
ಶ್ರೀಲಂಕಾಗೆ ಐಎಂಎಫ್ 3 ಬಿಲಿಯನ್ ಡಾಲರ್ ನೆರವು
Team Udayavani, Mar 22, 2023, 9:22 AM IST

ವಾಷಿಂಗ್ಟನ್/ಕೊಲೊಂಬೊ: ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಶ್ರೀಲಂಕಕ್ಕೆ ಐಎಂಎಫ್‌ನಿಂ ದ 3 ಬಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ನೆರವು ಪ್ರಕಟಿಸಲಾಗಿದೆ. ಈ ಬಗ್ಗೆ ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ನಿರ್ಧಾರವನ್ನು ದ್ವೀಪರಾಷ್ಟ್ರದ ಸರ್ಕಾರ ಸ್ವಾಗತಿಸಿದ್ದು, “ಇದೊಂದು ಐತಿಹಾಸಿಕ ಘಟ್ಟ” ಎಂದು ಹೇಳಿದೆ. ವಿಸ್ತೃತ ನಿಧಿ ಸೌಲಭ್ಯದಡಿ ಮುಂದಿನ 48 ತಿಂಗಳಲ್ಲಿ 3 ಬಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವ ಮೂಲಕ ಆ ದೇಶದ ವಿದೇಶಿ ಮೀಸಲು ವಿನಿಮಯ ನಿಧಿಯನ್ನು ಪುನಸ್ಥಾಪಿಸಲೂ ಅನುಕೂಲವಾಗಲಿದೆ.
2022ರ ಜುಲೈನಿಂದ ಶ್ರೀಲಂಕಾ ತೀವ್ರ ಆಹಾರ ಸಂಕಷ್ಟ ಎದುರಿಸುತ್ತಿದೆ. ಸಂಕಷ್ಟದ ವಿರುದ್ಧ ಜನರು ಬೀದಿಗೆ ಇಳಿದು ಬಹಳ ಕಾಲದಿಂದ ಆಡಳಿತ ನಡೆಸುತ್ತಿದ್ದ ರಾಜಪಕ್ಸ ಕುಟುಂಬ ಸದಸ್ಯರ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು.
ಟಾಪ್ ನ್ಯೂಸ್
