ಜ.25ಕ್ಕೆ ಕಲ್ಯಾಣ್ – ಡೊಂಬಿವಿಲಿ ಸಂಪರ್ಕ ಕಲ್ಪಿಸುವ ಪತ್ರಿ ಪೂಲ್ ಸೇತುವೆ ಲೋಕಾರ್ಪಣೆ
Team Udayavani, Jan 23, 2021, 6:42 PM IST
ಥಾಣೆ: ಥಾಣೆ ಜಿಲ್ಲೆಯಲ್ಲಿ ಮರುನಿರ್ಮಾಣವಾಗಿರುವ ಪತ್ರಿ ಪೂಲ್ ಸೇತುವೆಯನ್ನು ಇದೇ 25ರಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಲೋಕಾರ್ಪಣೆ ಮಾಡಲಿದ್ದಾರೆ.
ಕಲ್ಯಾಣ್‌ನಿಂದ ಡೊಂಬಿವಿಲಿಗೆ ಸಂಪರ್ಕ ಸಾಧಿಸುವ ಸೇತುವೆ ಇದಾಗಿದೆ. 1914ರಲ್ಲಿ ನಿರ್ಮಿಸಲಾಗಿದ್ದ ಹಳೆ ಪತ್ರಿ ಪೂಲ್ ಸೇತುವೆಯು ಶಿಥಿಲಗೊಂಡು ಅಪಾಯಕಾರಿಯಾಗಿ ಪರಿಣಮಿಸಿದ ಕಾರಮ, 2018ರ ನವೆಂಬರ್‌ನಲ್ಲಿ ಅದನ್ನು ಧ್ವಂಸಗೊಳಿಸಲಾಗಿತ್ತು.
ಹಲವು ಅಡಚಣೆಗಳ ನಡುವೆಯೇ ಸೇತುವೆಯ ಮರುನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಈಗ ಅದು ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದು ಶಿವಸೇನೆ ಸಂಸದ ಶ್ರೀಕಾಂತ್ ಸಿಂದೆ ಹೇಳಿದ್ದಾರೆ.
ಇದನ್ನೂ ಓದಿ:BSY ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ : ಸಿದ್ದರಾಮಯ್ಯ ಆರೋಪ