
ಮಹಾರಾಷ್ಟ್ರ ಸಂಸದ ಸಂಜಯ್ ರಾವತ್‌ಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಕೃತ್ಯ ?
Team Udayavani, Apr 1, 2023, 5:14 PM IST

ಮುಂಬೈ: ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಬಣದ ನಾಯಕ, ಸಂಸದ ಸಂಜಯ್ ರಾವತ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಪುಣೆಯಲ್ಲಿ ಶನಿವಾರ ಪೋಲಿಸರು ಬಂಧಿಸಿದ್ದಾರೆ.
ಆರೋಪಿಯನ್ನು ವಿಚಾರಣೆಗೊಳಪಡಿಸಿದ ಪೋಲಿಸರು, ತನಿಖೆ ವೇಳೆ ಆತ ಲಾರೆನ್ಸ್ ಬಿಷ್ಣೋಯ್‌ಯ ಹೆಸರು ಹೇಳಿದ್ದು ಬಿಷ್ಣೋಯ್ ಗ್ಯಾಂಗ್ ಜೊತೆಗೆ ಆತನ ಸಂಬಂಧದ ಬಗ್ಗೆ ತೀವ್ರ ತನಿಖೆ ನಡೆಸಲಾಗುವುದು ಎಂದು ಮುಂಬೈ ಪೋಲಿಸರು ತಿಳಿಸಿದ್ದಾರೆ.
ʻಸಂಸದ ಸಂಜಯ್ ರಾವತ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುವುದು. ವಿಚಾರಣೆ ವೇಳೆ ಆತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ಯ ಹೆಸರನ್ನು ಹೇಳಿದ್ದಾನೆ. ಇತ್ತೀಚೆಗೆ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲೂ ಈತನಿಗೆ ನಂಟು ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಿದ್ದೇವೆʼ ಎಂದು ಮುಂಬಯಿ ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.
ಇದನ್ನೂ ಓದಿ: ಮುಂಬೈ: ವಿಮಾನದಲ್ಲಿ ಮದ್ಯ ಸೇವಿಸಿ ಗಗನಸಖಿಗೆ ಕಿರುಕುಳ; ವಿದೇಶಿ ಪ್ರಜೆ ಬಂಧನ
ʼಸಂಜಯ್ ರಾವತ್ ಅವರಿಗೆ ಬಂದಿದ್ದ ಬೆದರಿಕೆ ಸಂದೇಶದಲ್ಲಿ ವ್ಯಕ್ತಿಯೊಬ್ಬ ನಿಮಗೂ ಸಿಧು ಮೂಸೆವಾಲ ಅವರ ಗತಿಯೇ ಬರಲಿದೆ. ಅವರಿಗೆ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ನಿಂದ ಬೆದರಿಕೆ ಬಂದಿತ್ತು. ನೀವೂ ದೆಹಲಿಗೆ ಬಂದರೆ ನಿಮ್ಮನ್ನೂ AK 47ನಿಂದ ಕೊಲ್ಲಲಾಗುವುದು ಎಂಬ ಬೆದರಿಕೆ ಹಾಕಿದ್ದʼ ಎಂದು ಪೋಲಿಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WFI chief ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯ ವರದಿಗಳು ಸುಳ್ಳು

US ನಲ್ಲಿ ರಾಹುಲ್ ಗಾಂಧಿ ವಿರುದ್ಧ ಖಾಲಿಸ್ತಾನ್ ಬೆಂಬಲಿಗರ ಆಕ್ರೋಶ; ಭಾಷಣಕ್ಕೆ ಅಡ್ಡಿ

Goaಕ್ಕೆ ಪ್ರವಾಸಕ್ಕೆಂದು ತೆರಳಿದ್ದ ತುಮಕೂರಿನ ಯುವಕ ಆತ್ಮಹತ್ಯೆ

Owaisi; ತಾಕತ್ತಿದ್ರೆ ಚೀನಾದ ಮೇಲೆ ಸರ್ಜಿಕಲ್ ದಾಳಿ ನಡೆಸಿ; ಬಿಜೆಪಿಗೆ ಒವೈಸಿ ಸವಾಲು

Tragic: ಮರಕ್ಕೆ ಢಿಕ್ಕಿ ಹೊಡೆದು ಕಾರಿಗೆ ಬೆಂಕಿ; ನವ ವಿವಾಹಿತರು ಸೇರಿ ನಾಲ್ವರು ಸಜೀವ ದಹನ