ಒಳಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣಾ ಗಿಮಿಕ್-ಡಾ.ಜಿ.ಪರಮೇಶ್ವರ


Team Udayavani, Mar 26, 2023, 6:14 PM IST

G PARAMESHWAR

ಕೊರಟಗೆರೆ : ರಾಜ್ಯ ಸರ್ಕಾರದಿಂದ ಸದಾಶಿವ ಆಯೋಗದ ವರದಿಯ ಒಳಮೀಸಲಾತಿ ಹೆಚ್ಚಳ ವಿಚಾರವನ್ನು ನಾನು ಸ್ವಾಗತಿಸಿದರೂ ಕೂಡ ಇದು ಚುನಾವಣಾ ಗಿಮಿಕ್ ಆಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ಪ್ರತಿಕ್ರಿಯಿಸಿದರು.

ಅವರು ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಒಳ ಮೀಸಲಾತಿ ಬೇಡಿಕೆ ನಮ್ಮ ಆಗಿನ ಸಮ್ಮಿಶ್ರ ಸರ್ಕಾರದ ಆರಂಭದಲ್ಲೂ ಇತ್ತು, ಒಳಮೀಸಲಾತಿ ಸದಾಶಿವ ಆಯೋಗದ ವರದಿ ಸರ್ಕಾರದಲ್ಲಿ ಇದ್ದದ್ದು ನಿಜ ಆದರೆ ನಾಲ್ಕು ವರ್ಷಗಳು ತೆಗೆದುಕೊಳ್ಳದ ತೀರ್ಮಾನ ರಾಜ್ಯ ಸರ್ಕಾರ ಕೊನೆ ಕ್ಯಾಬಿನೆಟ್‌ನಲ್ಲಿ ತೆಗೆದುಕೊಳ್ಳೋದು ಇದು ಏನು ಎಂಬ ಪ್ರಶ್ನೆ ಉದ್ಬವವಾಗುತ್ತದೆ, ಅಂದರೇ ಇದು ಮಾಡಿದಂಗೂ ಇರಬೇಕು ಹಾಗೂ ಆಗದಂಗೂ ಇರಬೇಕು ಇದು ಚುನಾವಣಾ ಗಿಮಿಕ್ ಎಂದು ತಿಳಿಸಿದ ಅವರು ಇದನ್ನು ಕಾನೂನಾತ್ಮಕವಾಗಿ ನೋಡೊದಾದ್ರೇ ಒಳಮೀಸಲಾತಿಯನ್ನು ಯಾವ ರೀತಿ ಸಮರ್ಥನೆ ಮಾಡಿಕೊಳ್ತಾರೆ ಗೊತ್ತಿಲ್ಲಾ ಇದು ಮುಂದೆ ಬರೋ ದಿನಗಳಲ್ಲಿ ತಿರ್ಮಾನ ಆಗುತ್ತೇ ಎಂದು ತಿಳಿಸಿದರು.

ಕಾಂಗ್ರೆಸ್ ಆಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಊಹಾಪೋಹಕ್ಕೆ ತೆರೆ ;-

