

Team Udayavani, May 5, 2023, 7:32 AM IST
ಜೈಪುರ: ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡವು ಶುಕ್ರವಾರದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ವನ್ನು ಸೋಲಿಸುವ ಮೂಲಕ ರಾಜ ಸ್ಥಾನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕ್ಕೇರಲು ಹೋರಾಡಲಿದೆ.
ಗುಜರಾತ್ ಮತ್ತು ರಾಜಸ್ಥಾನ್ ಈ ಹಿಂದಿನ ಪಂದ್ಯದಲ್ಲಿ ಸೋಲನ್ನು ಕಂಡಿತ್ತು. ಇದೀಗ ಗೆಲುವಿನ ಟ್ರ್ಯಾಕ್‌ಗೆ ಮರಳಲು ಬಯಸುತ್ತಿದೆ. ಡೆಲ್ಲಿ ವಿರುದ್ಧ 5 ರನ್ನುಗಳಿಂದ ಸೋತಿದ್ದ ಗುಜರಾತ್ ಸದ್ಯ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. 10 ಅಂಕ ಗಳಿಸಿರುವ ರಾಜಸ್ಥಾನ್ ನಾಲ್ಕನೇ ಸ್ಥಾನದಲ್ಲಿದೆ. ಒಂದು ವೇಳೆ ರಾಜಸ್ಥಾನ ಶುಕ್ರವಾರದ ಪಂದ್ಯದಲ್ಲಿ ಗೆದ್ದರೆ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಅಗ್ರಸ್ಥಾನ ಕ್ಕೇರುವ ಸಾಧ್ಯತೆಯಿದೆ.
ಸಂಜು ಸ್ಯಾಮ್ಸನ್ ನಾಯಕತ್ವದ ತಂಡದಲ್ಲಿ ಹಲವು ಪ್ರತಿಭಾವಂತ ಆಟಗಾರರಿದ್ದಾರೆ. ಆದರೆ ಅವರು ತಂಡವನ್ನು ವಿಜಯದ ಕಡೆಗೆ ಕೊಂಡೊಯ್ಯಲು ವಿಫಲರಾಗುತ್ತಿದ್ದಾರೆ. ಕಳೆದ ಆರು ಪಂದ್ಯಗಳಲ್ಲಿ ರಾಜಸ್ಥಾನ್ ಮೂರರಲ್ಲಿ ಸೋತಿದ್ದರೆ ಮೂರರಲ್ಲಿ ಜಯ ಸಾಧಿಸಿತ್ತು.
ರಾಜಸ್ಥಾನ್ ಈ ಹಿಂದಿನ ಪಂದ್ಯ ದಲ್ಲಿ ಮುಂಬೈ ವಿರುದ್ಧ 7 ವಿಕೆಟಿಗೆ 212 ರನ್ನುಗಳ ಬೃಹತ್ ಮೊತ್ತ ಪೇರಿ ಸಿಯೂ ಬೌಲಿಂಗ್ ವಿಭಾಗದಲ್ಲಿನ ವೈಫಲ್ಯದಿಂದಾಗಿ ಆರು ವಿಕೆಟ್‌ಗಳಿಂದ ಸೋಲನ್ನು ಕಂಡಿತ್ತು. ವೇಗಿಗಳಾದ ಟ್ರೆಂಟ್ ಬೌಲ್ಟ್, ಆಲ್‌ರೌಂಡರ್ ಹೋಲ್ಡರ್, ಚಹಲ್ ಮತ್ತು ಕುಲದೀಪ್ ಸೆನ್ ದುಬಾರಿಯಾಗಿದ್ದರು. ಇದರಿಂದ ಮುಂಬೈ 4 ವಿಕೆಟಿಗೆ 214 ರನ್ ಗಳಿಸಿ ಜಯಭೇರಿ ಬಾರಿಸಿತ್ತು.
ಗೆಲುವಿನ ಖುಷಿ
ಮೊದಲ ಸುತ್ತಿನ ಹೋರಾಟದಲ್ಲಿ ರಾಜಸ್ಥಾನ್ ತಂಡವು ಗುಜರಾತ್ ತಂಡ ವನ್ನು 3 ವಿಕೆಟ್‌ಗಳಿಂದ ಸೋಲಿಸಿದ ಉತ್ಸಾಹದಲ್ಲಿದೆ. ಆ ಪಂದ್ಯದಲ್ಲಿ ಗುಜ ರಾತ್ ಮೊದಲು ಬ್ಯಾಟಿಂಗ್ ನಡೆಸಿ 7 ವಿಕೆಟಿಗೆ 177 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಸಂಜು ಸ್ಯಾಮ್ಸನ್ ಮತ್ತು ಹೆಟ್‌ಮೈರ್ ಅವರ ಉಪಯುಕ್ತ ಆಟದಿಂದಾಗಿ ರಾಜಸ್ಥಾನ್ 7 ವಿಕೆಟಿಗೆ 179 ರನ್ ಗಳಿಸಿ ಗೆಲುವು ಸಾಧಿಸಿತ್ತು.
