
ಬಸ್ ಚಾಲಕನಿಗೆ ಜೈಲು ಶಿಕ್ಷೆ
Team Udayavani, Mar 25, 2023, 5:00 AM IST

ಅರಂತೋಡು: ಇಲ್ಲಿನ ಬಿಳಿಯಾರು ಎಂಬಲ್ಲಿ 2018ರ ಫೆ. 12ರಂದು ಕೆವಿಜಿಯ ಐಪಿಎಸ್ ಶಾಲೆಯ ಒಂದನೆಯ ತರಗತಿ ವಿದ್ಯಾರ್ಥಿನಿ ಆಗ್ನೆಯ ಬಾಲು ಬಸ್ಸಿನ ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಶಾಲಾ ಬಸ್ ಚಾಲಕ ಧನಂಜಯ ಅವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಘಟನೆಗೆ ಸಂಬಂಧಿಸಿ ಅಂದಿನ ತನಿಖಾಧಿಕಾರಿ ಸರ್ಕಲ್ ಇನ್‌ಸ್ಪೆಕ್ಟರ್ ಸತೀಶ್ ಕುಮಾರ್ ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕ ಧನಂಜಯ ಮತ್ತು ಬಸ್ಸಿನ ಉಸ್ತುವಾರಿ ದಿನೇಶ್ ಮೇಲೆ ದೋಷರೋಪಣ ಪತ್ರವನ್ನು ಕೋರ್ಟಿಗೆ ಸಲ್ಲಿಸಿದ್ದರು.
ತನಿಖೆ ನಡೆಸಿರುವ ನ್ಯಾಯಾಲಯ ಮಾ. 23ರಂದು ತೀರ್ಪು ನೀಡಿದ್ದು , ಚಾಲಕ ಧನಂಜಯನಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 5,000 ರೂ. ದಂಡ, ದಂಡ ಕಟ್ಟಲು ತಪ್ಪಿದರೆ ಒಂದು ತಿಂಗಳು ಸಜೆ ವಿಧಿಸಿದೆ. ಎರಡನೇ ಆರೋಪಿ ದಿನೇಶ್‌ನನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
