ಐಪಿಎಲ್‌-2023: ಚಾಂಪಿಯನ್‌ ಗುಜರಾತ್‌ಗೆ ಚೆನ್ನೈ ಸವಾಲು

ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ ಹಾರ್ದಿಕ್‌-ಧೋನಿ

Team Udayavani, Mar 31, 2023, 7:51 AM IST

guj che match

ಅಹ್ಮದಾಬಾದ್‌: ಕೋವಿಡ್‌ ನಂತರ ಮೊದಲ ಬಾರಿಗೆ ಐಪಿಎಲ್‌ ಉದ್ಘಾಟನಾ ಸಮಾರಂಭ ನಡೆಯಲಿದೆ. ಶುಕ್ರವಾರ ಈ ಸಮಾರಂಭ ಮುಗಿದ ಕೂಡಲೇ ಉದ್ಘಾಟನಾ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡವು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಯುವ ನಾಯಕ ಹಾರ್ದಿಕ್‌ ಪಾಂಡ್ಯ ಮತ್ತು ಅನುಭವಿ ಮಹೇಂದ್ರ ಸಿಂಗ್‌ ಧೋನಿ ನಡುವಣ ಹೋರಾಟವೂ ಆಗಿದೆ.
ಐಪಿಎಲ್‌ ನಾಯಕರಾಗಿ ಮೊದಲ ವರ್ಷವೇ ಹಾರ್ದಿಕ್‌ ಪಾಂಡ್ಯ ಮೈದಾನದ ಒಳಗೆ ಮತ್ತು ಹೊರಗೆ ಅಮೋಘ ನಿರ್ವಹಣೆ ದಾಖಲಿಸಿ ತಂಡಕ್ಕೆ ಪ್ರಶಸ್ತಿ ದೊರಕಿಸಿಕೊಟ್ಟಿದ್ದರು. ಅವರು ತಂಡವನ್ನು ಮುನ್ನಡೆಸಿದ ರೀತಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿತ್ತು. ಅವರ ಸಮರ್ಥ ನಾಯಕತ್ವದಿಂದಾಗಿ ಟೈಟಾನ್ಸ್‌ ಉಳಿದ ಯಾವುದೇ ತಂಡಗಳಿಗೆ ಸಾಟಿಯಾಗಲೇ ಇಲ್ಲ.

