ಕತ್ರಿನಾ ಕಲ್ಯಾಣ: ವಿಕ್ಕಿ ಜತೆ ಬಾಲಿವುಡ್ ಬೆಡಗಿಯ ಹೊಸ ಜೀವನ

Team Udayavani, Dec 8, 2021, 5:11 PM IST

1-ggf

ಜೈಪುರ: ಬಾಲಿವುಡ್ ಪ್ರಖ್ಯಾತ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಡಿಸೆಂಬರ್ 9 ರಂದು ಸವಾಯಿ ರಾಜಸ್ಥಾನದ ಮಾಧೋಪುರದ ಐಷಾರಾಮಿ ಹೋಟೆಲ್‌ನಲ್ಲಿ ಹೊಸ ಬಾಳಿಗೆ ಕಾಲಿಡಲಿದ್ದಾರೆ.

ಬುಧವಾರ ತಮ್ಮ ಕುಟುಂಬ ಸದಸ್ಯರು ಮತ್ತು ಆತ್ಮೀಯ ಸ್ನೇಹಿತರಿಗಾಗಿ ಹಳದಿ ಮತ್ತು ಸಂಗೀತ ಸಮಾರಂಭವನ್ನು ಆಯೋಜಿಸಿದ್ದಾರೆ.

ಜೋಡಿಯ ಮೂರು ದಿನಗಳ ವಿವಾಹ ಸಂಭ್ರಮೋತ್ಸವ ಮಂಗಳವಾರ  ಹೋಟೆಲ್ ಆಗಿ ಪರಿವರ್ತಿಸಲಾಗಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ನಡೆದ ಮೆಹೆಂದಿ ಸಮಾರಂಭದೊಂದಿಗೆ ಪ್ರಾರಂಭವಾಗಿದೆ.

38 ವರ್ಷದ ಕತ್ರಿನಾ ಮತ್ತು 33 ರ ಹರೆಯದ ಕೌಶಲ್ ಒಂದು ವರ್ಷಕ್ಕೂ ಹೆಚ್ಚು ಕಾಲ ಡೇಟಿಂಗ್ ಮಾಡಿದ ನಂತರ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮೂಲಗಳ ಪ್ರಕಾರ, ಮೂರೂ ದಿನದ ಸಮಾರಂಭಗಳು ಖಾಸಗಿ ಕಾರ್ಯಕ್ರಮಗಳಾಗಿದ್ದು,ಮದುವೆ, ಹಳದಿ ಮತ್ತು ಸಂಗೀತ್ ಕಾರ್ಯಕ್ರಮ ಕೂಡ ತಮ್ಮ ಹತ್ತಿರದ ಕುಟುಂಬ ಮತ್ತು ಆತ್ಮೀಯ ಸ್ನೇಹಿತರ ವಲಯದವರು ಮಾತ್ರ ಪಾಲ್ಗೊಳ್ಳಲಿದ್ದಾರೆ.

ವಿವಾಹದ ವ್ಯವಸ್ಥೆಗಳು ಮತ್ತು ಅತಿಥಿಗಳ ಪಟ್ಟಿಯ ಗೌಪ್ಯತೆ ಕಾಪಾಡಲಾಗಿದ್ದು,ಕತ್ರಿನಾ ಆತ್ಮೀಯ ಚಲನಚಿತ್ರ ನಿರ್ಮಾಪಕ ಕಬೀರ್ ಖಾನ್, ಮಿನಿ ಮಾಥುರ್, “ಧೂಮ್ 3” ಮತ್ತು “ಥಗ್ಸ್ ಆಫ್ ಹಿಂದೂಸ್ತಾನ್‌ನ ನಿರ್ದೇಶಕ ವಿಜಯ್ ಕೃಷ್ಣ ಸೇರಿದಂತೆ ದಂಪತಿಗಳ ನಿಕಟ ಸ್ನೇಹಿತರು ದಂಪತಿಗಳಾದ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಮದುವೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ, ಕೊರೊನ ಕಾರಣದಿಂದ ಅತಿಥಿಗಳ ಸಂಖ್ಯೆಯನ್ನು ಮಿತಿಗೊಳಿಸಿದ್ದು, ದಂಪತಿಗಳು ತಮ್ಮ ಉದ್ಯಮದ ಸ್ನೇಹಿತರೊಂದಿಗೆ ಕೆಲ ದಿನಗಳ ನಂತರ ಆರತಕ್ಷತೆಯನ್ನ ಆಚರಿಸಲು ಮುಂದಾಗಿದ್ದಾರೆ.

