ಕಾಸರಗೋಡು: 10 ಮಂದಿಗೆ ಕೋವಿಡ್-19 ಸೋಂಕು ದೃಢ
ಕೇರಳದಲ್ಲಿ 108 ಮಂದಿಗೆ ಸೋಂಕು
Team Udayavani, Jun 6, 2020, 8:39 PM IST
ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 10 ಮಂದಿಗೆ ಕೋವಿಡ್-19 ಬಾಧಿಸಿದೆ. ಒಬ್ಬರು ಗುಣಮುಖರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕು ಬಾಧಿತರ ಸಂಖ್ಯೆ 112 ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾಣ ಎ.ವಿ. ರಾಮದಾಸ್ ತಿಳಿಸಿದರು.
ಬಾಧಿತರೆಲ್ಲರೂ ಕುವೈಟ್, ಅಬುಧಾಬಿ, ದುಬಾೖ ಮತ್ತು ಮಹಾರಾಷ್ಟ್ರದಿಂದ ಆಗಮಿಸಿದವರು. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಮೇ 29ರಂದು ಸೋಂಕು ಖಚಿತಗೊಂಡಿದ್ದ ಮಂಗಲ್ಪಾಡಿ ನಿವಾಸಿ 31 ವರ್ಷದ ವ್ಯಕ್ತಿ ರೋಗದಿಂದ ಗುಣಮುಖರಾಗಿದ್ದಾರೆ.ಕೇರಳ ರಾಜ್ಯದಲ್ಲಿ ಶನಿವಾರ 108 ಮಂದಿಗೆ ಕೋವಿಡ್ 19 ದೃಢೀಕರಿಸಲಾಗಿದೆ. 50 ಮಂದಿ ಗುಣಮುಖರಾಗಿದ್ದಾರೆ.
ನಾಟಿ ವೈದ್ಯ ನಿಧನ
ಪ್ರಸಿದ್ಧ ನಾಟಿ ವೈದ್ಯ ತಳಂಗರೆ ಗಝಾಲಿ ನಗರದ ರಾಮಚಂದ್ರ ವೈದ್ಯರ್ (75) ನಿಧನ ಹೊಂದಿದರು. ಇತ್ತೀಚೆಗೆ ತಮಿಳುನಾಡಿಗೆ ಹೋಗಿ ಮರಳಿ ಬಂದ ಅವರು ಮನೆಯಲ್ಲಿ ಕ್ವಾರೆಂಟೈನ್‌ನಲ್ಲಿದ್ದರು. ಶನಿವಾರ ಕ್ವಾರೆಂಟೈನ್ ಕೊನೆಗೊಳ್ಳಲಿತ್ತು. ಸಾವಿಗೆ ಹೃದಯಾಘಾತವೆಂದು ಶಂಕಿಸಲಾಗಿದೆ. ಮೃತರ ಗಂಟಲ ದ್ರವವನ್ನು ತಪಾಸಣೆಗೆ ಕಳುಹಿಸಲಾಗಿದೆ. ಮೃತ ದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಬಸ್ ಓಡಾಟ ನಿಲುಗಡೆ
ಲಾಕ್‌ಡೌನ್‌ನಲ್ಲಿ ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಕೆಲವೊಂದು ಖಾಸಗಿ ಬಸ್‌ಗಳು ಕೆಲವು ದಿನಗಳಿಂದ ಸೇವೆ ಆರಂಭಿಸಿದ್ದರೂ ಪ್ರಯಾಣಿಕರ ಕೊರತೆಯಿಂದ ಶನಿವಾರದಿಂದ ಬಸ್ ಸೇವೆಯನ್ನು ನಿಲ್ಲಿಸಿದ್ದಾರೆ.
253 ಪ್ರಕರಣ ದಾಖಲು
ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 243 ಮಂದಿಯ ವಿರುದ್ಧ, ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಲ್ಲಿ 7 ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ. ಇಬ್ಬರನ್ನು ಬಂಧಿಸಲಾಗಿದ್ದು, ಒಂದು ವಾಹನವನ್ನು ವಶಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಫೈನಲ್ ಮೊದಲು ಸಮಾರೋಪ ಸಮಾರಂಭ; ರಣವೀರ್ ಸಿಂಗ್, ಎ.ಆರ್, ರೆಹಮಾನ್ರಿಂದ ಕಾರ್ಯಕ್ರಮ
ಬಿಹಾರದಲ್ಲಿ ಅತಿದೊಡ್ಡ ಚಿನ್ನದ ನಿಕ್ಷೇಪ : ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಲು ತಯಾರಿ
ತಿರುಪತಿಯಲ್ಲಿ ಭಕ್ತ ಜನ ಸಾಗರ : “ಕೆಲ ದಿನಗಳ ಕಾಲ ತಿರುಪತಿಗೆ ಬರಬೇಡಿ’
ಕುಂದಾಪುರ : ಜಾಗದ ವಿಚಾರ ; ದೂರು – ಪ್ರತಿದೂರು
ನೈಜೀರಿಯಾದಲ್ಲಿ ಚರ್ಚ್ನಲ್ಲಿ ಕಾಲ್ತುಳಿತ : 31 ಮಂದಿ ಸಾವು