ಭಾರತ-ಫ್ರಾನ್ಸ್‌ ಸಮರ ಸಾಂಗತ್ಯ


Team Udayavani, Jul 16, 2023, 7:39 AM IST

RAFEL

ಚೀನ ಇತ್ತೀಚಿನ ಕೆಲವು ವರ್ಷಗಳಲ್ಲಿ ಹಲವು ಯುದ್ಧ ವಿಮಾನಗಳನ್ನು, ನೌಕೆಗಳನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ. ಸ್ವದೇಶಿ ನಿರ್ಮಿತ ಮೂರನೇ ವಿಮಾನ ನೌಕೆಯ ಸಿದ್ಧತೆಯಲ್ಲಿದೆ. ಇನ್ನೊಂದೆಡೆ ಪಾಕಿಸ್ಥಾನವೂ ತನ್ನ ನೌಕಾಪಡೆಯನ್ನು ಸಜ್ಜುಗೊಳಿಸುತ್ತಿದೆ.ಹಾಗೆಂದು ಭಾರತವೂ ಸುಮ್ಮನೆ ಕುಳಿತಿಲ್ಲ. ಫ್ರಾನ್ಸ್‌ ನೊಂದಿಗೆ 26 ರಫೇಲ್‌ ಯುದ್ಧ ವಿಮಾನಗಳ ಹಾಗೂ 3 ಸ್ಕಾರ್ಪಿಯನ್‌ ದರ್ಜೆಯ ಜಲಾಂತರ್ಗಾಮಿ ನೌಕೆಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.

ರಫೇಲ್‌-ಎಂ ಯುದ್ಧ ವಿಮಾನ
ಭಾರತದ ಕೋಠಿಯಲ್ಲಿ ರಫೇಲ್‌ಗ‌ಳಿವೆ. 2015 ರಲ್ಲಿ ಫ್ರಾನ್ಸ್‌ನಿಂ¨ ‌ 59 ಸಾವಿರ ಕೋಟಿ ರೂ. ಮೌಲ್ಯದ 36 ರಫೇಲ್‌ ಗಳ ಖರೀದಿ ಒಪ್ಪಂದವಾಯಿತು. ಈಗ ಹೊಸದಾಗಿ 26 ರಫೇಲ್‌ – ಎಂ ಖರೀದಿಗೆ ಮುಂದಾಗಿದೆ. ಅಲ್ಲದೇ ಫ್ರಾನ್ಸ್‌ನ ಅನಂತರ ರಫೇಲ್‌ ವ್ಯವಸ್ಥೆ ಹೊಂದಿದ 2ನೇ ದೇಶ ಭಾರತವಾಗಲಿದೆ. ಇವುಗಳನ್ನು ಐಎನ್‌ಎಸ್‌ ವಿಕ್ರಾಂತ್‌ ಹಾಗೂ ಐಎನ್‌ಎಸ್‌ ವಿಕ್ರಮಾದಿತ್ಯ ನೌಕೆಯಲ್ಲಿ ಅಳವಡಿಸಲಾಗುತ್ತದೆ.

ಮಿಗ್‌ – 29 ಪರ್ಯಾಯ ರಫೇಲ್‌ – ಎಂ
ಭಾರತೀಯ ನೌಕಾಪಡೆಯು ಮಿಗ್‌-29 ಗಳನ್ನು ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ಬಳಸಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಿಗ್‌ಗಳು ವಿಫ‌ಲವಾಗುತ್ತಿರುವ ಹಿನ್ನೆಲೆಯಲ್ಲಿ ರಫೇಲ್‌ – ಎಂ ಅಥವಾ ಎಫ್-18 ಸೂಪರ್‌ ಹಾರ್ನೆಟ್‌ ಯುದ್ಧ ವಿಮಾನಗಳತ್ತ ನೌಕಾಪಡೆ ಮುಖ ಮಾಡಿತ್ತು. ಇದರ ಸಲುವಾಗಿ ಗೋವಾದಲ್ಲಿ ಈ ಎರಡನ್ನೂ ಪರೀಕ್ಷೆಗೆ ಒಳಪಡಿಸಿ ರಫೇಲ್‌ – ಎಂ ಅನ್ನು ಆಯ್ಕೆ ಮಾಡಿತು. ಜತೆಗೆ ತೇಜಸ್‌ ಲೈಟ್‌ ಕಾಂಬಾಕ್ಟ್‌ನ ನೌಕಾ ಆವೃತ್ತಿಯನ್ನು ಬಳಸುವ ಆಲೋಚನೆಯೂ ನೌಕಾಪಡೆಯದ್ದು. ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ( ಡಿಆರ್‌ಡಿಓ) ತೇಜಸ್‌ ಅನ್ನು ವಿನ್ಯಾಸಗೊಳಿಸುತ್ತಿದ್ದು, ಐದಾರು ವರ್ಷಗಳಲ್ಲಿ ನೌಕಾಸೇನೆಗೆ ಸೇರಿಕೊಳ್ಳುವ ಸಂಭವವಿದೆ.

