
ಕಲಬುರಗಿ: ಹಾಡಹಗಲೇ ದುಷ್ಕರ್ಮಿಗಳಿಂದ ಮಾಜಿ MLC ಪುತ್ರನಿಗೆ ಸೇರಿದ 3.50 ಲಕ್ಷ ಹಣ ಲೂಟಿ
Team Udayavani, Jun 29, 2021, 8:28 PM IST

ಕಲಬುರಗಿ: ಕಾಂಗ್ರೆಸ್ ಮುಖಂಡರಾದ ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ ಪುತ್ರ ಜಯಪ್ರಕಾಶ ಕಮಕನೂರ ಅವರಿಗೆ ಸೇರಿದ 3.50 ಲಕ್ಷ ರೂ. ನಗದು ಹಣವನ್ನು ದುಷ್ಕರ್ಮಿಗಳು ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ಸೂಪರ್ ಮಾರ್ಕೆಟ್ ನ ಮುಖ್ಯರಸ್ತೆಯ ವಾದಿರಾಜ ಭವನದ ಹತ್ತಿರ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಜಯಪ್ರಕಾಶ ಎಕ್ಸಿಸ್ ಬ್ಯಾಂಕ್ ನಿಂದ 3.50 ಲಕ್ಷ ರೂಪಾಯಿ ನಗದು ಡ್ರಾ ಮಾಡಿಕೊಂಡು ಬಂದು ಬುಲೆರೋ ವಾಹನದಲ್ಲಿರಿಸಿದ್ದರು. ನಂತರ ಚಾಲಕನನ್ನು ವಾಹನದ ಬಳಿಯೇ ಇರಲು ಹೇಳಿ ಬೇರೆಡೆ ಹೋಗಿದ್ದರು.
ಈ ವೇಳೆ ಬೈಕ್ ಮೇಲೆ ಬಂದ ನಾಲ್ವರು ಖದೀಮರು ಚಾಲಕನ ಮೈಮೇಲೆ ಕೆಂಪು ಬಣ್ಣದ ದ್ರವ ಎಚರಿ ರಕ್ತ ಬಿದ್ದಿದೆ ನೋಡಿ ಎಂದು ಹೇಳಿ ಆತನ ಗಮನವನ್ನು ಬೇರೆಡೆ ಸೆಳೆದಿದ್ದಾರೆ. ಅಷ್ಟರಲ್ಲೇ ಬುಲೆರೋ ವಾಹನದಲ್ಲಿದ್ದ ಹಣದ ಬ್ಯಾಗ್ ನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಇದನ್ನೂ ಓದಿ :ಹೊರಗುತ್ತಿಗೆ ಸಿಬ್ಬಂದಿಗೆ ನಿಯಮಿತವಾಗಿ ವೇತನ ನೀಡದಿದ್ದರೆ ಶಿಸ್ತುಕ್ರಮ : ಸಚಿವ ಸುಧಾಕರ್
ಹಾಡಹಗಲೇ ನಡೆದ ಈ ಘಟನೆಯಿಂದ ಚಾಲಕ ಸೇರಿದಂತೆ ಅಲ್ಲಿದ್ದ ಜನ ಬೆಚ್ಚಿ ಬಿದ್ದಿದ್ದಾರೆ. ಈ ಬಗ್ಗೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆದಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ವಿಕಾಸದ ಸಿದ್ಧಾಂತದ ನಂತರ ಪಠ್ಯಪುಸ್ತಕದಿಂದ ಆವರ್ತಕ ಕೋಷ್ಟಕವನ್ನು ತೆಗೆದುಹಾಕಿದ NCERT

Haryana ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ 10 ಶಾರ್ಪ್ ಶೂಟರ್ ಗಳ ಬಂಧನ

Protesting wrestlers ತಮ್ಮ ಬೇಡಿಕೆಗಳನ್ನು ಬದಲಾಯಿಸುತ್ತಿದ್ದಾರೆ: ಬ್ರಿಜ್ ಭೂಷಣ್

Free Bus Pass ಕೊಡುವವರು ಮಹಿಳೆಯರ ರಕ್ಷಣೆ ಬಗ್ಗೆ ಯೋಚನೆ ಮಾಡುತ್ತಿಲ್ಲ: ವಿಜಯೇಂದ್ರ

Krishna River ಒಂದು ಟಿಎಂಸಿ ನೀರು ಮಾತ್ರ; 15 ದಿನ ಯಾವುದೆ ಸಮಸ್ಯೆ ಇಲ್ಲ