ಭಟ್ಕಳ ಕಡಲಿನಲ್ಲಿ ಕಾಣಿಸಿಕೊಂಡ ಬೃಹತ್ ತಿಮಿಂಗಿಲ; ವಿಡಿಯೋ ವೈರಲ್
Team Udayavani, Nov 20, 2021, 5:01 PM IST
ಭಟ್ಕಳ : ಇಲ್ಲಿನ ಸಮುದ್ರದಲ್ಲಿ ಬೃಹತ್ ತಿಮಿಂಗಿಲವೊಂದು ಕಾಣಿಸಿಕೊಂಡು ಮೀನುಗಾರರಿಗೆ ಆತಂಕ ಮೂಡಿಸಿದೆ.
ಸಮುದ್ರದಲ್ಲಿ ತಿಮಿಂಗಿಲ ನೆಗೆಯುವುದನ್ನು ಭಟ್ಕಳದ ಮೀನುಗಾರರು ಚಿತ್ರೀಕರಿಸಿದ್ದು, ವಿಡಿಯೋ ವೈರಲ್ ಆಗಿದೆ.
ಮೀನುಗಾರಿಕಾ ಬೋಟ್ ವೊಂದರ ಸಮೀಪದಲ್ಲಿ ತಿಮಿಂಗಿಲ ಕಾಣಿಸಿಕೊಂಡಿದೆ.
ಸುದ್ದಿ ಜನರಲ್ಲಿ ವ್ಯಾಪಕ ಗೊಂದಲಕ್ಕೆ ಕಾರಣವಾಯಿತಾದರೂ ವಿಡಿಯೋ ಸಾಕ್ಷ್ಯ ದೊರಕಿದ್ದು ತಿಮಿಂಗಿಲ ಕಾಣಿಸಿಕೊಂಡಿರುವುದನ್ನು ನಂಬಲು ಸಾಧ್ಯವಾಯಿತು.
ವರದಿಗಳ ಪ್ರಕಾರ,ಭಟ್ಕಳದ ಕಡಲ ತೀರದಿಂದ ದೂರ ಸಮುದ್ರದಲ್ಲಿ ತಿಮಿಂಗಿಲ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.