ಮೆಹಂದಿ ಸಮಾರಂಭಕ್ಕಾಗಿ , ಸುಮಾರು 20 ಕೆಜಿಯಷ್ಟು ಸಾವಯವ ಮೆಹಂದಿ ಪುಡಿಯನ್ನು ರಾಜಸ್ಥಾನದ ಪಾಲಿ ಜಿಲ್ಲೆಯ ಸೋಜತ್ ಪಟ್ಟಣದಿಂದ ತರಿಸಿಕೊಳ್ಳಲಾಗಿದೆ. ಮೆಹಂದಿ ಪುಡಿಯಲ್ಲದೆ, 400 ಮೆಹೆಂದಿ ಕೋನ್‌ಗಳನ್ನು ಸಹ ತರಲಾಗಿದೆ ಎಂದು ತಿಳಿದು ಬಂದಿದೆ.

ಐಷಾರಾಮಿ ಹೋಟೆಲ್ ನಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಬೌನ್ಸರ್‌ಗಳ ಭದ್ರ ಕೋಟೆಯೊಳಗೆ ಮದುವೆಯ ಆಚರಣೆಗಳು ನಡೆಯುತ್ತಿದೆ.
ಸ್ಥಳೀಯ ಪೊಲೀಸರನ್ನೂ ಕೂಡ ಭದ್ರತೆಗೆ ನಿಯೋಜಿಸಲಾಗಿದೆ.

ಮದುವೆಯಲ್ಲಿ ಯಾರೊಬ್ಬ ಆಹ್ವಾನಿತರಿಗೆ ಫೋಟೋ ತೆಗೆಯಲು ಅವಕಾಶ ನೀಡಲಾಗಿಲ್ಲ, ದಂಪತಿಗಳು ಮದುವೆಯ ವಿಡಿಯೋ ಮತ್ತು ಫೋಟೋಗಳನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ಪ್ರೊ ಕಬಡ್ಡಿ: ದಬಾಂಗ್‌ ಡೆಲ್ಲಿ ವಿರುದ್ಧ ಹರ್ಯಾಣಗೆ ಗೆಲುವು

ಪ್ರೊ ಕಬಡ್ಡಿ: ದಬಾಂಗ್‌ ಡೆಲ್ಲಿ ವಿರುದ್ಧ ಹರ್ಯಾಣಗೆ ಗೆಲುವು

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು: ಪ್ರಧಾನಿ ಮೋದಿ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ddsa

ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಬಾವ ಶವವಾಗಿ ಪತ್ತೆ, ಆತ್ಮಹತ್ಯೆ ಶಂಕೆ

Dulquer Salmaan tests Covid positive

ಮಲಯಾಳಂ ನಟ ದುಲ್ಖರ್ ಸಲ್ಮಾನ್ ಗೆ ಕೋವಿಡ್ ಸೋಂಕು ದೃಢ

thumb 1

ಬಾಹ್ಯಾಕಾಶದಲ್ಲಿ ಇಳಯರಾಜಾ ಹಾಡುಗಳ ಮೇಳ!

ಶೀಘ್ರವೇ ಅಲ್ಲು ಅಭಿನಯದ Pushpa 2 ಸಿನಿಮಾದ ಚಿತ್ರೀಕರಣ; ರಶ್ಮಿಕಾ ಮಂದಣ್ಣ

ಶೀಘ್ರವೇ ಅಲ್ಲು ಅಭಿನಯದ Pushpa 2 ಸಿನಿಮಾದ ಚಿತ್ರೀಕರಣ; ರಶ್ಮಿಕಾ ಮಂದಣ್ಣ

ನಾಪತ್ತೆಯಾಗಿದ್ದ ನಟಿಯ ದೇಹ ಗೋಣಿ ಚೀಲದಲ್ಲಿ ಪತ್ತೆ : ಪತಿ, ಕಾರು ಚಾಲಕ ವಶಕ್ಕೆ

ನಾಪತ್ತೆಯಾಗಿದ್ದ ನಟಿಯ ದೇಹ ಗೋಣಿ ಚೀಲದಲ್ಲಿ ಪತ್ತೆ : ಪತಿ, ಕಾರು ಚಾಲಕ ವಶಕ್ಕೆ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ಪ್ರೊ ಕಬಡ್ಡಿ: ದಬಾಂಗ್‌ ಡೆಲ್ಲಿ ವಿರುದ್ಧ ಹರ್ಯಾಣಗೆ ಗೆಲುವು

ಪ್ರೊ ಕಬಡ್ಡಿ: ದಬಾಂಗ್‌ ಡೆಲ್ಲಿ ವಿರುದ್ಧ ಹರ್ಯಾಣಗೆ ಗೆಲುವು

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.