ಈಶ್ವರಪ್ಪಗೆ ಇನ್ನೂ ಮುಗಿದಿಲ್ಲ ಸಂಕಷ್ಟ ?
ಸಂತೋಷ್ ಪ್ರಕರಣದ ಬಿ ವರದಿಯ ಸಾಕ್ಷ್ಯ ಸಲ್ಲಿಸಲು ಕೋರ್ಟ್ ಸೂಚನೆ
Team Udayavani, Jan 7, 2023, 7:40 AM IST
ಬೆಂಗಳೂರು: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಕಾರಣವಾಗಿದ್ದ ಸಂತೋಷ್ ಪಾಟೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು “ಬಿ’ ವರದಿಯಲ್ಲಿ ಉಲ್ಲೇಖಿಸಿರುವ ಸಾಕ್ಷ್ಯ ಹಾಜರುಪಡಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚನೆ ಕೊಟ್ಟಿದೆ.
ಸಂತೋಷ್ ಪಾಟೀಲ್ 2 ಮೊಬೈಲ್ ಗಳ ಡಾಟಾದ ಸಂಪೂರ್ಣ ಮಾಹಿತಿ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಬಂದ ಸಂಪೂರ್ಣ ತಾಂತ್ರಿಕ ಸಾಕ್ಷ್ಯ, ಮೃತದೇಹ ಸಿಕ್ಕ ಹೋಟೆಲ್ ಸಿಸಿ ಕ್ಯಾಮರಾ, ಎಫ್ಎಸ್ಎಲ್ ನಿಂದ ಪಡೆದಿರುವ ಹಾರ್ಡ್ ಡಿಸ್ಕ್ ಸೇರಿ ಪ್ರತಿ ಸಾಕ್ಷ್ಯವನ್ನು ಕೋರ್ಟ್ಗೆ ಹಾಜರುಪಡಿಸಬೇಕು. ಪೊಲೀಸರು ಮಾಡಿದ ವಿಡಿಯೋವನ್ನು ಜ.31ರಂದು ತನಿಖಾಧಿಕಾರಿಯೇ ಖುದ್ದು ಕೋರ್ಟ್ ಮುಂದೆ ಹಾಜರಾಗಿ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.
ಕೋರ್ಟ್ಗೆ ಮನವಿ: ಪೊಲೀಸರೇ ಉಲ್ಲೇಖಿಸಿರುವ ಸಾಕ್ಷ್ಯಗಳನ್ನು ಕೋರ್ಟ್ಗೆ ಹಾಜರುಪಡಿಸಿಲ್ಲ. ಹೀಗಾಗಿ ಪೊಲೀಸರ ಬಳಿ ಇರುವ ಸಾಕ್ಷ್ಯ ಹಾಜರುಪಡಿಸಿದರೆ ನಿಜ ಸಂಗತಿ ಬೆಳಕಿಗೆ ಬರುವ ಸಾಧ್ಯತೆಗಳಿವೆ. ಹೀಗಾಗಿ ಕೋರ್ಟ್ ಮುಂದೆ ಸಾಕ್ಷಿ ಹಾಜರುಪಡಿಸಲು ಸೂಚಿಸಬೇಕೆಂದು ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಪಾಟೀಲ್ ಕೋರ್ಟ್ಗೆ ಮನವಿ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