12ಕ್ಕೆ ಮದುವೆ ; 20ಕ್ಕೆ ಕೋವಿಡ್‌-19 ಸೋಂಕು !

ನವ ವಿವಾಹಿತನ ಮನೆಯಲ್ಲಿ ಕೋವಿಡ್‌ ಸಂಕಷ್ಟ ; ಮದುವೆಗೆ ಬಂದವರಿಗೆ ಭೀತಿ ಶುರು

Team Udayavani, Jun 20, 2020, 9:05 PM IST

12ಕ್ಕೆ ಮದುವೆ ; 20ಕ್ಕೆ ಕೋವಿಡ್‌-19 ಸೋಂಕು !

ಸಾಂದರ್ಭಿಕ ಚಿತ್ರ.

ಬಾಗಲಕೋಟೆ : ಕಳೆದ ಜೂ. 1ರಿಂದ ಜಿಲ್ಲೆಯ ಸ್ಥಳೀಯ ನಿವಾಸಿಗಳಲ್ಲಿ ಕಂಡು ಬಾರದ ಕೋವಿಡ್‌-19 ಸೋಂಕು, ಶನಿವಾರ ಜಿಲ್ಲೆಯ ಇಬ್ಬರಲ್ಲಿ ಪತ್ತೆಯಾಗಿದೆ. ಅದರಲ್ಲಿ ಒಬ್ಬರು, ಅಬಕಾರಿ ಇಲಾಖೆಯ ಸಬ್ ಇನ್ಸಪೆಕ್ಟರ್ ಆಗಿದ್ದು, ಜೂ. 12ರಂದು ಮದುವೆಯಾಗಿದ್ದರು. ಇದೀಗ ಅವರ ಮನೆಯಲ್ಲಿ ಕೋವಿಡ್‌-19 ಸಂಕಷ್ಟ ಶುರುವಾಗಿದೆ.

ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ 29 ವರ್ಷದ ಪಿ 8300 (ಬಿಜಿಕೆ 116) ಯುವಕ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಅಬಕಾರಿ ಸಬ್ ಇನ್ಸಪೆಕ್ಟರ್ ಆಗಿದ್ದಾರೆ. ಇವರು ಜೂ. 12ರಂದು ಬಾಗಲಕೋಟೆಯ ಯುವತಿಯೊಂದಿಗೆ ಮದುವೆಯಾಗಿದ್ದು, ಜೂ. 18ರಂದು ಪುನಃ ಸೇವೆಗೆ ಹಾಜರಾಗಿದ್ದರು. ಕಲಬುರಗಿಯಲ್ಲಿ ಇಲಾಖೆ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಭಾಗವಹಿಸಲಿದ್ದರು ಎನ್ನಲಾಗಿದೆ.

ಮದುವೆಗೆ ದೀಘ್ರಕಾಲಿಕ ರಜೆ ಪಡೆದು, ಪುನಃ ಬ್ಯಾಡಗಿಯಲ್ಲಿ ಸೇವೆಗೆ ಹಾಜರಾಗಿದ್ದರು. ಆ ವೇಳೆಗೆ ಅವರಿಗೆ ಜ್ವರ, ಕೆಮ್ಮು ನೆಗಡಿ ಕಾಣಿಸಿಕೊಂಡಿತ್ತು. ಹೀಗಾಗಿ ಬ್ಯಾಡಗಿಯಲ್ಲೇ ಇಲಾಖೆಯಿಂದ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಅವರಿಗೆ ಕೋವಿಡ್‌-19 ಪಾಸಿಟಿವ್ ಬಂದಿದ್ದು, ಬಾಗಲಕೋಟೆಯ ಕೋವಿಡ್‌-19 ಆಸ್ಪತ್ರೆಗೆ ಸೇರಿಸಲಾಗಿದೆ.

ಕಳೆದ ಜೂ. 12ರಂದೇ ಹಸೆಮಣೆ ಏರಿ, ಖುಷಿಯಲ್ಲಿದ್ದ ಅಬಕಾರಿ ಸಬ್ ಇನ್ಸಪೆಕ್ಟರ್ ಮನೆಯಲ್ಲೀಗ ಕೋವಿಡ್‌-19 ಸಂಕಷ್ಟ ಶುರುವಾಗಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿ 21 ಜನ, ದ್ವಿತೀಯ ಸಂಪರ್ಕದಲ್ಲಿ 32 ಜನ ಸೇರಿ ಒಟ್ಟು 53 ಜನ ಸಂಪರ್ಕಕ್ಕೆ ಬಂದಿದ್ದು, ಅವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೇ, ಈ ಮದುವೆಗೆ ಹಲವು ಹಿರಿಯ, ಕಿರಿಯ ಅಧಿಕಾರಿಗಳೂ ಭಾಗವಹಿಸಿದ್ದು, ಅವರಿಗೂ ಆತಂಕ ಶುರುವಾಗಿದೆ.