ಶುಭಮನ್‌ ಗಿಲ್‌ ಪ್ರಚಂಡ ಫಾರ್ಮ್ನಲ್ಲಿರುವುದು, ರಶೀದ್‌ ಖಾನ್‌ ಅವರ ಸ್ಥಿರ ನಿರ್ವಹಣೆ ಹಾಗೂ ಪಾಂಡ್ಯ ಅವರ ಚಿನ್ನದಂತ ಬ್ಯಾಟಿಂಗ್‌ ವೈಭವದಿಂದ ಗುಜರಾತ್‌ ಈ ಬಾರಿಯೂ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ, ಮಾತ್ರವಲ್ಲದೇ ಪ್ರಶಸ್ತಿ ಉಳಿಸಿಕೊಳ್ಳುವ ತಂಡವೆನಿಸಿದೆ. ಡೇವಿಡ್‌ ಮಿಲ್ಲರ್‌ ಅವರ ಅನುಪಸ್ಥಿತಿಯಿಂದ ತಂಡದ ಬ್ಯಾಟಿಂಗ್‌ ಬಲಕ್ಕೆ ಸ್ವಲ್ಪಮಟ್ಟಿನ ಹೊಡೆತ ಬೀಳಬಹುದು. ಆದರೆ ಸ್ಫೋಟಕ ಖ್ಯಾತಿಯ ರಾಹುಲ್‌ ತೆವಾತಿಯಾ ಅವರು ಮಿಲ್ಲರ್‌ ಅವರ ಅನುಪಸ್ಥಿತಿಯನ್ನು ಸರಿದೂಗಿಸಬಹುದು. ಕೇನ್‌ ವಿಲಿಯಮ್ಸನ್‌ ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಬಹಳಷ್ಟು ಮಿಂಚದಿದ್ದರೂ ಅವರೊಬ್ಬ ಪ್ರಚಂಡ ಬ್ಯಾಟರ್‌ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ತನ್ನ ಮೆಂಟರ್‌ ಆಗಿರುವ ಧೋನಿ ಅವರಿಂದ ನಾಯಕತ್ವದ ಗುಣಗಳನ್ನು ಕಲಿತಿರುವ ಹಾರ್ದಿಕ್‌ ಇದೀಗ ಗುಜರಾತ್‌ ತಂಡವನ್ನು ಆರಂಭಿಕ ವರ್ಷದಲ್ಲಿಯೇ ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿ ಹೊಂದಿದ್ದಾರೆ. ಅದನ್ನು ಈ ವರ್ಷವೂ ಮುಂದುವರಿಸುವ ತವಕದಲ್ಲಿ ಅವರಿದ್ದಾರೆ. ಆದರೆ 42ರ ಹರೆಯದ ಧೋನಿ ಅವರಿಗೆ ಐಪಿಎಲ್‌ನಲ್ಲಿ ಹೇಗೆ ಆಡಬೇಕು, ತಂಡವನ್ನು ಹೇಗೆ ಸಂಯೋಜಿಸಬೇಕೆಂಬುದು ಖಂಡಿತ ತಿಳಿದಿದೆ. ಇದರ ಹೊರತಾಗಿಯೂ ಚೆನ್ನೈ ಕಳೆದ ವರ್ಷ ಪ್ಲೇಆಫ್ಗೆ ತೇರ್ಗಡೆಯಾಗದಿರುವುದು ಅವರಿಗೆ ಬಹಳ ನೋವುಂಟು ಮಾಡಿದೆ.

ಇಂಪ್ಯಾಕ್ಟ್ ಪ್ಲೇಯರ್‌ ಆಗಿ ಸ್ಟೋಕ್ಸ್‌?: ಇದೇ ಮೊದಲ ಬಾರಿ ಐಪಿಎಲ್‌ನಲ್ಲಿ ಬಳಸುವ ಇಂಪ್ಯಾಕ್ಟ್ ಪ್ಲೇಯರ್‌ ನಿಯಮವನ್ನು ಚೆನ್ನೈ ಕಿಂಗ್ಸ್‌ ತಂಡ ಸೂಕ್ತವಾಗಿ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಸದ್ಯ ಇಂಗ್ಲೆಂಡ್‌ ಆಟಗಾರ, ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಬೌಲಿಂಗ್‌ ಮಾಡುವ ಸ್ಥಿತಿಯಲ್ಲಿಲ್ಲ. ಇಂಪ್ಯಾಕ್ಟ್ ಪ್ಲೇಯರ್‌ ನಿಯಮದಂತೆ ತಂಡವೊಂದು ಒಟ್ಟಾರೆ 12 ಆಟಗಾರರನ್ನು ಕಣಕ್ಕಿಳಿಸಬಹುದು. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸ್ಟೋಕ್ಸ್‌ ಚೆನ್ನೈ ಪರ ಇಂಪ್ಯಾಕ್ಟ್ ಪ್ಲೇಯರ್‌ ಆಗಲ್ದಿದಾರಾ?

