ಕಾಸರಗೋಡು : 4 ಮಂದಿಗೆ ಕೋವಿಡ್ ಸೋಂಕು ದೃಢ
Team Udayavani, Jul 8, 2020, 8:02 PM IST
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 4 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 9 ಮಂದಿಗೆ ಜಿಲ್ಲೆಯಲ್ಲಿ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಸೌದಿಯಿಂದ ಬಂದಿದ್ದ ಮಂಜೇಶ್ವರ ಪಂಚಾಯತ್‌ನ 55 ವರ್ಷದ ನಿವಾಸಿ ಮಹಿಳೆ, ಇವರ ಒಂದು ವರ್ಷ ಪ್ರಾಯದ ಮೊಮ್ಮಗು, ಕುವೈತ್ ನಿಂದ ಆಗಮಿಸಿದ್ದ ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ 39 ವರ್ಷದ ನಿವಾಸಿ, ಒಮಾನ್‌ನಿಂದ ಬಂದಿದ್ದ ಪಳ್ಳಿಕ್ಕರೆ ಪಂಚಾಯತ್‌ನ 49 ವರ್ಷದ ನಿವಾಸಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಕೋವಿಡ್ ನೆಗೆಟಿವ್ ಆದವರು : ಉದಯಗಿರಿ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ ಪಳ್ಳಿಕ್ಕರೆ ಪಂಚಾಯತ್ ನ 25 ವರ್ಷದ ನಿವಾಸಿ, ಉದುಮ ಪಂಚಾಯತ್‌ನ 38 ವರ್ಷದ ನಿವಾಸಿ, ಕಾರಡ್ಕ ಪಂಚಾಯತ್‌ನ ತಲಾ 33 ವರ್ಷದ ನಿವಾಸಿಗಳಾದ ಇಬ್ಬರು, ಚೆಮ್ನಾಡ್ ಪಂಚಾಯತ್‌ನ 34 ವರ್ಷದ ನಿವಾಸಿ, ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಮೀಂಜ ಪಂಚಾಯತ್‌ನ 43 ವರ್ಷದ ನಿವಾಸಿ, ಮಂಗಲ್ಪಾಡಿ ಪಂಚಾಯತ್‌ನ 41 ವರ್ಷದ ನಿವಾಸಿ, ಅಂಜರಕಂಡಿ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ಕಿನಾನೂರು – ಕರಿಂದಳಂ ಪಂಚಾಯತ್‌ನ 45 ವರ್ಷದ ನಿವಾಸಿ, ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ 38 ವರ್ಷದ ನಿವಾಸಿ ಗುಣಮುಖರಾದವರು.
ಕಾಸರಗೋಡು ಜಿಲ್ಲೆಯಲ್ಲಿ 6828 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 6513, ಸಾಂಸ್ಥಿಕ ನಿಗಾದಲ್ಲಿ 315 ಮಂದಿ ಇದ್ದಾರೆ. ನೂತನವಾಗಿ 353 ಮಂದಿ ನಿಗಾ ಪ್ರವೇಶಿಸಿದ್ದಾರೆ. ಬುಧವಾರ 562 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 498 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 818 ಮಂದಿಯ ತಪಾಸಣೆ ಫಲಿತಾಂಶ ಲಭಿಸಿಲ್ಲ.
ಪ್ರಥಮ ವರದಿಯಲ್ಲಿ ಪಾಸಿಟಿವ್ : ಕರ್ನಾಟಕದ ಹುಬ್ಬಳ್ಳಿಯಿಂದ ಜ್ವರ ನಿಮಿತ್ತ ಊರಿಗೆ ಬಂದು ಸಾವಿಗೀಡಾದ ವ್ಯಾಪಾರಿಯ ಗಂಟಲ ದ್ರವ ಪರೀಕ್ಷೆಯ ಪ್ರಥಮ ವರದಿ ಪಾಸಿಟಿವ್ ಆಗಿದೆ. ಪರಿಯಾರಂ ಮೆಡಿಕಲ್ ಕಾಲೇಜಿಗೆ ಕಳುಹಿಸಿದ ಗಂಟಲ ದ್ರವದ ಅಂತಿಮ ತಪಾಸಣೆ ವರದಿ ಲಭಿಸಿದರೇ ಮಾತ್ರವೇ ಸಾವಿಗೆ ಕಾರಣ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದಲ್ಲಿ 301 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಬುಧವಾರ 301 ಮಂದಿಗೆ ಕೋವಿಡ್ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 107 ಮಂದಿ ಗುಣಮುಖರಾಗಿದ್ದಾರೆ.
ತಿರುವನಂತಪುರ-64, ಮಲಪ್ಪುರ-46, ತೃಶ್ಶೂರು-25, ಪಾಲಾ^ಟ್-25, ಕಣ್ಣೂರು-22, ಇಡುಕ್ಕಿ-20, ಆಲಪ್ಪುಳ-18, ಕೋಟ್ಟಯಂ-17, ಎರ್ನಾಕುಳಂ-16, ಕಲ್ಲಿಕೋಟೆ-15, ವಯನಾಡು-14, ಕೊಲ್ಲಂ-8, ಪತ್ತನಂತಿಟ್ಟ-7,ಕಾಸರಗೋಡು-4 ಎಂಬಂತೆ ರೋಗ ಬಾಧಿಸಿದೆ.