ಸ್ಕಾರ್ಪಿಯನ್‌ ಜಲಾಂತರ್ಗಾಮಿ ನೌಕೆ

1980ರ ದಶಕದಲ್ಲಿ ಫ್ರಾನ್ಸ್‌ ನಿಂದ ಮಿರಾಜ್‌ ಯುದ್ಧ ವಿಮಾನಗಳನ್ನು ಭಾರತ ಖರೀದಿಸಿತ್ತು. ವಾಯುಪಡೆ ಯಲ್ಲಿ ಈಗಲೂ ಈ ವಿಮಾನಗಳು ಬಳಕೆಯಲ್ಲಿವೆ. 2005ರಲ್ಲಿ 18,800 ಕೋಟಿ ರೂ. ವೆಚ್ಚದಲ್ಲಿ ಫ್ರಾನ್ಸ್‌ನಿಂದ ಆರು ಸ್ಕಾರ್ಪಿಯನ್‌ ದರ್ಜೆಯ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಿತು. ಈ ಬಾರಿ 3 ಸ್ಕಾರ್ಪಿಯನ್‌ ನೌಕೆಗಳನ್ನು ಖರೀದಿಸುತ್ತಿದೆ. ಈ ನೌಕೆಗಳನ್ನೂ ಮುಂಬಯಿಯ ಮಜಗಾಂವ್‌ ಡಾಕ್‌ ಶಿಪ್‌ ಬಿಲ್ಡರ್ ಕಂಪೆನಿ ಫ್ರಾನ್ಸ್‌ನಿಂದ ತಾಂತ್ರಿಕತೆ ಪಡೆದು ರೂಪಿಸಲಿದೆ.

ಸ್ಕಾರ್ಪಿಯನ್‌ ಜಲಾಂತರ್ಗಾಮಿಯ ವಿಶೇಷತೆ
ಉದ್ದ: 200 ಅಡಿ    ಎತ್ತರ: 40 ಅಡಿ
ನೀರಿನೊಳಗೆ ಪ್ರತೀ ಗಂಟೆಗೆ 37 ಕಿ.ಮೀ.ಚಲಿಸುತ್ತದೆ,
ನೀರಿನ ಮೇಲ್ಭಾಗದಲ್ಲಿ ಪ್ರತೀ ಗಂಟೆಗೆ 20 ಕಿ.ಮೀ ವೇಗದಲ್ಲಿ ಚಲಿಸುತ್ತದೆ.
35 ನಾವಿಕರು ಹಾಗೂ 8 ಆಫೀಸರ್‌ಗಳನ್ನು ಹೊತ್ತೂಯ್ಯುವ ಸಾಮರ್ಥ್ಯವಿದೆ.
50 ದಿನಗಳ ವರೆಗೆ ಸಮುದ್ರದಲ್ಲಿ ಇರುವಷ್ಟು ಆಹಾರ ಸೇರಿದಂತೆ ಇತರೆ ಸರಕುಗಳನ್ನೂ ಹೊಂದುವ ಸಾಮರ್ಥ್ಯಇದೆ.
ಈ ಸಬ್‌ಮೇರಿನ್‌ಗಳು ಆ್ಯಂಟಿ ಸಫೇìಸ್‌, ಆ್ಯಂಟಿ ಸಬ್‌ಮೇರಿನ್‌ ವಾರ್‌ಫೇರ್‌, ಸ್ಪೆಶಲ್‌ ಆಪರೇಶನ್‌ಗಳಲ್ಲಿ , ಗುಪ್ತಚರ ಮಾಹಿತಿಗಳನ್ನು ಸಂಗ್ರಹಿಸುವಲ್ಲಿಯೂ ಬಳಸಲಾಗುತ್ತದೆ.

ಭಾರತವು ವಿಶ್ವದ ಅತೀ ದೊಡ್ಡ ಶಸ್ತ್ರಾಸ್ತ್ರ ಖರೀದಿದಾರ ಮತ್ತು ರಷ್ಯಾದ ಪ್ರಮುಖ ಗ್ರಾಹಕ. ಕೆಲವು ವರ್ಷಗಳಿಂದ ಭಾರತವು ಫ್ರಾನ್ಸ್‌ನಿಂದಲೂ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಈ ಖರೀದಿಗಳು ಭಾರತ ರಕ್ಷಣ ಕ್ಷೇತ್ರದ ಸಾಮರ್ಥ್ಯವನ್ನು ಹೆಚ್ಚಿಸಲಿವೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.