ಚೆನ್ನೈ ಪರ ಬೆನ್‌ ಸ್ಟೋಕ್ಸ್‌ ಅವರು ಆಡುವುದರಿಂದ ಎದುರಾಳಿ ತಂಡಗಳು ಹೆಚ್ಚುವರಿ ಎಚ್ಚರಿಕೆ ವಹಿಸುವುದು ಖಚಿತ. ಅವರು ಆರಂಭದ ಕೆಲವು ಪಂದ್ಯಗಳಲ್ಲಿ ಹೇಗೂ ಬೌಲಿಂಗ್‌ ಮಾಡುವುದಿಲ್ಲ. ಅಲ್ಲದೇ ಫೀಲ್ಡಿಂಗ್‌ಗೆ ಅವರನ್ನು ಕಣಕ್ಕಿಳಿಸಿ ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ; ಒಟ್ಟಾರೆ 11ರ ತಂಡದಿಂದ ಹೊರಕ್ಕುಳಿಸಿ, ಬ್ಯಾಟಿಂಗ್‌ ವೇಳೆ ಇಂಪ್ಯಾಕ್ಟ್ ಪ್ಲೇಯರ್‌ ರೂಪದಲ್ಲೇ ಇಳಿಸುವುದು ಚೆನ್ನೈಗೆ ಗರಿಷ್ಠ ಲಾಭ ನೀಡಲಿದೆ. ಈ ಕಾರಣಕ್ಕಾಗಿ ಧೋನಿ ನಾಲ್ವರ ಬದಲಿಗೆ ಮೂವರು ವಿದೇಶಿ ಆಟಗಾರರನ್ನು ಆಡಿಸುವ ಬಗ್ಗೆ ಯೋಚಿಸುವ ಸಾಧ್ಯತೆಯಿದೆ.

ತಂಡಗಳ ಬಲಾಬಲವನ್ನು ಗಮನಿಸಿದರೆ ಎರಡೂ ತಂಡಗಳು ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. ಹೀಗಾಗಿ ಈ ಪಂದ್ಯ ತೀವ್ರ ಪೈಪೋಟಿಯಿಂದ ಸಾಗುವ ಸಾಧ್ಯತೆಯಿದೆ. ಗುಜರಾತ್‌ ತಂಡದಲ್ಲಿ ನಾಯಕ ಪಾಂಡ್ಯ ಅವರಲ್ಲದೇ ಗಿಲ್‌, ತೆವಾತಿಯಾ, ವಿಲಿಯಮ್ಸನ್‌, ಮ್ಯಾಥ್ಯೂ ವೇಡ್‌ ಹಾಗೂ ಬೌಲಿಂಗ್‌ನಲ್ಲಿ ರಶೀದ್‌ ಖಾನ್‌, ಶಿವಂ ಮಾವಿ, ಮೊಹಮ್ಮದ್‌ ಶಮಿ ಮುಂತಾದವರು ಇದ್ದಾರೆ. ಚೆನ್ನೈ ತಂಡದಲ್ಲಿ ನಾಯಕ ಧೋನಿ ಸೇರಿದಂತೆ ರವೀಂದ್ರ ಜಡೇಜ, ಡೆವೋನ್‌ ಕಾನ್ವೆ, ಋತುರಾಜ್‌ ಗಾಯಕ್ವಾಡ್‌, ಅಂಬಾಟಿ ರಾಯುಡು, ರಹಾನೆ ಮುಂತಾದವರಿದ್ದಾರೆ.

ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್, ಜಿಯೊ ಸಿನಿಮಾ

 

ಟಾಪ್ ನ್ಯೂಸ್

1-w-wewqe

Congress ದೌರ್ಜನ್ಯ ತಡೆಯಲು ಶೀಘ್ರದಲ್ಲೇ ಸಹಾಯವಾಣಿ: ತೇಜಸ್ವಿ ಸೂರ್ಯ

ಕಾರ್ಕಳ: ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಢಿಕ್ಕಿ: ಗಾಯ

ಕಾರ್ಕಳ: ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಢಿಕ್ಕಿ: ಗಾಯ

1-sadasd

ರೈಲು ದುರಂತ: ಕೋಲ್ಕತಾದಲ್ಲಿ ಸಂಕಷ್ಟ; ಕ್ರೀಡಾಪಟುಗಳಿಗೆ ರಾಜ್ಯ ಸರಕಾರದ ನೆರವು

train-track

Express train ಬರುವ ವೇಳೆ ಟ್ರ್ಯಾಕ್ ಮೇಲೆ ಲಾರಿ ಟೈರ್‌ ಗಳು; ಆರೋಪಿಗಳಿಗೆ ಶೋಧ

arrest-lady

NCB ಯಿಂದ ನಿಷೇಧಿತ ಮಾದಕವಸ್ತು ಸಹಿತ ಮಹಿಳೆಯ ಬಂಧನ

1-sadd

Odisha trains ಅವಘಡ: ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದದ್ದೇನು?

