ಕಮಲ್ ಹಾಸನ್ಗೆ IIFA ಗೌರವ
Team Udayavani, May 22, 2023, 7:56 AM IST
ಬಹುಭಾಷಾ ನಟ ಕಮಲ್ ಹಾಸನ್ ಅವರಿಗೆ ಅಬುಧಾಬಿಯ ಯಾಸ್ ದ್ವೀಪದಲ್ಲಿ ಮೇ 26, 27ರಂದು ನಡೆಯಲಿರುವ ಐಫಾ ಅವಾರ್ಡ್ ಕಾರ್ಯಕ್ರಮದಲ್ಲಿ “ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುತ್ತಮ ಸಾಧಕ” ಗೌರವ ನೀಡಿ ಸನ್ಮಾನಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ, ತಾರಾ ದಂಪತಿಗಳಾದ ರಿತೇಶ್ ದೇಶ್ಮುಖ್, ಜೆನಿಲಿಯಾ ಡಿ’ ಸೋಜ ಅವರನ್ನು ಗೌರವಿಸಲಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಮಲ್ ಹಾಸನ್ ಗೌರವ ಸ್ವೀಕರಿಸಲು ಕಾತರಗೊಂಡಿದ್ದೇನೆ. ಅದನ್ನು ವಿನೀತನಾಗಿ ಸ್ವೀಕರಿಸಲಿದ್ದೇನೆ ಎಂದಿದ್ದಾರೆ.