ICC World Cup Test Championship ಫೈನಲ್‌: ಫಾಲೋಆನ್‌ ತಪ್ಪಿಸಲು ಭಾರತ ಪ್ರಯತ್ನ

Team Udayavani, Jun 9, 2023, 7:44 AM IST

ICC INDIA

ಲಂಡನ್‌: ಬಲಿಷ್ಠ ಆಸ್ಟ್ರೇಲಿಯ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹೋರಾಟದಲ್ಲಿ ಭಾರತ ಫಾಲೋಆನ್‌ ತಪ್ಪಿಸಲು ಪ್ರಯತ್ನ ನಡೆಸುತ್ತಿದೆ. ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್‌ ಗಳಿಸಿದ್ದರೆ ಭಾರತ ದ್ವಿತೀಯ ದಿನದ ಆಟದ ಮುಕ್ತಾಯಕ್ಕೆ ಈಗಾಗಲೇ ಐದು ವಿಕೆಟನ್ನು ಕಳೆದುಕೊಂಡಿದ್ದು 151 ರನ್‌ ಗಳಿಸಿದೆ. ಇನ್ನುಳಿದ ಐದು ವಿಕೆಟ್‌ಗಳಿಂದ ಭಾರತ ಫಾಲೋಆನ್‌ ತಪ್ಪಿಸಲು ಗರಿಷ್ಠ ಪ್ರಯತ್ನ ಮಾಡಬೇಕಾಗಿದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಬೇಕಾದರೆ ಇನ್ನೂ 318 ರನ್‌ ಗಳಿಸಬೇಕಾಗಿದೆ.

ಆರಂಭಿಕ ಬಳಿಕ ಟೆಸ್ಟ್‌ ಅನುಭವಿ ಚೇತೇಶ್ವರ ಪೂಜಾರ, ವಿರಾಟ್‌ ಕೊಹ್ಲಿ ಮತ್ತು ರವೀಂದ್ರ ಜಡೇಜ ಅವರನ್ನು ತಂಡ ಕಳೆದುಕೊಂಡಿದೆ. ಪೂಜಾರ ಮತ್ತು ಕೊಹ್ಲಿ 14 ರನ್ನಿಗೆ ಔಟಾದರೆ ಜಡೇಜ 48 ರನ್‌ ಗಳಿಸಿ ಔಟಾದರು. ಅವರು ಅಜಿಂಕ್ಯ ರಹಾನೆ ಜತೆ ಐದನೇ ವಿಕೆಟಿಗೆ 71 ರನ್‌ ಪೇರಿಸಿದ್ದು ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ದ್ವಿತೀಯ ದಿನದ ಆಟ ನಿಂತಾಗ ರಹಾನೆ 29 ಮತ್ತು ಶ್ರೀಕರ್‌ ಭರತ್‌ 5 ರನ್ನಿನಿಂದ ಆಡುತ್ತಿದ್ದರು. ಮೂರನೇ ದಿನದ ಬೆಳಗ್ಗಿನ ಅವಧಿಯಲ್ಲಿ ಭಾರತ ಎಚ್ಚರಿಕೆಯಿಂದ ಆಡಿ ಫಾಲೋಆನ್‌ ತಪ್ಪಿಸಲು ಪ್ರಯತ್ನಿಸಬೇಕಾಗಿದೆ.

ಭಾರತದ ಬ್ಯಾಟಿಂಗ್‌ ಶಕ್ತಿಗೆ ಬಲವಾದ ಏಟು ನೀಡಿರುವ ಆಸ್ಟ್ರೇಲಿಯ ಸದ್ಯದ ಸ್ಥಿತಿಯಲ್ಲಿ ಮೇಲುಗೈ ಸಾಧಿಸಿದೆ. ಭಾರತದ ಐದು ವಿಕೆಟನ್ನು ಹಾರಿಸಿರುವ ಆಸ್ಟ್ರೇಲಿಯ ಇನ್ನುಳಿದ ವಿಕೆಟ್‌ ಉರುಳಿಸಲು ಪ್ರಯತ್ನ ಮಾಡುತ್ತಿದೆ. ಬೌಲಿಂಗ್‌ ಮಾಡಿದ ಐವರು ಬೌಲರ್‌ಗಳು ತಲಾ ಒಂದು ವಿಕೆಟ್‌ ಉರುಳಿಸಿದ್ದಾರೆ.