ರಾಜಸ್ಥಾನದ ಬ್ಯಾಟಿಂಗ್ ಬಲಿಷ್ಠ ವಾಗಿದೆ. ಯುವ ಆಟಗಾರ ಯಶಸ್ವಿ ಜೈಸ್ವಾಲ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಇಂಗ್ಲೆಂಡಿನ ಜಾಸ್ ಬಟ್ಲರ್, ಸ್ಯಾಮ್ಸನ್ ಮತ್ತು ಹೆಟ್‌ಮೈರ್ ಸ್ಫೋಟಕವಾಗಿ ಆಡಿದರೆ ರಾಜಸ್ಥಾನ್ ಮೇಲುಗೈ ಸಾಧಿಸಬಹುದು.
ಇದೇ ವೇಳೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಗುಜರಾತ್ ಡೆಲ್ಲಿ ವಿರುದ್ಧ 130 ರನ್ನುಗಳ ಗುರಿ ಯನ್ನು ತಲುಪಲು ವಿಫಲವಾಗಿ ತನ್ನ ಬ್ಯಾಟಿಂಗ್ ವೈಫಲ್ಯವನ್ನು ಬಹಿರಂಗ ಗೊಳಿಸಿತ್ತು. ಫಾರ್ಮ್ನಲ್ಲಿದ್ದ ಗಿಲ್, ಡೇವಿಡ್ ಮಿಲ್ಲರ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರು. 32 ರನ್ ಗಳಿಸುವಷ್ಟರಲ್ಲಿ ತಂಡ ನಾಲ್ಕು ವಿಕೆಟ್ ಕಳೆದುಕೊಂಡು ಒದ್ದಾಡು ತ್ತಿತ್ತು. ನಾಯಕ ಹಾರ್ದಿಕ್ ಪಾಂಡ್ಯ ಏಕಾಂಗಿಯಾಗಿ ಹೋರಾಡಿದರೂ ತಂಡಕ್ಕೆ ಗೆಲುವು ದೊರಕಿಸಿಕೊಡಲು ಅಸಮರ್ಥರಾಗಿದ್ದರು.
Ad
AUS vs WI : ಕೇವಲ 27 ರನ್‌ಗೆ ಆಲೌಟ್ ಆದ ವೆಸ್ಟ್ ಇಂಡೀಸ್ – ತವರಿನಲ್ಲೇ ವೈಟ್ ವಾಶ್
Karnataka: 173 ಕಿ.ಮೀ. ಓಡಿ ಜಪಾನ್ ರೇಸ್ ಗೆದ್ದ ಕನ್ನಡತಿ ಅಶ್ವಿನಿ ಗಣಪತಿ!
FIDE ಮಹಿಳಾ ವಿಶ್ವಕಪ್ ಚೆಸ್: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ
Tokyo ಜಪಾನ್ ಬ್ಯಾಡ್ಮಿಂಟನ್: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ
IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್ ಆರೋನ್ ಬೌಲಿಂಗ್ ಕೋಚ್
ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಸಿನಿಮಾ: ʼರಾಮಾಯಣʼದ ಬಜೆಟ್ ಎಷ್ಟು ಗೊತ್ತಾ?
Hubballi: ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆ ದಾಖಲಾಗಿದ್ದ ಯುವಕ ಚಿಕೆತ್ಸೆ ಫಲಿಸದೆ ಮೃ*ತ್ಯು
ಮಂಗಳೂರೂ: ನೂಯಿ-ಪೊಳಲಿ ದ್ವಾರ ರಸ್ತೆಯೇ ಸವಾಲು; ಇಲ್ಲಿ ರಸ್ತೆ ರಚನೆ ಹೇಗೆ?
Gangolli: ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆ, ಓರ್ವ ರಕ್ಷಣೆ
ಪುತ್ತೂರು-ಮಂಗಳೂರು ತಡೆರಹಿತ ಎಕ್ಸ್‌ಪ್ರೆಸ್‌ಗೆ ಚಾಲನೆ: 7 ಬಸ್; ದಿನಕ್ಕೆ 60 ಟ್ರಿಪ್
You seem to have an Ad Blocker on.
To continue reading, please turn it off or whitelist Udayavani.