
ಕಾಫಿನಾಡಿನಲ್ಲಿ ಹೆಚ್ಚುತ್ತಿರುವ ಹುಲಿ ದಾಳಿ: ಸಾರ್ವಜನಿಕರಲ್ಲಿ ಆತಂಕ
Team Udayavani, Nov 14, 2021, 12:50 PM IST

ಕೊಟ್ಟಿಗೆಹಾರ: ಹುಲಿ ದಾಳಿಗೆ ಮತ್ತೊಂದು ಕರು ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೆಗ್ಗುಡ್ಲುನಲ್ಲಿ ನಡೆದಿದೆ.
ಹೆಗ್ಗುಡ್ಲು ಗ್ರಾಮದ ರತ್ನಮ್ಮ ಎಂಬ ಮಹಿಳೆಗೆ ಸೇರಿದ್ದ ಕರುವಾಗಿದ್ದು, ಜಮೀನಿನಲ್ಲಿದ್ದ ಕರುವಿನ ಮೇಲೆ ಹುಲಿ ದಾಳಿ ಮಾಡಿದೆ.
ಕಳೆದ ಎರಡು ಮೂರು ವರ್ಷಗಳಿಂದ ಮೂಡಿಗೆರೆ ತಾಲೂಕಿನ ಬಿ.ಹೊಸಹಳ್ಳಿ, ಹೆಗ್ಗುಡ್ಲು, ಭಾರತಿ ಬೈಲ್, ಹೊಕ್ಕಳ್ಳಿ, ಕುಂದೂರು, ಮತ್ತಿಕಟ್ಟೆ,ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಸುಗಳ ಮೇಲೆ ದಾಳಿ ಮಾಡುತ್ತಿದ್ದ ಘಟನೆ ನಡೆಯುತ್ತಿದ್ದು, ಹಲವಾರು ಹಸುಗಳು ಹುಲಿಗೆ ಆಹಾರವಾಗಿವೆ.
ಇದನ್ನೂ ಓದಿ:ಪ್ರಿಯಾಂಕ ಖರ್ಗೆ ಹೆಸರು ಗಂಡೋ ಹೆಣ್ಣೋ ಎಂಬ ಕ್ಲಾರಿಟಿ ಇಲ್ಲ: ಪ್ರತಾಪ್ ಸಿಂಹ ಟೀಕೆ
ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಆದಷ್ಟು ಬೇಗ ಅರಣ್ಯಾಧಿಕಾರಿಗಳು ಹುಲಿ ಸೆರೆ ಹಿಡಿಯದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಡೂರು: ಅರಿವು ಮೂಡಿಸುವುದೇ ಗುರುವಿನ ಧರ್ಮ: ರಂಭಾಪುರಿ ಶ್ರೀ

Goa ಸ್ಮಾರ್ಟ್ ಸಿಟಿ ಯೋಜನೆಯ ತನಿಖೆ ನಡೆಸಬೇಕು: ಕಾಂಗ್ರೆಸ್ ಒತ್ತಾಯ

”ನನಗಿದು ಸ್ಪೆಷಲ್ ಸಿನಿಮಾ…”: ‘ಯದಾ ಯದಾ ಹೀ’ ಕುರಿತು ಹರಿಪ್ರಿಯಾ ಮಾತು

ದಾವಣಗೆರೆ: ಮಕ್ಕಳಿಬ್ಬರಿಗೆ ಟಿಕ್ಸೋಟೇಪ್ ಸುತ್ತಿ ಕೊಲೆಗೈದ ತಂದೆ!; ಬಂಧನ

ತವರಿನ ಲಾಭವಿಲ್ಲ, ಟಾಸ್ ಗೆದ್ದು ಫೀಲ್ಡಿಂಗ್ ಮಾಡಬೇಕಿಲ್ಲ…: ಇದು 2023ರ IPL ವಿಶೇಷತೆ