
ಬೆಳಾಲು ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮದ್ಯ ವಶ
Team Udayavani, Mar 22, 2023, 6:08 AM IST

ಬೆಳ್ತಂಗಡಿ: ಬೆಳಾಲು ಗ್ರಾಮದ ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮದ್ಯವನ್ನು ಧರ್ಮಸ್ಥಳ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.
ಧರ್ಮಸ್ಥಳದ ಪಿಎಸ್‌ಐ ಅನಿಲ್ ಕುಮಾರ್ ನೇತೃತ್ವದ ತಂಡ ಖಚಿತ ಮಾಹಿತಿಯ ಆಧಾರದಲ್ಲಿ ಬೆಳಾಲಿನ ಎರ್ಮಲದ ಶ್ರೀಧರ ಪೂಜಾರಿಯವರ ಶೇಂದಿ ಅಂಗಡಿಗೆ ದಾಳಿ ನಡೆಸಿದ ವೇಳೆ ಅಂಗಡಿಯಲ್ಲಿದ್ದ ವ್ಯಕ್ತಿ ಹಿಂಬದಿ ಬಾಗಿಲಿನಿಂದ ಓಡಿ ಹೋಗಿದ್ದು, ಪೊಲೀಸರು ಬೆನ್ನಟ್ಟಿದರೂ ರಬ್ಬರ್ ತೋಟಕ್ಕೆ ನುಗ್ಗಿ ಪರಾರಿಯಾಗಿದ್ದಾನೆ. ಅನಂತರ ಅಂಗಡಿಯನ್ನು ಜಾಲಾಡಿದ ಪೊಲೀಸರಿಗೆ ಅಂಗಡಿಯಲ್ಲಿ ಯಾವುದೇ ದಾಖಲಾತಿ ಇಲ್ಲದೆ ಅಕ್ರಮವಾಗಿ ಶೇಖರಿಸಿಟ್ಟ ಮದ್ಯ ಸಿಕ್ಕಿದೆ.
ವ್ಯಾಪಾರ ಮಾಡಲೆಂದು ತಂದಿರಿಸಿದ್ದು ಎನ್ನಲಾಗಿರುವ 5.4 ಲೀ. ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಪ್ಲಾಸ್ಟಿಕ್ ಚೀಲದಲ್ಲಿ 180 ಎಂಎಲ್‌ನ 30 ಸ್ಯಾಚೆಟ್‌ಗಳು ಕಂಡು ಬಂದಿದ್ದು, ಸ್ವಂತ ಉಪಯೋಗಕ್ಕೆ ಬಳಸುವ ಮಿತಿಗಿಂತ ಜಾಸ್ತಿಯಿರುವುದರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮದ್ಯದ ಮೌಲ್ಯ 2,250 ರೂ. ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