ಆರಂಭಿಕರ ಪತನ
ಟೀ ವಿರಾಮದ ಮೊದಲು 10 ಓವರ್‌ ಆಡಿದ ಭಾರತವು ಆರಂಭಿಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ನಾಯಕ ರೋಹಿತ್‌ ಶರ್ಮ 15 ರನ್ನಿಗೆ ಔಟಾದರೆ ಶುಭ್‌ಮನ್‌ ಗಿಲ್‌ ಅವರು ಸ್ಕಾಟ್‌ ಬೋಲ್ಯಾಂಡ್‌ ಅವರ ಎಸೆತವನ್ನು ಅರ್ಥಮಾಡಿಕೊಳ್ಳಲು ವಿಫ‌ಲರಾಗಿ ಕ್ಲೀನ್‌ಬೌಲ್ಡ್‌ ಆದರು.

ಆಸ್ಟ್ರೇಲಿಯ 469ಕ್ಕೆ ಆಲೌಟ್‌
ಈ ಮೊದಲು ಮೂರು ವಿಕೆಟಿಗೆ 327 ರನ್ನುಗಳಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯ ತಂಡವು ಟ್ರ್ಯಾವಿಸ್‌ ಹೆಡ್‌, ಸ್ಮಿತ್‌ ಮತ್ತು ಕ್ಯಾರಿ ಅವರ ಉತ್ತಮ ಆಟದಿಂದಾಗಿ 469 ರನ್‌ ಗಳಿಸಿ ಆಲೌಟಾಯಿತು. ಮೊದಲ ದಿನ ಅಜೇಯರಾಗಿ ಉಳಿದಿದ್ದ ಹೆಡ್‌ ಮತ್ತು ಸ್ಮಿತ್‌ ಆಟ ಮುಂದುವರಿಸಿದ್ದು ನಾಲ್ಕನೇ ವಿಕೆಟಿಗೆ 285 ರನ್ನುಗಳ ಜತೆಯಾಟ ನಡೆಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು.

ಮೊದಲ ದಿನ 95 ರನ್‌ ಗಳಿಸಿದ್ದ ಸ್ಮಿತ್‌ ದ್ವಿತೀಯ ದಿನ ಸಿರಾಜ್‌ ಅವರ ಬೌಲಿಂಗ್‌ನಲ್ಲಿ ಎರಡು ಬೌಂಡರಿ ಬಾರಿಸಿ ಶತಕ ಪೂರ್ತಿಗೊಳಿಸಿದರು. ಇದು ಇಂಗ್ಲೆಂಡಿನಲ್ಲಿ ಅವರ ಏಳನೇ ಮತ್ತು ಓವಲ್‌ನಲ್ಲಿ ಮೂರನೇ ಶತಕವಾಗಿದೆ. ಒಟ್ಟಾರೆ ಟೆಸ್ಟ್‌ ಬಾಳ್ವೆಯ 31ನೇ ಶತಕ ಆಗಿದೆ. ಸ್ಮಿತ್‌ ಅಂತಿಮವಾಗಿ 268 ಎಸೆತ ಎದುರಿಸಿ 121 ರನ್‌ ಗಳಿಸಿ ಔಟಾದರು. ಮೊದಲ ದಿನ ಶತಕ ಸಿಡಿಸಿ ಸಂಭ್ರಮಿಸಿದ್ದ ಹೆಡ್‌ 174 ಎಸೆತಗಳಿಂದ 163 ರನ್‌ ಗಳಿಸಿ ಔಟಾದರು. 25 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದರು.

ಕೊನೆ ಹಂತದಲ್ಲಿ ಅಲೆಕ್ಸ್‌ ಕ್ಯಾರಿ ಬಿರುಸಿನ ಆಟ ಆಡಿದ್ದರಿಂದ ಆಸ್ಟ್ರೇಲಿಯದ ಮೊತ್ತ 450ರ ಗಡಿ ದಾಟುವಂತಾಯಿತು. ಅವರು 69 ಎಸೆತಗಳಿಂದ 48 ರನ್‌ ಹೊಡೆದರು. ಈ ನಡುವೆ ಭಾರತ ಬೆಳಗ್ಗಿನ ಅವಧಿಯಲ್ಲಿ ಆಸ್ಟ್ರೇಲಿಯದ ನಾಲ್ಕು ವಿಕೆಟ್‌ ಕಿತ್ತ ಕಾರಣ ಸ್ವಲ್ಪಮಟ್ಟಿಗೆ ಮೇಲುಗೈ ಸಾಧಿಸಿತ್ತು.

