
ಚಿನ್ನಾಭರಣ ಕಳ್ಳತನ: ಆರೋಪಿ ಬಂಧನ
Team Udayavani, Mar 30, 2023, 5:31 AM IST

ವಿಟ್ಲ: ಕೆಲಸದವ ಅಂಗಡಿ ಮಾಲಕನ ಮನೆಯಲ್ಲಿ ಚಿನ್ನಾಭರಣ ಕಳ್ಳತನ ನಡೆಸಿದ ಪ್ರಕರಣ ವಿಟ್ಲ ಕಸಬ ಗ್ರಾಮದ ರಂಗರಮಜಲು ಎಂಬಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮನು ಅಲಿಯಾಸ್ ಮನೋಹರ ಬಂಧಿತ ಆರೋಪಿ.
ಜ 20 ರಿಂದ ಮಾ 20 ರವರೆಗೆ ಎರಡು ತಿಂಗಳ ಕಾಲ ವಿಟ್ಲಕಸಬಾ ಗ್ರಾಮದ ರಂಗರಮಜಲು ಮುರಳೀಧರ ಅವರ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡ ಆರೋಪಿಯು ಒಟ್ಟು 3,20,000 ಮೌಲ್ಯದ ಒಟ್ಟು 64 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನಗೈದಿದ್ದ.
ಈ ಕುರಿತು ಮುರಳೀಧರ ಅವರು ಠಾಣೆಗೆ ದೂರು ನೀಢಿದ್ದು, ವಿಚಾರಿಸಿದಾಗ ತಪ್ಪೊಪ್ಪಿಕೊಂಡ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
