
400 ವರ್ಷಗಳ ಹಿಂದೆ ಸಂಭವಿಸಿತ್ತು ಸಂಗಮ!ಬಾಹ್ಯಾಕಾಶದಲ್ಲಿ ಡಿ.21ರ ರಾತ್ರಿ ಸಹಸ್ರಮಾನದ ಅಚ್ಚರಿ
ಇಂದು ರಾತ್ರಿ ಗುರು ಮತ್ತು ಶನಿ ಗ್ರಹದ ಸಂಗಮ ನಡೆಯಲಿದೆ.
Team Udayavani, Dec 21, 2020, 6:32 PM IST

ಮಣಿಪಾಲ: ಬಾಹ್ಯಾಕಾಶ (ನಭೋಮಂಡಲ)ದಲ್ಲಿ ಶತಮಾನ/ಸಹಸ್ರಮಾನಗಳಿಗೊಮ್ಮೆ ನಡೆಯುವ ಕೌತುಕಕ್ಕೆ ಸೋಮವಾರ(ಡಿಸೆಂಬರ್ 21, 2020) ಮತ್ತೊಮ್ಮೆ ಸಾಕ್ಷಿಯಾಗಲಿದ್ದು, ಇಂದು ರಾತ್ರಿ ಗುರು ಮತ್ತು ಶನಿ ಗ್ರಹದ ಸಂಗಮ ನಡೆಯಲಿದೆ. ಇಂತಹ ಅತ್ಯಪರೂಪದ ಘಟನೆ ಬರೋಬ್ಬರಿ 400 ವರ್ಷಗಳ(1623) ಹಿಂದೆ ಸಂಭವಿಸಿತ್ತು. ಇನ್ನು 2080ರಲ್ಲಿ ಮುಂದಿನ ಸಂಗಮ ಸಂಭವಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ವಿಜ್ಞಾನಿಗಳ ಪ್ರಕಾರ, ಸೋಮವಾರ ರಾತ್ರಿ 6.30ರಿಂದ 7-30ರವರೆಗೆ ಗುರು ಮತ್ತು ಶನಿ ಗ್ರಹದ ಸಂಗಮ ನಡೆಯಲಿದ್ದು, ಇದರ ವೀಕ್ಷಣೆಗಾಗಿ ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಾರಾಲಯದ ಅಧಿಕಾರಿಗಳು ಐಎಎನ್ ಎಸ್ ಗೆ ತಿಳಿಸಿದ್ದಾರೆ.
ಸೂರ್ಯನಿಂದ 150 ಕಿಲೋ ಮೀಟರ್ ದೂರದಲ್ಲಿರುವ ಶನಿಗ್ರಹ ಮತ್ತು ಸೂರ್ಯನಿಂದ 76 ಕೋಟಿ ಕಿಲೋ ಮೀಟರ್ ದೂರದಲ್ಲಿರುವ ಗುರು ಗ್ರಹ ಡಿಸೆಂಬರ್ 21ರ ರಾತ್ರಿ ಒಂದೇ ಜಾಗದಲ್ಲಿ ಸಂಧಿಸುವ ಅಪರೂಪದ ಘಟನೆ ನಡೆಯಲಿದೆ.
ಇದನ್ನೂ ಓದಿ:ಕೋವಿಡ್ ಹೊಸ ಪ್ರಭೇದ..ಎಚ್ಚರ ಅಗತ್ಯ; ರಾಜ್ಯದಲ್ಲಿ ಸದ್ಯ ಲಾಕ್ ಡೌನ್ ಇಲ್ಲ: ಸಚಿವ ಸುಧಾಕರ್
ಸೌರಮಂಡಲದಲ್ಲಿ ನಡೆಯಲಿರುವ ಈ ಸಹಸ್ರಮಾನದ ಕೌತುಕ ವೀಕ್ಷಿಸಲು ಇಡೀ ಜಗತ್ತಿನಾದ್ಯಂತ ವಿಜ್ಞಾನಿಗಳು ಸೇರಿದಂತೆ ಆಸಕ್ತರು ಕಾದು ಕುಳಿತಿದಿದ್ದಾರೆ. ಎಲ್ಲಾ ಗ್ರಹಗಳಿಗಿಂತ ಗುರು ಅತ್ಯಂತ ದೊಡ್ಡ ಗ್ರಹ. ಇಂದು ಎರಡೂ ಗ್ರಹಗಳು ಸಮೀಪ ಬಂದಾಗ ಉಭಯ ಗ್ರಹಗಳ ನಡುವೆ 45 ಕೋಟಿ ಕಿಲೋ ಮೀಟರ್ ಅಂತರವಿರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajasthan Election; ಬಿಜೆಪಿ ಸಂಸದ ರಮೇಶ್ ಬಿಧುರಿಗೆ ಚುನಾವಣಾ ಜವಾಬ್ದಾರಿ

Kashmir; ಈ ವರ್ಷ ಜಂಟಿ ಕಾರ್ಯಾಚರಣೆಯಲ್ಲಿ 31 ಭಯೋತ್ಪಾದಕರ ಅಂತ್ಯ

Thane ನಕಲಿ ಕರೆನ್ಸಿ ಪ್ರಕರಣ; ಉಗ್ರ’ಅಂಕಲ್’ಸೇರಿ ನಾಲ್ವರ ವಿರುದ್ಧ ಎನ್ಐಎ ಚಾರ್ಜ್ ಶೀಟ್

Miracle: ಈ ರೋಗಿಯ ಹೊಟ್ಟೆಯಲ್ಲಿತ್ತು ನಟ್, ಬೋಲ್ಟ್ ಸೇರಿ 15 ಕ್ಕೂ ಹೆಚ್ಚು ವಸ್ತುಗಳು…

Hyderabad: 1.25 ಕೋಟಿ ರೂ. ಗೆ ಹರಾಜಾಯಿತು ಗಣಪತಿಯ ಲಡ್ಡು ಪ್ರಸಾದ
MUST WATCH
ಹೊಸ ಸೇರ್ಪಡೆ

Hunsur: ಶುಕ್ರವಾರ ಬಹುತೇಕ ಬಂದ್; ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

World Cup 2023 ಭಾರತ ತಂಡ; ಗಾಯಾಳು ಅಕ್ಷರ್ ಪಟೇಲ್ ಬದಲಿಗೆ ಅನುಭವಿ ಸ್ಪಿನ್ನರ್ ಆಯ್ಕೆ

Chikkaballapur: ನಾಳೆ ಶಾಲಾ, ಕಾಲೇಜುಗಳಿಗೆ ರಜೆ ಇಲ್ಲ

Karnataka Bandh; ದಕ್ಷಿಣ ಕನ್ನಡ, ಉಡುಪಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

World Cup Cricket ; ಯಾವುದೇ ತಂಡದ ಆಟಗಾರರಿಗೆ ಗೋಮಾಂಸ ಲಭ್ಯವಿಲ್ಲ