ಮಂಗಳೂರು: ಜ್ಯುವೆಲ್ಲರಿ ಶಾಪ್ ನಲ್ಲಿ ಚೂರಿ ಇರಿದು ಸಿಬಂದಿಯ ಬರ್ಬರ ಹತ್ಯೆ

Team Udayavani, Feb 3, 2023, 5:06 PM IST

1-sadsda

ಮಂಗಳೂರು : ನಗರದ ಹಂಪನಕಟ್ಟೆ ಮಿಲಾಗ್ರಿಸ್ ಸಮೀಪ ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸದ ಸಿಬಂದಿಯನ್ನು ಚೂರಿ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ನಡೆದಿದೆ. ಹತ್ಯೆಗೀಡಾದ ವ್ಯಕ್ತಿ ರಾಘವ (50) ಅತ್ತಾವರ ನಿವಾಸಿ ಎಂದು ತಿಳಿದು ಬಂದಿದೆ.

ಸಿಸಿ ಕ್ಯಾಮೆರಾದಲ್ಲಿ ಕೃತ್ಯ ದಾಖಲಾಗಿರುವ ಸಾಧ್ಯತೆಯಿದ್ದು, ಪರಿಶೀಲನೆ ನಡೆಯುತ್ತಿದೆ. ಜ್ಯುವೆಲ್ಲರಿಯಿಂದ ಓರ್ವ ಮುಸುಕುಧಾರಿ ಹೊರಗೆ ಬರುವ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಜ್ಯುವೆಲ್ಲರಿಯಿಂದ ಓರ್ವ ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಿದ್ದ ವ್ಯಕ್ತಿ ಹೊರಗೆ ಬರುವುದು ಕಂಡು ಬಂದಿದೆ.

ಘಟನೆ ವೇಳೆ ಅಂಗಡಿಯಲ್ಲಿ ಒಬ್ಬರೇ ಇದ್ದರೆಂದು ತಿಳಿದುಬಂದಿದೆ. ದರೋಡೆಯೆ ಬೇರೆ ಕಾರಣವೇ ತಿಳಿದು ಬಂದಿಲ್ಲ.‌ಅಂಗಡಿ ಮಾಲಕರು ಊಟ ಮಾಡಿ ಬಂದಾಗ ಘಟನೆ ಗಮನಕ್ಕೆ ಬಂದಿದ್ದು, ಘಟನೆ ನಡೆದ ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಜ್ಯುವೆಲ್ಲರಿ ಶಾಪ್ ಮಾಲಕ ಕೇಶವ ಆಚಾರ್ಯ ಅವರು ಪೊಲೀಸರ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದು, ಮಧ್ಯಾಹ್ನ 3.40 ರ ವೇಳೆಗೆ ನಾನು ಊಟ ಮುಗಿಸಿ ಬರುವಾಗ ನನ್ನ ಕಾರು ಇಡುವ ಜಾಗದಲ್ಲಿ ಬೈಕ್ ಒಂದು ನಿಲ್ಲಿಸಲಾಗಿತ್ತು. ಅದನ್ನು ತೇಗಿಸುವ ಸಲುವಾಗಿ ರಾಘವ ಅವರಿಗೆ ಕರೆ ಮಾಡಿದ್ದೆ. ಆಗ ಅವರು ಚೂರಿ ಹಾಕುತ್ತಿದ್ದಾರೆ.. ಎಂದು ಹೇಳಿದ್ದು , ನನ್ನ ಎದುರೇ ಆರೋಪಿ ಪರಾರಿಯಾಗಿದ್ದಾನೆ ಎಂದಿದ್ದಾರೆ.

ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಎನ್ . ಶಶಿಕುಮಾರ್ , ಡಿಸಿಪಿ ಅಂಶುಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ದುಷ್ಕರ್ಮಿ ಕುತ್ತಿಗೆಗೆ ಇರಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

MI

ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್

1-sadsadsadasd

ಅಮೃತಪಾಲ್ ಸಿಂಗ್ ಜನಪ್ರಿಯತೆಗಾಗಿ ಮಂದೀಪ್ ಸಂಘಟನೆ ಪಿಗ್ಗಿಬ್ಯಾಕ್ ಮಾಡಿದನೇ?