ಸೊರಗಿದ ಲಿಂಗನಮಕ್ಕಿ ನೀರ ಮಟ್ಟ; ಸದ್ಯದಲ್ಲೇ ನಿಲ್ಲಲಿದೆ ಹಸಿರುಮಕ್ಕಿ ಲಾಂಚ್

ಸೊರಗಿದ ಲಿಂಗನಮಕ್ಕಿ ನೀರ ಮಟ್ಟ; ಸದ್ಯದಲ್ಲೇ ಓಡಾಟ ನಿಲ್ಲಿಸಲಿದೆ ಹಸಿರುಮಕ್ಕಿ ಲಾಂಚ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WTC Final 2023: ಐಪಿಎಲ್ ನ ಆಟವನ್ನು ಮುಂದುವರಿಸುತ್ತೇನೆ ಎಂದ ಅಜಿಂಕ್ಯ ರಹಾನೆ

WTC Final 2023: ಐಪಿಎಲ್ ನ ಆಟವನ್ನು ಮುಂದುವರಿಸುತ್ತೇನೆ ಎಂದ ಅಜಿಂಕ್ಯ ರಹಾನೆ

WTC Final 2023: ಪಂದ್ಯ ರದ್ದಾದರೆ ಅಥವಾ ಡ್ರಾ ಆದರೆ ಚಾಂಪಿಯನ್ ಯಾರು?

WTC Final 2023: ಪಂದ್ಯ ರದ್ದಾದರೆ ಅಥವಾ ಡ್ರಾ ಆದರೆ ಚಾಂಪಿಯನ್ ಯಾರು?

thumb-4

ಈ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗುತ್ತೇನೆ: ವಾರ್ನರ್ ಅಚ್ಚರಿಯ ಹೇಳಿಕೆ

1-sad-asd

ODI series ಶ್ರೀಲಂಕಾದಲ್ಲಿ ಆಡಲು ನಿರಾಕರಿಸಿದ ಪಾಕ್ : ವರದಿ

thumb-1

ಸಚಿನ್ ಅಲ್ಲ, ಈತ ಏಷ್ಯಾದ ಅತ್ಯುತ್ತಮ ಆಟಗಾರ: ಮಾಜಿ ಪಾಕ್ ನಾಯಕನ ಹೆಸರು ಸೂಚಿಸಿದ ಸೆಹವಾಗ್

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

1-werr

ಲಂಚ ನೀಡಬೇಡಿ, ಮಧ್ಯವರ್ತಿಗಳ ಬಗ್ಗೆ ಎಚ್ಚರದಿಂದಿರಿ: ಶಾಸಕ ಹರೀಶ್‌ಗೌಡ

1-qwrewq

ಸಿಡಿಲಿಗೆ ಬಲಿಯಾಗಿದ್ದ ಹರೀಶ್ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ವಿತರಣೆ

1-w-wewqe

Congress ದೌರ್ಜನ್ಯ ತಡೆಯಲು ಶೀಘ್ರದಲ್ಲೇ ಸಹಾಯವಾಣಿ: ತೇಜಸ್ವಿ ಸೂರ್ಯ

ಕಾರ್ಕಳ: ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಢಿಕ್ಕಿ: ಗಾಯ

ಕಾರ್ಕಳ: ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಢಿಕ್ಕಿ: ಗಾಯ

1-sadasd

ರೈಲು ದುರಂತ: ಕೋಲ್ಕತಾದಲ್ಲಿ ಸಂಕಷ್ಟ; ಕ್ರೀಡಾಪಟುಗಳಿಗೆ ರಾಜ್ಯ ಸರಕಾರದ ನೆರವು