ನನಗೂ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮೊದಲ ಪಟ್ಟಿಯಲ್ಲೇ ಘೋಷಣೆ ಮಾಡಿದ್ದು ಬಹಳ ಜನರಿಗೆ ಡಾ.ಜಿ.ಪರಮೇಶ್ವರ ಕೊರಟಗೆರೆ ವಿಧಾನ ಸಭಾ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗ್ತಾರೆ ಎಂಬ ಊಹಾ ಪೋಹಗಳಿಗೆ ತೆರೆ ಬಿದ್ದಿದೆ. ನಾನು ಮೊದಲಿನಿಂದಲೂ ಕೊರಟಗೆರೆ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡು ಬಂದಿದ್ದೆ ಆದರೂ ಬಹಳ ಜನಕ್ಕೆ ಅನುಮಾನ ಇತ್ತು, ಬೆಂಗಳೂರಿಗೆ ಬನ್ನಿ ಅಂತಾ ಪ್ರಕಟಣೆ ಮಾಡ್ತಿದ್ರು ಇವತ್ತು ಅದಕ್ಕೆ ತೆರೆಬಿದ್ದಿದೆ ಎಂದರು. ಮೊದಲ ಪಟ್ಟಿಯಲ್ಲಿ ೧೨೪ ಕ್ಷೇತ್ರಗಳ ಸೀಟ್‌ಗಳನ್ನು ಅನೌನ್ಸ್ ಆಗಿದೆ ಇನ್ನು ೧೦೦ ಕ್ಷೇತ್ರಗಳು ಉಳಿದಿವೆ, ಅದನ್ನು ಕೊಡಲೆ ಅದಷ್ಟು ಶೀಘ್ರದಲ್ಲಿ ಅನೌನ್ಸ್ ಮಾಡ್ತಾರೆ ಎಂದು ಅಂದುಕೊಂಡಿದ್ದೀನಿ, ಕಾಂಗ್ರೆಸ್ ಪಕ್ಷದ ಸರ್ಕಾರ ಮಾಡೋದಕ್ಕೆ ಅನುಕೂಲಕರ ವಾತಾವರಣ ಸೃಷ್ಠಿಯಾಗುತ್ತೆ ಅನ್ನೊದು ಈ ಪಟ್ಟಿ ನೋಡಿದ್ಮೇಲೆ ಅನಿಸಿದೆ, ಕೆಲವರಿಗೆ ಟಿಕೆಟ್ ದೊರೆಯದೆ ನಿರಾಶೆ ಆಗಿರಬೇಕು, ಬಹಳ ಜನ ಅರ್ಹರಿದ್ದಂತಹವರಿಗೆ ಟಿಕೆಟ್ ಸಿಕ್ಕಿಲ್ಲಾ, ಅವರೂ ೨ ಲಕ್ಷ ಕೊಟ್ಟು ಪಕ್ಷಕ್ಕೆ ಅರ್ಜಿ ಹಾಕಿದ್ರು ಅವರಲ್ಲಿ ನಾನು ಮನವಿ ಮಾಡಿಕೊಳ್ತೇನೆ ನಿರಾಸೆ ಆಗಬೇಡಿ, ಮುಂದೆ ಭವಿಷ್ಯದಲ್ಲಿ ನಿಮಗೂ ಕೂಡ ಉತ್ತಮ ಅವಕಾಶಗಳು ಸಿಗುತ್ತೆ, ಸರ್ಕಾರ ಬಂದಾಗ ಅನೇಕ ಜವಾಬ್ದಾರಿಗಳು ಸಿಗೋ ಅವಕಾಶ ನಿಮಗಿದೆ, ನಾವು ನೀವೆಲ್ಲಾ ಸೇರಿಕೊಂಡು ಪಕ್ಷವನ್ನ ಕಟ್ಟೋಣ ಎಂದು ತಿಳಿಸಿದರು.