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

1-sfsdf-sfsdfd

ಸ್ವಿಸ್ ಓಪನ್ ಸೂಪರ್ ಪ್ರಶಸ್ತಿ ಗೆದ್ದ ಸಾಯಿರಾಜ್-ಚಿರಾಗ್ ಜೋಡಿ

c-t-ravi

ಚಿಕ್ಕಮಗಳೂರಿನಲ್ಲಿ ಹಿಂದುತ್ವ ಹಾಗೂ ಅಭಿವೃದ್ದಿಯೇ ಗೆಲ್ಲುವುದು: ಸಿ.ಟಿ.ರವಿ

ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಪತ್ತೆಯಾಯ್ತು ಕಾಂಡೋಮ್, ಮದ್ಯದ ಬಾಟಲಿ…

ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಪತ್ತೆಯಾಯ್ತು ಕಾಂಡೋಮ್, ಮದ್ಯದ ಬಾಟಲಿ…

ಗೋರ್ಟಾ (ಬಿ) ಗ್ರಾಮದಲ್ಲಿ ಪಟೇಲ್ ಪ್ರತಿಮೆ ಮತ್ತು 103 ಅಡಿ ಧ್ವಜ ಸ್ತಂಭ ಲೋಕಾರ್ಪಣೆ

ಗೋರ್ಟಾ (ಬಿ) ಗ್ರಾಮದಲ್ಲಿ ಪಟೇಲ್ ಪ್ರತಿಮೆ ಮತ್ತು 103 ಅಡಿ ಧ್ವಜ ಸ್ತಂಭ ಲೋಕಾರ್ಪಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು: ಹೋಳಿ ಡಿಜೆ ಪಾರ್ಟಿಗೆ ಬಜರಂಗ ದಳ ಕಾರ್ಯಕರ್ತರಿಂದ ದಾಳಿ

ಮಂಗಳೂರು: ಹೋಳಿ ಡಿಜೆ ಪಾರ್ಟಿಗೆ ಬಜರಂಗ ದಳ ಕಾರ್ಯಕರ್ತರಿಂದ ದಾಳಿ

4-mangalore

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಬಿಲ್ಲವ ಸಮುದಾಯಕ್ಕೆ ಅನ್ಯಾಯ: ಪ್ರಣವಾನಂದ ಸ್ವಾಮೀಜಿ

bk hariprasad press meet

ನಿರಂಕುಶಾಧಿಪತ್ಯ ಸಾಬೀತು : ಬಿ.ಕೆ. ಹರಿಪ್ರಸಾದ್‌

ದ್ವಿತೀಯ ಪಿಯು ಪರೀಕ್ಷೆ ದ.ಕ.: 177 ಮಂದಿ ಗೈರು

ದ್ವಿತೀಯ ಪಿಯು ಪರೀಕ್ಷೆ ದ.ಕ.: 177 ಮಂದಿ ಗೈರು

ವೆನ್ಲಾಕ್ ಆಯುಷ್‌ ಆಸ್ಪತ್ರೆ: ಉಪಕರಣ ಹಸ್ತಾಂತರ, ಪ್ರಕೃತಿ ವಿಭಾಗಕ್ಕೆ ಚಾಲನೆ

ವೆನ್ಲಾಕ್ ಆಯುಷ್‌ ಆಸ್ಪತ್ರೆ: ಉಪಕರಣ ಹಸ್ತಾಂತರ, ಪ್ರಕೃತಿ ವಿಭಾಗಕ್ಕೆ ಚಾಲನೆ

MUST WATCH

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

ಹೊಸ ಸೇರ್ಪಡೆ

MI

ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್

1-sadsadsadasd

ಅಮೃತಪಾಲ್ ಸಿಂಗ್ ಜನಪ್ರಿಯತೆಗಾಗಿ ಮಂದೀಪ್ ಸಂಘಟನೆ ಪಿಗ್ಗಿಬ್ಯಾಕ್ ಮಾಡಿದನೇ?

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

ಸಂಪಾಜೆ; ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಸಂಪಾಜೆ; ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.