
ತಿಪಟೂರು: ಸಿಡಿಲು ಬಡಿದು ಕುರಿಗಾಹಿ ದುರ್ಮರಣ, ಇನ್ನೋರ್ವ ಗಂಭೀರ
lightning hits,died, injured,
Team Udayavani, Oct 23, 2021, 4:59 PM IST

ತಿಪಟೂರು: ತಾಲೂಕಿನ ಮೀಸೆ ತಿಮ್ಮನಹಳ್ಳಿ ಎಂಬಲ್ಲಿ ಸಿಡಿಲು ಬಡಿದು ಕುರಿಗಾಹಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವರು ಗಂಭೀರವಾಗಿ ಗಾಯಗೊಂಡಿರುವ ಅವಘಡ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಮೃತ ದುರ್ದೈವಿಗಳು, ಹೊನ್ನವಳ್ಳಿ ಹೋಬಳಿಗೆ ಸೇರಿದ ಮೀಸೆ ತಿಮ್ಮನಹಳ್ಳಿ ಗ್ರಾಮದ ವಾಸಿಗಳಾದ ಲೋಕೇಶ್ ನಾಯಕ್(47 )ಎನ್ನುವವರಾಗಿದ್ದಾರೆ.
ಕುರಿ ಗಾಳನ್ನು ಮೇಯಿಸಲು ಕರಾಬ್ ಕರೆಕಲ್ಲು ಬಂಡೆಗೆ ಹೋಗಿದ್ದಾಗ ಸಿಡಿಲು ಬಡಿದು ಲೋಕೇಶ್ ನಾಯಕ್ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಗಂಭೀರ ಗಾಯಗಳಿಗೆ ಗುರಿಯಾಗಿರುವ ರಾಜ ನಾಯಕ್ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