ಜಿಲ್ಲೆಯಲ್ಲಿ ಶನಿವಾರ ಗುಡೂರಿನ 50 ವರ್ಷದ ಮಹಿಳೆ ಪಿ 8301 (ಬಿಜಿಕೆ 117) ಸೋಂಕು ಖಚಿತಪಟ್ಟಿದ್ದು, ಇವರು, ಗುಡೂರಿನಿಂದ ಧಾರವಾಡ, ಅಲ್ಲಿಂದ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿದ್ದರು. ಮದುವೆ ಬಳಿಕ ಹುಬ್ಬಳ್ಳಿಯ ಕಿಮ್ಸನಲ್ಲಿ ಗಂಟಲು ದ್ರವ ಪರೀಕ್ಷೆಗೆ ನೀಡಿ, ಕಾರಿನಲ್ಲಿ ಗುಡೂರಿಗೆ ಬಂದಿದ್ದರು. ಈ ವೇಳೆ ಅವರನ್ನು ಕ್ವಾರಂಟೈನ್ ಮಾಡಿದ್ದು, ಶನಿವಾರ ಸೋಂಕು ಖಚಿತಪಟ್ಟಿದೆ. ಈ ಮಹಿಳೆಯ ಸಂಪರ್ಕಕ್ಕೆ ಬಂದ 12 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.

ಬಾಗಲಕೋಟೆಯಲ್ಲಿ ನಡೆದ ಸೋಂಕು ಖಚಿತಪಟ್ಟ ಅಬಕಾರಿ ಪೊಲೀಸ್ ಸಬ್ ಇನ್ಸಪೆಕ್ಟರ್‌ರ ಮದುವೆ ಹಾಗೂ ಗಜೇಂದ್ರಗಡದಲ್ಲಿ ನಡೆದ ಮದುವೆಯಲ್ಲಿ ಗುಡೂರಿನ ಮಹಿಳೆ ಭಾಗವಹಿಸಿದ್ದು, ಈ ಎರಡೂ ಮದುವೆಗೆ ಹೋಗಿದ್ದವರಲ್ಲಿ ಈಗ ಕೋವಿಡ್‌-19 ಭೀತಿ ಎದುರಾಗಿದೆ.

ಟಾಪ್ ನ್ಯೂಸ್

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಚಿನ್ನ ಪಡೆದು ದುಡ್ಡು ಕೊಡುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಮನಗರ: ಪತಿಯ ಕಿರುಕುಳ ತಾಳಲಾರದೆ ಗರ್ಭಿಣಿ ಆತ್ಮಹತ್ಯೆಗೆ ಶರಣು

ರಾಮನಗರ: ಪತಿಯ ಕಿರುಕುಳ ತಾಳಲಾರದೆ ಗರ್ಭಿಣಿ ಆತ್ಮಹತ್ಯೆಗೆ ಶರಣು

ಪಡಿತರ ವಿತರಣೆಗೆ ಅಗತ್ಯದಷ್ಟು ಜೋಳ, ರಾಗಿ ಸಿಗುತ್ತಿಲ್ಲ : ಸಚಿವ ಕತ್ತಿ

ಪಡಿತರ ವಿತರಣೆಗೆ ಅಗತ್ಯದಷ್ಟು ಜೋಳ, ರಾಗಿ ಸಿಗುತ್ತಿಲ್ಲ : ಸಚಿವ ಕತ್ತಿ

ಜೆಡಿಎಸ್‌ ಕೋರ್‌ ಕಮಿಟಿ: ಬಂಡೆಪ್ಪ ಸಾರಥ್ಯ ಎನ್‌.ಎಂ. ನಬಿ ಕಾರ್ಯಾಧ್ಯಕ್ಷ

ಜೆಡಿಎಸ್‌ ಕೋರ್‌ ಕಮಿಟಿ: ಬಂಡೆಪ್ಪ ಸಾರಥ್ಯ ಎನ್‌.ಎಂ. ನಬಿ ಕಾರ್ಯಾಧ್ಯಕ್ಷಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಚಿನ್ನ ಪಡೆದು ದುಡ್ಡು ಕೊಡುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಕಲಾವಿದರ ಕೂಗು

ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಕಲಾವಿದರ ಕೂಗು

ಪಡಿತರ ವಿತರಣೆಗೆ ಅಗತ್ಯದಷ್ಟು ಜೋಳ, ರಾಗಿ ಸಿಗುತ್ತಿಲ್ಲ : ಸಚಿವ ಕತ್ತಿ

ಪಡಿತರ ವಿತರಣೆಗೆ ಅಗತ್ಯದಷ್ಟು ಜೋಳ, ರಾಗಿ ಸಿಗುತ್ತಿಲ್ಲ : ಸಚಿವ ಕತ್ತಿ

MUST WATCH

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

udayavani youtube

ಗಣರಾಜ್ಯ ದಿನದ ಮೆರವಣಿಗೆ 2022

ಹೊಸ ಸೇರ್ಪಡೆ

ವದಸಬ್ಸಬ್ಸವದ

ಆರೋಗ್ಯ ಕಾಪಾಡಿಕೊಳ್ಳಲು ಸಲಹೆ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಸ್ಗ್ಸಗಸ್ಗದಸ

ಅನುಮತಿ ಇಲ್ಲದ್ದರಿಂದ ತೆರವು

ಯತೆಯತೆಹತೆಹಗ

ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಿ: ಸಿದ್ದು 

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.