ಇದನ್ನೂ ಓದಿಎಲ್ಲೇ ಸ್ಪರ್ಧೆ ಮಾಡಿದರೂ ಸಿದ್ದರಾಮಯ್ಯ ಗೆಲ್ಲುತ್ತಾರೆ : ಶಾಸಕ ಜೆ.ಎನ್.ಗಣೇಶ್

ರಾಹುಲ್ ಗಾಂಧಿ ಅನರ್ಹತೆ ಪ್ರಜಾತಂತ್ರ ವಿರೋಧಿ;-

ಕಾಂಗ್ರೆಸ್ ಪಕ್ಷದ ಪ್ರಮುಖ ಯುವ ನಾಯಕ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಿದ ಕ್ರಮವನ್ನು ತೀವ್ರವಾಗಿ ಖಂಡಿಸಿದ ಡಾ.ಜಿ.ಪರಮೇಶ್ವರ ಇದು ಪ್ರಜಾತಂತ್ರ ವಿರೋಧಿ ಕ್ರಮವಾಗಿದೆ, ಗುಜರಾತ್ ರಾಜ್ಯದ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ಅವರನ್ನು ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರೆಂದು ಪರಿಗಣಿಸಿ ಎರಡು ವರ್ಷಗಳ ಶಿಕ್ಷೆ ವಿಧಿಸಿದ ಬೆನ್ನ ಹಿಂದೆಯೇ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ತರಾತುರಿಯ ಕ್ರಮವಾಗಿದೆ, ಇದರ ಹಿಂದೆ ಬಿಜೆಪಿ ನಾಯಕರ ಷಡ್ಯಂತ್ರ ಅಡಗಿದೆ ಎಂದರು. ಅವರು ನನಗೆ ನ್ಯಾಯಾಲಯ ಮತ್ತು ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ, ಗೌರವಗಳಿವೆ, ನ್ಯಾಯಾಲಯ ತೀರ್ಪು ನೀಡಿದ ತಕ್ಷಣವೇ ಅವರ ಲೋಕಸಭಾ ಸದಸ್ಯತ್ವ ರದ್ದುಪಡಿಸಿರುವುದು ಸರಿಯೇ, ನ್ಯಾಯಾಲಯವೇ ತಿಂಗಳ ಕಾಲ ಸಮಯ ನೀಡಿರುವಾಗ ಲೋಕಸಭೆಯ ಕಾರ್ಯದರ್ಶಿ ಉತ್ಪಲ್‌ಕುಮಾರ್ ಅವರು ಆತುರಾತುರವಾಗಿ ರಾಹುಲ್‌ಗಾಂಧಿ ಅವರನ್ನು ಅನರ್ಹಗೊಳಿಸಿ ಅದೇಶ ಹೊರಡಿಸಿರುವುದು ಸಮಂಜಸವೇ ಎಂಬುದನ್ನು ಬಿಜೆಪಿಯ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಟಾಪ್ ನ್ಯೂಸ್

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌

nato

NATO ಗೆ ಭಾರತ ಸೇರ್ಪಡೆ?

police siren

ಹೊಟೇಲ್‌ ಮಾಲಕನ ಶವವನ್ನು ಬ್ಯಾಗ್‌ನಲ್ಲಿ ಸಾಗಿಸಿದ ಪ್ರಕರಣ: ಯುವತಿ ಸಹಿತ ನಾಲ್ವರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-s-as-d

Bribe; ಸಹಾಯಕ ನಿರ್ದೇಶಕಿ ಅಮಾನತು: ದೂರು ನೀಡಿದ ನೌಕರನೇ ಕರ್ತವ್ಯಕ್ಕೆ ಗೈರು!

1-dssdsds

Dalit CM ಕೂಗು ಕನಸಾಗೇ ಉಳಿಯಿತು: ಕೊರಟಗೆರೆ ಜನರ ನೋವು

3-kunigal

ಕುಣಿಗಲ್: ನಿಂತಿದ್ದ ಬಸ್ ಗೆ ಟಿಟಿ ಢಿಕ್ಕಿ ; ಇಬ್ಬರು ಸಾವು, ಹಲವರಿಗೆ ಗಾಯ

1-sdsd

Chikkamagaluru: ಅಪಘಾತದಲ್ಲಿ NSG ಕಮಾಂಡೋ ಮೃತ್ಯು

ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಅಂಕಿ ಅಂಶದ ರೂಪು ರೇಷೆ ಸಿದ್ದ: ಜಿ. ಪರಮೇಶ್ವರ್

ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಅಂಕಿ ಅಂಶದ ರೂಪು ರೇಷೆ ಸಿದ್ದ: ಜಿ. ಪರಮೇಶ್ವರ್

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