ರೋಗ ಬಾಧಿತರಲ್ಲಿ 99 ಮಂದಿ ವಿದೇಶದಿಂದಲೂ, 95 ಮಂದಿ ಇತರ ರಾಜ್ಯಗಳಿಂದಲೂ ಬಂದವರು. 90 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ.
ಮೂವರು ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ. ತೃಶ್ಶೂರು ಜಿಲ್ಲೆಯಲ್ಲಿ 9 ಮಂದಿ ಬಿ.ಎಸ್.ಎಫ್. ಜವಾನರಿಗೂ, ಕಣ್ಣೂರು ಜಿಲ್ಲೆಯಲ್ಲಿ ಒಬ್ಬರು ಸಿ.ಐ.ಎಸ್.ಎಫ್. ಜವಾನರಿಗೂ, ಒಬ್ಬರು ಡಿ.ಎಸ್.ಸಿ. ಜವಾನರಿಗೂ, ಆಲಪ್ಪುಳದಲ್ಲಿ 3 ಮಂದಿ ಇಂಡೋ ಟಿಬೇಟ್ ಬೋರ್ಡರ್ ಪೊಲೀಸರಿಗೆ ರೋಗ ಬಾಧಿಸಿದೆ.
ಕೊಲ್ಲಂ-23, ಆಲಪ್ಪುಳ-16, ಎರ್ನಾಕುಳಂ-13(ಕಣ್ಣೂರು-1), ತೃಶ್ಶೂರು-11, ಮಲಪ್ಪುರಂ-11, ಪಾಲಾ^ಟ್-9, ಕಲ್ಲಿಕೋಟೆ(ಮಲಪ್ಪುರಂ-1), ಕಾಸರಗೋಡು-7, ತಿರುವನಂತಪುರ-6(ಪತ್ತನಂತಿಟ್ಟ-1), ಪತ್ತನಂತಿಟ್ಟ-3, ಕಣ್ಣೂರು-1 ಎಂಬಂತೆ ಗುಣಮುಖರಾಗಿದ್ದಾರೆ.
ವಿವಿಧ ಆಸ್ಪತ್ರೆಗಳಲ್ಲಿ 2605 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 3561 ಮಂದಿ ರೋಗ ಮುಕ್ತರಾಗಿದ್ದಾರೆ.
ಲಾಕ್ ಡೌನ್ ಉಲ್ಲಂಘನೆ : 16 ಕೇಸು ದಾಖಲು : ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 16 ಕೇಸುಗಳನ್ನು ದಾಖಲಿಸಲಾಗಿದೆ. 41 ಮಂದಿಯನ್ನು ಬಂಧಿಸಲಾಗಿದ್ದು, 16 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 1 ಕೇಸು, ಕುಂಬಳೆ 1, ಕಾಸರಗೋಡು 2, ಮೇಲ್ಪರಂಬ 2, ಬೇಕಲ 2, ಹೊಸದುರ್ಗ 1, ಚಂದೇರ 2, ವೆಳ್ಳರಿಕುಂಡ್ 1, ಚಿತ್ತಾರಿಕಲ್ 2, ರಾಜಪುರಂ 2 ಕೇಸುಗಳನ್ನು ದಾಖಲಿಸಲಾಗಿದೆ.
ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾಗಿರುವ ಕೇಸುಗಳ ಒಟ್ಟು ಸಂಖ್ಯೆ 2984 ಆಗಿದೆ. ಒಟ್ಟು 3900 ಮಂದಿಯನ್ನು ಈ ವರೆಗೆ ಬಂಧಿಸಲಾಗಿದೆ. 1243 ವಾಹನಗಳನ್ನು ವಶಪಡಿಸಲಾಗಿದೆ.
ಮಾಸ್ಕ್ ಧರಿಸದ 180 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 180 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 11408 ಮಂದಿ ವಿರುದ್ಧ ಕೇಸು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಪ್ಪುರಂಧ್ರದ 500ನೇ ಮರುಹುಟ್ಟನ್ನು ಸೆರೆಹಿಡಿದ ಆಸ್ಟ್ರೋಸ್ಯಾಟ್
ಜ್ಞಾನವಾಪಿ ಕೊಠಡಿ ಇದುವೇ! ಶೃಂಗಾರ್ ಕಾಂಪ್ಲೆಕ್ಸ್ನ ಕೆಳಭಾಗದಲ್ಲಿರುವ ಕೋಣೆಯ ಚಿತ್ರ
ಶೋಷಿತ, ನಿರ್ಗತಿಕ ಮಹಿಳೆಯರಿಗೆ “ಸ್ವಾಧಾರ’
ಏಕಸ್ವಾಮ್ಯವು ದೇಶಕ್ಕೆ ಅಪಾಯಕಾರಿ ಎಂದ ಕಾಂಗ್ರೆಸ್ ನಾಯಕ ರಾಹುಲ್ ಹೇಳಿಕೆಗೆ ಬಿಜೆಪಿ ಕೆಂಡ
ದುಬಾೖಯ ಕೈ ತುಂಬಾ ಸಂಬಳದ ಕೆಲಸ ಬಿಟ್ಟು ಕಾಡು ಬೆಳೆದ ಎಂಜಿನಿಯರ್