ವಿಧಾನ-ಕದನ 2023: ವಿಷಯವಿದೆ ಮನದಟ್ಟು ಮಾಡುವವರ್ಯಾರು?

ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಸ್ಟಾರ್‌ ಪ್ರಚಾರಕರ ಕೊರತೆ

Team Udayavani, Apr 1, 2023, 7:46 AM IST

poli

ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಸದ್ಯಇರುವ ಸವಾಲು ಎಂದರೆ ಆಡಳಿತ ಪಕ್ಷದ, ಜನಪ್ರತಿನಿಧಿಗಳ‌ ವೈಫ‌ಲ್ಯಗಳಲ್ಲ; ಬದಲಾಗಿ ಇರುವ ವೈಫ‌ಲ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತದಾರರಿಗೆ ತಲುಪಿಸಿ ಮತಗಳನ್ನಾಗಿ ಪರಿವರ್ತಿಸುವುದು. ಅದರ ಮೇಲೆಯೇ ಫ‌ಲಿತಾಂಶವೂ ನಿರ್ಧಾರಿತ.

ಉಡುಪಿ: ವಿಧಾನಸಭೆ ಚುನಾವಣೆ ಸಾಮಾನ್ಯವಾಗಿ ಸ್ಥಳೀಯ ವಿಷಯಾ ಧಾರಿತವಾಗಿಯೇ ನಡೆಯುವು ದಾದರೂ ಪಕ್ಷಗಳು ಅದನ್ನು ಹೇಗೆ ಜನರಿಗೆ ಮುಟ್ಟಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ.

ಜಿಲ್ಲೆಯ ಐದೂ ಕ್ಷೇತ್ರದಲ್ಲೂ ಬಿಜೆಪಿ ಆಡಳಿತ ನಡೆ
ಸಿರುವುದರಿಂದ ಈ ಚುನಾವಣೆಯಲ್ಲಿ ಬಿಜೆಪಿ ಅಭಿ ವೃದ್ಧಿ ವಿಷಯವನ್ನೇ ಪ್ರಮುಖವಾಗಿಟ್ಟು ಕೊಂಡು ಮುನ್ನಡೆಯುವ ಇಂಗಿತ ಈಗಾಗಲೇ ವ್ಯಕ್ತಪಡಿಸಿದೆ. ಸ್ಥಳೀಯವಾಗಿ ಬಿಜೆಪಿಗೆ ಕಾಂಗ್ರೆಸ್‌ ಮೇಲೆ ದಾಳಿ ನಡೆಸಲು ವಿಷಯ ಕಡಿಮೆ. ಆದರೆ ಕಾಂಗ್ರೆಸ್‌ಗೆ ಪ್ರತೀ ಕ್ಷೇತ್ರವಾರು ವಿಷಯಗಳು ಸಾಕಷ್ಟಿವೆ.
ಐದು ವರ್ಷಗಳಿಂದ ಅಭಿವೃದ್ಧಿಯಾಗದ ಅದೆಷ್ಟೋ ವಿಷಯವೂ ಇದೆ. ಇದರ ಜತೆಗೆ ರಾಜ್ಯ, ರಾಷ್ಟ್ರಮಟ್ಟದ ಕೆಲವು ವಿಷಯವೂ ಮುನ್ನೆಲೆಗೆ ಬರುತ್ತಿದೆ. ಇದೆಲ್ಲವನ್ನು ಕಾಂಗ್ರೆಸ್‌ ಪರಿಣಾಮಕಾರಿಯಾಗಿ ಜನರಿಗೆ ತಲಪಿಸಿ ಮತಗಳನ್ನಾಗಿಸುತ್ತದೇ ಎಂಬುದೇ ಕುತೂಹಲ.

ಸ್ಟಾರ್‌ ಪ್ರಚಾರಕ ಯಾರು?
ಬಿಜೆಪಿ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ಹಾಗೆಯೇ ಯಾವ ವಿಷಯದಲ್ಲಿ ಯಾರ್ಯಾರು ಮಾತನಾಡಬೇಕು ಎಂಬುದನ್ನು ಕೇಂದ್ರದಿಂದಲೇ ತಯಾರು ಮಾಡಿ ಕೊಡಲಾಗುತ್ತಿದೆ.

