: ಬರೋಬ್ಬರಿ 4.33 ಲಕ್ಷ ರೂ.ಗೆ ಹಲಸು ಏಲಂ!

ಮೂಲರಪಟ್ನ ಮಸೀದಿ: ಬರೋಬ್ಬರಿ 4.33 ಲಕ್ಷ ರೂ.ಗೆ ಹಲಸು ಏಲಂ!

shree bajji

ಐಪಿಎಲ್‌ ಕಮೆಂಟ್ರಿ ತಂಡದಲ್ಲಿ ಜತೆಯಾದ ಭಜ್ಜಿ, ಶ್ರೀಶಾಂತ್‌

ಇನ್ನು ಜಿಪಿಎಸ್‌ ಮೂಲಕ ಟೋಲ್‌ ಸಂಗ್ರಹ: ಸಚಿವ ಗಡ್ಕರಿ

ಇನ್ನು ಜಿಪಿಎಸ್‌ ಮೂಲಕ ಟೋಲ್‌ ಸಂಗ್ರಹ: ಸಚಿವ ಗಡ್ಕರಿ

harman smrithi

“ಮಹಿಳಾ ದಿ ಹಂಡ್ರೆಡ್‌”ನಲ್ಲಿ ಹರ್ಮನ್‌, ಸ್ಮತಿ ಆಟ

ಶನಿವಾರದ ರಾಶಿಫಲ: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನ ಲಾಭ, ಆರೋಗ್ಯ ಸುದೃಢವಾಗಲಿದೆ

ಶನಿವಾರದ ರಾಶಿಫಲ: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನ ಲಾಭ, ಆರೋಗ್ಯ ಸುದೃಢವಾಗಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bjpದಾವಣಗೆರೆಯಲ್ಲಿಂದು ವಿಜಯಸಂಕಲ್ಪ ಯಾತ್ರೆ ಸಮಾರೋಪ

ದಾವಣಗೆರೆಯಲ್ಲಿಂದು ವಿಜಯಸಂಕಲ್ಪ ಯಾತ್ರೆ ಸಮಾರೋಪ

ಯಾವುದೇ ಕ್ಷಣದಲ್ಲಾದರೂ ವೇಳಾಪಟ್ಟಿ ಘೋಷಣೆ; ಸನ್ನದ್ಧರಾಗಿರಲು ಸೂಚನೆ

ಯಾವುದೇ ಕ್ಷಣದಲ್ಲಾದರೂ ವೇಳಾಪಟ್ಟಿ ಘೋಷಣೆ; ಸನ್ನದ್ಧರಾಗಿರಲು ಸೂಚನೆ

ಐಪಿಎಸ್‌ ಅಧಿಕಾರಿ ರೂಪಾಗೆ ಕೋರ್ಟ್‌ ನೋಟಿಸ್‌

ಐಪಿಎಸ್‌ ಅಧಿಕಾರಿ ರೂಪಾಗೆ ಕೋರ್ಟ್‌ ನೋಟಿಸ್‌

ರಾಜ್ಯವು ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ: ಸಿಎಂ ಶ್ಲಾಘನೆ

ರಾಜ್ಯವು ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ: ಸಿಎಂ ಶ್ಲಾಘನೆ

ಮಮತಾ ಬ್ಯಾನರ್ಜಿ ಭೇಟಿ ಮಾಡಿದ ಕುಮಾರಸ್ವಾಮಿ

ಮಮತಾ ಬ್ಯಾನರ್ಜಿ ಭೇಟಿ ಮಾಡಿದ ಕುಮಾರಸ್ವಾಮಿ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

ಪ್ರತ್ಯೇಕತವಾದಿ ಅಮೃತ್‌ ಪಾಲ್‌ ಪರಾರಿ? ಉತ್ತರಾಖಂಡದಲ್ಲೂ ಪೊಲೀಸರ ಶೋಧ

ಪ್ರತ್ಯೇಕತವಾದಿ ಅಮೃತ್‌ ಪಾಲ್‌ ಪರಾರಿ? ಉತ್ತರಾಖಂಡದಲ್ಲೂ ಪೊಲೀಸರ ಶೋಧ

ಬಹ್ರೈನ್‌ನಿಂದ ಮಂಗಳೂರು ವಿಮಾನ ಬರಲು ಬರೋಬ್ಬರಿ 2 ದಿನ!

ಬಹ್ರೈನ್‌ನಿಂದ ಮಂಗಳೂರು ವಿಮಾನ ಬರಲು ಬರೋಬ್ಬರಿ 2 ದಿನ!

ಮೂಲರಪಟ್ನ ಮಸೀದಿ: ಬರೋಬ್ಬರಿ 4.33 ಲಕ್ಷ ರೂ.ಗೆ ಹಲಸು ಏಲಂ!

ಮೂಲರಪಟ್ನ ಮಸೀದಿ: ಬರೋಬ್ಬರಿ 4.33 ಲಕ್ಷ ರೂ.ಗೆ ಹಲಸು ಏಲಂ!

shree bajji

ಐಪಿಎಲ್‌ ಕಮೆಂಟ್ರಿ ತಂಡದಲ್ಲಿ ಜತೆಯಾದ ಭಜ್ಜಿ, ಶ್ರೀಶಾಂತ್‌

ಇನ್ನು ಜಿಪಿಎಸ್‌ ಮೂಲಕ ಟೋಲ್‌ ಸಂಗ್ರಹ: ಸಚಿವ ಗಡ್ಕರಿ

ಇನ್ನು ಜಿಪಿಎಸ್‌ ಮೂಲಕ ಟೋಲ್‌ ಸಂಗ್ರಹ: ಸಚಿವ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.