ಬಿಗು ದಾಳಿ ಸಂಘಟಿಸಿದ ಮೊಹಮ್ಮದ್‌ ಸಿರಾಜ್‌ 108 ರನ್ನಿಗೆ 4 ವಿಕೆಟ್‌ ಪಡೆದರೆ ಶಮಿ ಮತ್ತು ಠಾಕೂರ್‌ ತಲಾ ಎರಡು ವಿಕೆಟ್‌ ಕಿತ್ತರು.

ಟಾಪ್ ನ್ಯೂಸ್

Rain;ಉಡುಪಿ, ಉ.ಕ ಜಿಲ್ಲೆಗೆ ಆರೆಂಜ್, ದ.ಕ‌ ಜಿಲ್ಲೆಗೆ ಯೆಲ್ಲೊ ಅಲರ್ಟ್; ‌ಭಾರಿ ಮಳೆ ಸಾಧ್ಯತೆ

Rain;ಉಡುಪಿ, ಉ.ಕ ಜಿಲ್ಲೆಗೆ ಆರೆಂಜ್, ದ.ಕ‌ ಜಿಲ್ಲೆಗೆ ಯೆಲ್ಲೊ ಅಲರ್ಟ್; ‌ಭಾರಿ ಮಳೆ ಸಾಧ್ಯತೆ

ನಮ್ಮ ಕೆಲಸಗಳಿಂದ ಮತ್ತೊಬ್ಬರ ಕೆಡುಕಿಗೆ ಕಾರಣವಾಗದಂತೆ ನೋಡಿಕೊಳ್ಳಬೇಕು: ಪೇಜಾವರ ಶ್ರೀ

Chaturmasya: ನಿತ್ಯ ಜೀವನದಲ್ಲಿ ರಾಮನಾಮ ಸ್ಮರಣೆ ಮಾಡಿದರೆ ಜೀವನ ಪಾವನ: ಪೇಜಾವರ ಶ್ರೀ

Election: ಅನಂತಕುಮಾರ ಹೆಗಡೆ ಅವರೇ ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ: ಕಾಗೇರಿ

Election: ಅನಂತಕುಮಾರ ಹೆಗಡೆ ಅವರೇ ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ: ಕಾಗೇರಿ

Yash 19; ರಾಜ್ಯೋತ್ಸವಕ್ಕೆ ಯಶ್‌ ಹೊಸ ಚಿತ್ರ ಘೋಷಣೆ?

Yash 19; ರಾಜ್ಯೋತ್ಸವಕ್ಕೆ ಯಶ್‌ ಹೊಸ ಚಿತ್ರ ಘೋಷಣೆ?

ಇಂಡಿಯಾದ ಮೈತ್ರಿಗಾಗಿ ರಾಜ್ಯದ ಹಿತ ಬಲಿ‌ ಕೊಡಲಾಗುತ್ತಿದೆ…: ಮಾಜಿ ಸ್ಪೀಕರ್

Sirsi: ಇಂಡಿಯಾದ ಮೈತ್ರಿಗಾಗಿ ರಾಜ್ಯದ ಹಿತ ಬಲಿ‌ ಕೊಡಲಾಗುತ್ತಿದೆ…: ಮಾಜಿ ಸ್ಪೀಕರ್

Karnataka Bandh: ಕಾವೇರಿಗಾಗಿ ಕಾಫಿನಾಡಲ್ಲಿ ತೀವ್ರಗೊಂಡ ಹೋರಾಟ.. ಅರೆಬೆತ್ತಲೆ ಉರುಳು ಸೇವೆ

Karnataka Bandh: ಕಾವೇರಿಗಾಗಿ ಕಾಫಿನಾಡಲ್ಲಿ ತೀವ್ರಗೊಂಡ ಹೋರಾಟ.. ಅರೆಬೆತ್ತಲೆ ಉರುಳು ಸೇವೆ

Pakistani Tv Show: ಟಿವಿ ಚಾನೆಲ್‌ ನ ಲೈವ್‌ ಶೋನಲ್ಲೇ ಪಾಕ್‌ ಮುಖಂಡರ ಮಾರಾಮಾರಿ!

