Udayavni Special

ಕೇರಳ ವಿಧಾನಸಭೆಯಲ್ಲಿ ಕೋಲಾಹಲ: ಸಿಎಂ ವಿಜಯನ್‌, ಸ್ಪೀಕರ್‌ ರಾಜೀನಾಮೆಗೆ ಯುಡಿಎಫ್ ಪಟ್ಟು

Team Udayavani, Jan 8, 2021, 8:24 PM IST

ಕೇರಳ ವಿಧಾನಸಭೆಯಲ್ಲಿ ಕೋಲಾಹಲ: ಸಿಎಂ ವಿಜಯನ್‌, ಸ್ಪೀಕರ್‌ ರಾಜೀನಾಮೆಗೆ ಯುಡಿಎಫ್ ಪಟ್ಟು

ತಿರುವನಂತಪುರ: ಈ ವರ್ಷದ ಏಪ್ರಿಲ್‌-ಮೇನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳ ವಿಧಾನಸಭೆಯ ಬಜೆಟ್‌ ಅಧಿವೇಶನಕ್ಕೆ ಕೋಲಾಹಾಲದ ಆರಂಭ ಸಿಕ್ಕಿದೆ. ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಸ್ಪೀಕರ್‌ ಪಿ.ಶ್ರೀರಾಮಕೃಷ್ಣನ್‌ ಭಾಗಿಯಾಗಿದ್ದಾರೆ ಎಂಬ ವಿಚಾರ ಸೇರಿದಂತೆ ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್ ಸರ್ಕಾರದ ವಿರುದ್ಧ ಹಲವು ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಯುಡಿಎಫ್ ಗದ್ದಲ ಎಬ್ಬಿಸಿತು. ಗಲಾಟೆಯ ನಡುವೆಯೇ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ಭಾಷಣ ಮಾಡಿದರು.

ಪ್ರತಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ ನೇತೃತ್ವದಲ್ಲಿ ಶಾಸಕರು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಸ್ಪೀಕರ್‌ ಪಿ.ಶ್ರೀರಾಮಕೃಷ್ಣನ್‌ ವಿರುದ್ಧ ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ರಾಜ್ಯಪಾಲ ಖಾನ್‌ “ಬಜೆಟ್‌ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣ ಸಂವಿಧಾನದತ್ತವಾಗಿರುವ ಅಂಶ.

ಅದಕ್ಕೆ ಯಾರೂ ಅಡ್ಡಿಪಡಿಸಬಾರದು’ ಹೇಳಿದರು. ಇದರ ಹೊರತಾಗಿಯೂ ಪ್ರತಿಪಕ್ಷಗಳ ಸದಸ್ಯರು ಸುಮ್ಮನಾಗದಿದ್ದಾಗ ಮತ್ತೂಮ್ಮೆ “ಗದ್ದಲ ಮಾಡಬೇಡಿ’ ಎಂದು ರಾಜ್ಯಪಾಲರು ಮನವಿ ಮಾಡಿದರು. ನಂತರ ಪ್ರತಿಪಕ್ಷಗಳ ಶಾಸಕರು ಭಾಷಣ ಬಹಿಷ್ಕರಿಸಿ ಸಭಾತ್ಯಾಗ ಮಾಡಿದರು. ಬಿಜೆಪಿಯ ಏಕೈಕ ಶಾಸಕ ಓ.ರಾಜಗೋಪಾಲ್‌ ಪ್ರತಿಭಟನೆಯಲ್ಲಿ ಭಾಗವಹಿಸದೆ ಶಾಂತ ಚಿತ್ತರಾಗಿ ಭಾಷಣ ಆಲಿಸಿದರು.

ಇದನ್ನೂ ಓದಿ:ಕೊಂಕಣಿ ಅಕಾಡೆಮಿ ಸ್ಥಾಪನೆಗೆ ದೆಹಲಿ ಸರ್ಕಾರ ಅನುಮೋದನೆ

ಸ್ಪೀಕರ್‌ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಕೆ.ಅಯ್ಯಪ್ಪನ್‌ ಚಿನ್ನ ಸಾಗಣೆ ಪ್ರಕರಣದಲ್ಲಿ ಶುಕ್ರವಾರ ಕಸ್ಟಮ್ಸ್‌ ಇಲಾಖೆ ಮುಂದೆ ವಿಚಾರಣೆಗೆ ಹಾಜರಾದದ್ದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣ.

