
ಮ್ಯಾಡ್ರಿಡ್ ಬ್ಯಾಡ್ಮಿಂಟನ್: ಸಿಂಧು ಫೈನಲ್‌ಗೆ
Team Udayavani, Apr 2, 2023, 7:15 AM IST

ಮ್ಯಾಡ್ರಿಡ್: ಪಿ.ವಿ.ಸಿಂಧು 2023ರ ಋತುವಿನಲ್ಲಿ ಮೊದಲ ಫೈನಲ್ ಕಂಡಿದ್ದಾರೆ. ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ 300′ ಪಂದ್ಯಾವಳಿಯಲ್ಲಿ ಅವರು ಪ್ರಶಸ್ತಿ ಸುತ್ತು ತಲುಪಿದ್ದಾರೆ. ಶನಿವಾರದ ಸೆಮಿಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಸಿಂಧು ಸಿಂಗಾಪುರದ ಕೆಳ ರ್‍ಯಾಂಕಿಂಗ್ ಆಟಗಾರ್ತಿ ಯೋ ಜಿಯಾ ಮಿನ್ ವಿರುದ್ಧ ಭಾರೀ ಹೋರಾಟ ನಡೆಸಿ 24-22, 22-20 ಅಂತರದ ಗೆಲುವು ಸಾಧಿಸಿದರು. 48 ನಿಮಿಷಗಳ ಕಾಲ ಈ ಪಂದ್ಯ ಸಾಗಿತು.
ಇದರೊಂದಿಗೆ ಮಿನ್ ವಿರುದ್ಧ ಆಡಿದ ಐದೂ ಪಂದ್ಯಗಳಲ್ಲಿ ಸಿಂಧು ಗೆಲುವು ಸಾಧಿಸಿದಂತಾಯಿತು. ಕಳೆದ ವರ್ಷದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಸಿಂಧು ಕಾಣುತ್ತಿರುವ ಮೊದಲ ಫೈನಲ್ ಇದಾಗಿದೆ. ತವರಿನ ಕ್ಯಾರೋಲಿನ್ ಮರಿನ್-ಇಂಡೋನೇಷ್ಯಾದ ಜಾರ್ಜಿಯಾ ಟುಂಜುಂಗ್ ನಡುವಿನ ಮತ್ತೂಂದು ಸೆಮಿಫೈನಲ್ ನಡುವಿನ ವಿಜೇತರನ್ನು ಸಿಂಧು ಫೈನಲ್‌ನಲ್ಲಿ ಎದುರಿಸಲಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