Pakistani Tv Show: ಟಿವಿ ಚಾನೆಲ್‌ ನ ಲೈವ್‌ ಶೋನಲ್ಲೇ ಪಾಕ್‌ ಮುಖಂಡರ ಮಾರಾಮಾರಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games: Indian shooting team aims for another gold with world record

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ

ICC World Cup 2023: Ashwin makes entry in to India’s WC squad

ICC World Cup 2023; ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಆರ್.ಅಶ್ವಿನ್ ಗೆ ಬುಲಾವ್

1-wsadasd

Asian Games ಇಂದಿನಿಂದ ಆ್ಯತ್ಲೆಟಿಕ್ಸ್‌ ಸ್ಪರ್ಧೆ; ಭಾರತಕ್ಕೆ ಗರಿಷ್ಠ ಪದಕಗಳ ನಿರೀಕ್ಷೆ

1-wdsa

Asian Games ವೈಯಕ್ತಿಕ ಡ್ರೆಸ್ಸೇಜ್‌: ಅನುಷ್‌ಗೆ ಕಂಚು

1-qwqwqwe

Asian Games ಟೆನಿಸ್‌: ಬೋಪಣ್ಣ-ಭೋಸಲೆಗೆ ಕಂಚು ಖಚಿತ; ರಾಮ್‌ಕುಮಾರ್‌-ಮೈನೆನಿ ಫೈನಲಿಗೆ

MUST WATCH

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

ಹೊಸ ಸೇರ್ಪಡೆ

Rain;ಉಡುಪಿ, ಉ.ಕ ಜಿಲ್ಲೆಗೆ ಆರೆಂಜ್, ದ.ಕ‌ ಜಿಲ್ಲೆಗೆ ಯೆಲ್ಲೊ ಅಲರ್ಟ್; ‌ಭಾರಿ ಮಳೆ ಸಾಧ್ಯತೆ

Rain;ಉಡುಪಿ, ಉ.ಕ ಜಿಲ್ಲೆಗೆ ಆರೆಂಜ್, ದ.ಕ‌ ಜಿಲ್ಲೆಗೆ ಯೆಲ್ಲೊ ಅಲರ್ಟ್; ‌ಭಾರಿ ಮಳೆ ಸಾಧ್ಯತೆ

ನಮ್ಮ ಕೆಲಸಗಳಿಂದ ಮತ್ತೊಬ್ಬರ ಕೆಡುಕಿಗೆ ಕಾರಣವಾಗದಂತೆ ನೋಡಿಕೊಳ್ಳಬೇಕು: ಪೇಜಾವರ ಶ್ರೀ

Chaturmasya: ನಿತ್ಯ ಜೀವನದಲ್ಲಿ ರಾಮನಾಮ ಸ್ಮರಣೆ ಮಾಡಿದರೆ ಜೀವನ ಪಾವನ: ಪೇಜಾವರ ಶ್ರೀ

Election: ಅನಂತಕುಮಾರ ಹೆಗಡೆ ಅವರೇ ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ: ಕಾಗೇರಿ

Election: ಅನಂತಕುಮಾರ ಹೆಗಡೆ ಅವರೇ ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ: ಕಾಗೇರಿ

Yash 19; ರಾಜ್ಯೋತ್ಸವಕ್ಕೆ ಯಶ್‌ ಹೊಸ ಚಿತ್ರ ಘೋಷಣೆ?

Yash 19; ರಾಜ್ಯೋತ್ಸವಕ್ಕೆ ಯಶ್‌ ಹೊಸ ಚಿತ್ರ ಘೋಷಣೆ?

ಇಂಡಿಯಾದ ಮೈತ್ರಿಗಾಗಿ ರಾಜ್ಯದ ಹಿತ ಬಲಿ‌ ಕೊಡಲಾಗುತ್ತಿದೆ…: ಮಾಜಿ ಸ್ಪೀಕರ್

Sirsi: ಇಂಡಿಯಾದ ಮೈತ್ರಿಗಾಗಿ ರಾಜ್ಯದ ಹಿತ ಬಲಿ‌ ಕೊಡಲಾಗುತ್ತಿದೆ…: ಮಾಜಿ ಸ್ಪೀಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.