ಕಾಂಗ್ರೆಸ್‌ ಕೂಡ ರಾಜ್ಯಮಟ್ಟದಲ್ಲಿ ಸ್ಟಾರ್‌ ಪ್ರಚಾರಕರ ಪಟ್ಟಿ ಸಿದ್ಧಪಡಿಸುತ್ತಿದೆ. ಆದರೆ, ಜಿಲ್ಲೆಗೆ ರಾಜ್ಯದಿಂದ ಬರುವವರಿಗಿಂತ ಮುಖ್ಯವಾಗಿ ಜಿಲ್ಲೆಯ ಕೆಲವು ಸ್ಟಾರ್‌ ಪ್ರಚಾರಕರು ಹೆಚ್ಚು ಅಗತ್ಯವಿದೆ. ಬಿಜೆಪಿಯಿಂದ ಸಚಿವರಾದ ಸುನಿಲ್‌ ಕುಮಾರ್‌, ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಭಾಗ ಪ್ರಭಾರಿ ಉದಯಕುಮಾರ್‌ ಶೆಟ್ಟಿ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಮೊದಲಾದವರು ಇದ್ದಾರೆ.
ಕಾಂಗ್ರೆಸ್‌ಗೆ ಸದ್ಯದ ಮಟ್ಟಿಗೆ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಹಾಗೂ ಮಾಜಿ ಶಾಸಕ ಕೆ. ಗೋಪಾಲ್‌ ಪೂಜಾರಿ ಮಾತ್ರ. ಅವರಿಬ್ಬರಿಗೂ ಕಾಪು ಮತ್ತು ಬೈಂದೂರಿನಲ್ಲಿ ಟಿಕೆಟ್‌ ಘೋಷಣೆ ಯಾಗಿರುವುದರಿಂದ ಕ್ಷೇತ್ರಬಿಟ್ಟು ಹೊರ ಬರುವುದು ತುಸು ಕಷ್ಟ. ಹೀಗಾಗಿ ಕಾಂಗ್ರೆಸ್‌ಗೆ ಜಿಲ್ಲಾಮಟ್ಟದಲ್ಲಿ ಸ್ಟಾರ್‌ ಪ್ರಚಾರಕರ ಕೊರತೆಯೂ ಎದುರಾಗಬಹುದು.

ಬಿಜೆಪಿ 5 ವರ್ಷಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಅನುದಾನದಿಂದ ಆಗಿರುವ ಅಭಿವೃದ್ಧಿ ಕಾರ್ಯ, ಫ‌ಲಾನುಭವಿಗಳ ಪಟ್ಟಿ ಹೀಗೆ ಎಲ್ಲವನ್ನೂ ಕರಪತ್ರದ ರೂಪದಲ್ಲಿ ಸಿದ್ಧಪಡಿಸಿಕೊಂಡಿದೆ. ಅಷ್ಟು ಮಾತ್ರವಲ್ಲದೆ, ವಿಧಾನಸಭಾ ಕ್ಷೇತ್ರವಾರು ಮನೆ ಮನೆಗೂ ತಲುಪಿಸುವ ಕಾರ್ಯವಾಗಿದೆ.
ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಏನು ಮಾಡ ಲಿದೆ ಎಂಬುದರ ಗ್ಯಾರೆಂಟಿ ಕಾರ್ಡ್‌ ಮನೆ ಮನೆಗೂ ಮುಟ್ಟಿಸುತ್ತದೆ. ಆದರೆ ಈ ಐದು ವರ್ಷದಲ್ಲಿ ಆಗಿರುವ ಪ್ರಮುಖ ವೈಫ‌ಲ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಬೇಕಾದ ತಯಾರಿಯನ್ನು ತೆರೆಮರೆಯಲ್ಲಿ ನಡೆ ಸುತ್ತಿರಬಹುದು. ಭ್ರಷ್ಟಾಚಾರ, ಕಮಿಷನ್‌ ಆರೋಪಗಳನ್ನು ಮುನ್ನೆಲೆಗೆ ತರಬಹುದು. ಆದರೆ ಇದನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸಲು ಬಳಸುವ ತಂತ್ರದ ಮೇಲೆಯೇ ಫ‌ಲಿತಾಂಶವೂ ನಿರ್ಣಯವಾಗುವ ಸಾಧ್ಯತೆಯನ್ನು ಸಾರಾ ಸಗಟಾಗಿ ತಳ್ಳಿ ಹಾಕುವಂತಿಲ್ಲ.

ಪಟ್ಟಿಗಾಗಿ ಕಾತರ
ಕಾಂಗ್ರೆಸ್‌ ಮೂರು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದು ಹೊರತುಪಡಿಸಿ ಉಳಿದೆರೆಡು ಕ್ಷೇತ್ರ ಹಾಗೂ ಬಿಜೆಪಿ ಐದೂ ಕ್ಷೇತ್ರದಲ್ಲೂ ಅಭ್ಯರ್ಥಿಯ ಘೋಷಣೆ ಇನ್ನಷ್ಟೇ ಮಾಡಬೇಕಾಗಿದೆ. ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು ಈ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರು ಕೂಡ ಅಭ್ಯರ್ಥಿಗಳ ಪಟ್ಟಿಗಾಗಿ ಕಾಯುತ್ತಿದ್ದಾರೆ. ಪಟ್ಟಿ ಅಂತಿಮವಾಗದೆ ಪೂರ್ಣ ಪ್ರಮಾಣದಲ್ಲಿ ಫೀಲ್ಡ್‌ಗೆ ಇಳಿದು ಮತ ಕೇಳುವುದು ಕಷ್ಟ. ಹೀಗಾಗಿ ಎಲ್ಲರಲ್ಲೂ ಪಟ್ಟಿ ಕಾತರ ಹಾಗೇ ಉಳಿದುಕೊಂಡಿದೆ.

~ ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

8

BBK11: ಬಿಗ್‌ ಬಾಸ್‌ ಮನೆಯಲ್ಲಿ ಹೊಡೆದಾಟ; ಶೋನಿಂದ ಹೊರಬಿದ್ದ ಜಗದೀಶ್‌ – ರಂಜಿತ್‌?

Explainer: ರಾಜ್ಯದ ಜಾತಿ ಜನ ಗಣತಿಗೆ ಯಾಕೆ ಇಷ್ಟೊಂದು ಚರ್ಚೆ ?

Explainer: ರಾಜ್ಯದ ಜಾತಿ ಜನ ಗಣತಿ ಕುರಿತು ಯಾಕೆ ಇಷ್ಟೊಂದು ಚರ್ಚೆ ?

4-ptr

Puttur: ಅಕ್ರಮ ಗೋ ಸಾಗಾಟ ಪತ್ತೆ ಹಚ್ಚಿದ ಬಜರಂಗದಳ ಕಾರ್ಯಕರ್ತರು

1-amudaa

MUDA; Chairman ಕೆ.ಮರಿಗೌಡ ರಾಜೀನಾಮೆ: ಆಡಳಿತಾಧಿಕಾರಿ ನೇಮಕ ಸಾಧ್ಯತೆ

1-jj-bg-aa

J&K; ಸಿಎಂ ಆಗಿ ಒಮರ್ ಅಬ್ದುಲ್ಲಾ, ಡಿಸಿಎಂ ಆಗಿ ಸುರೀಂದರ್ ಚೌಧರಿ ಪ್ರಮಾಣ ವಚನ

Bigg Boss: ವಾರದ ಮಧ್ಯದಲ್ಲೇ ಬಿಗ್‌ ಬಾಸ್‌ನಿಂದ ಎಲಿಮಿನೇಟ್‌ ಆದ ವೀಕ್ಷಕರ ಮೆಚ್ಚಿನ ಸ್ಪರ್ಧಿ

Bigg Boss: ವಾರದ ಮಧ್ಯದಲ್ಲೇ ಬಿಗ್‌ ಬಾಸ್‌ನಿಂದ ಎಲಿಮಿನೇಟ್‌ ಆದ ವೀಕ್ಷಕರ ಮೆಚ್ಚಿನ ಸ್ಪರ್ಧಿ

Dubai-N1

Dubai Miracle Garden: ಮರು ಭೂಮಿಯಲ್ಲಿ ಮೂಡಿ ಬಂದ ಪುಷ್ಪ ಸಿರಿ ವೈಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

3

Punjalkatte:ಕೊಳಕ್ಕೆಬೈಲ್‌-ನಯನಾಡು ರಸ್ತೆ ದುರವಸ್ಥೆ;ಯುವಕರಿಂದ ಶ್ರಮದಾನದ ಮೂಲಕ ದುರಸ್ತಿ

8

BBK11: ಬಿಗ್‌ ಬಾಸ್‌ ಮನೆಯಲ್ಲಿ ಹೊಡೆದಾಟ; ಶೋನಿಂದ ಹೊರಬಿದ್ದ ಜಗದೀಶ್‌ – ರಂಜಿತ್‌?

2

Didupe ದರ್ಕಾಸು ಕೆಮ್ಮಟೆಯಲ್ಲಿ ಪಾಲದಲ್ಲೇ ಓಡಾಟ; ರೋಟರಿ ತಂಡದಿಂದ ಕಾಲುಸಂಕ ಭರವಸೆ

Explainer: ರಾಜ್ಯದ ಜಾತಿ ಜನ ಗಣತಿಗೆ ಯಾಕೆ ಇಷ್ಟೊಂದು ಚರ್ಚೆ ?

Explainer: ರಾಜ್ಯದ ಜಾತಿ ಜನ ಗಣತಿ ಕುರಿತು ಯಾಕೆ ಇಷ್ಟೊಂದು ಚರ್ಚೆ ?

4-ptr

Puttur: ಅಕ್ರಮ ಗೋ ಸಾಗಾಟ ಪತ್ತೆ ಹಚ್ಚಿದ ಬಜರಂಗದಳ ಕಾರ್ಯಕರ್ತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.