ಕೇಂದ್ರದ ವಿರುದ್ಧ ಆಕ್ರೋಶ: ರಾಜ್ಯಪಾಲರ ಎರಡು ಗಂಟೆ ಹತ್ತು ನಿಮಿಷಗಳ ಕಾಲದ ಭಾಷಣದಲ್ಲಿ ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧ, ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ರಾಜ್ಯ ಸರ್ಕಾರ ಹೊಂದಿರುವ ನಿಲುವುಗಳನ್ನು ಓದಿದರು. ಜತೆಗೆ ಡಿ.31ರಂದು ನಡೆದ ವಿಶೇಷ ಅಧಿವೇಶನದಲ್ಲಿ ರೈತ ಕಾಯ್ದೆಗಳ ವಿರುದ್ಧ ಕೈಗೊಳ್ಳಲಾಗಿರುವ ನಿರ್ಣಯವನ್ನೂ ರಾಜ್ಯಪಾಲರು ಓದಿದರು.

ಟಾಪ್ ನ್ಯೂಸ್

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್ಐ ನಂಟು ಶಂಕೆ

ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್ಐ ನಂಟು ಶಂಕೆ

ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ: ಹರ್ದೀಪ್ ಸಿಂಗ್ ಪುರಿ

ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ: ಹರ್ದೀಪ್ ಸಿಂಗ್ ಪುರಿ

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

Chamarajanagara covid case

ಚಾಮರಾಜನಗರದಲ್ಲಿ ಎರಡಂಕಿಗಿಳಿದ ಕೋವಿಡ್ ಕೇಸ್‌ಗಳು : ಇಂದು 93 ಪ್ರಕರಣಗಳು ದೃಢಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ: ಹರ್ದೀಪ್ ಸಿಂಗ್ ಪುರಿ

ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ: ಹರ್ದೀಪ್ ಸಿಂಗ್ ಪುರಿ

delta-plus-coronavirus-covid19-vaccination-to-speed-up-in-coming-weeks-says-vk-paul

ಎವೈ.1 ಸೋಂಕನ್ನು ಗಂಭೀರವಾಗಿ ಗಮನದಲ್ಲಿಟ್ಟುಕೊಂಡು ಲಸಿಕಾ ಅಭಿಯಾನಕ್ಕೆ ಚುರುಕು : ಪೌಲ್

Goa AICC Incharge Dinesh Gundurao Statement aganist on BJP

ಬಿಜೆಪಿಯ ಭ್ರಷ್ಟಾಚಾರಗಳ ವಿರುದ್ಧ ಧ್ವನಿಯೆತ್ತಬೇಕಿದೆ :ಎಐಸಿಸಿ ಗೋವಾ ಉಸ್ತುವಾರಿ ಗುಂಡೂರಾವ್

1622658251-7176

ಅಮೆರಿಕದಲ್ಲಿ ಗ್ರಾಹಕ ವಲಯ ಕೇಂದ್ರೀತ ಎಸ್‌ಪಿಎಸಿ ಪ್ರಾರಂಭಿಸಿದ‌ ಮಣಿಪಾಲ್ ಗ್ರೂಪ್ ಅಧ್ಯಕ್ಷ

vaccination is only one weapon to Covid 19

ಜುಲೈ 30ರೊಳಗೆ ಗೋವಾದಾದ್ಯಂತ ಶೇ.100ರಷ್ಟು ಲಸಿಕೆಯ ಮೊದಲ ಡೋಸ್ ಪೂರ್ಣ : ಸಾವಂತ್

MUST WATCH

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

udayavani youtube

ಐಸಿಸಿ ಟೆಸ್ಟ್ ಫೈನಲ್ ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್

udayavani youtube

ವಿಶಿಷ್ಟವಾಗಿ DRAGON FRUIT ಬೆಳೆದ ಕಾರ್ಕಳದ ರೈತನಿಗೆ ಭೇಷ್ ಎಂದ ಮಂಗಳೂರು ಕಮೀಷನರ್

udayavani youtube

ಬಿರುಕು ಬಿಟ್ಟ ಮರವೂರು ಸೇತುವೆ: ಸಂಚಾರ ನಿರ್ಬಂಧ; ಬದಲಿ ರಸ್ತೆ ವ್ಯವಸ್ಥೆ

udayavani youtube

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ಹೊಸ ಸೇರ್ಪಡೆ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

15-21

ಗುತ್ತಿಗೆದಾರರ ವಿರುದ್ಧ ಕ್ರಮ : ಹಾಲಪ್ಪ

15-20

ಪರಿಹಾರ ಮಧ್ಯವರ್ತಿಗಳ ಪಾಲಾಗದಂತೆ ಕ್ರಮ ಕೈಗೊಳ್ಳಿ

15-19

ಕೊರೋನಾ ತಡೆಗೆ ಗ್ರಾಂ ಪಂಚಾಯತ್ ಗಳತ್ತ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.