ಪಿಎಫ್‌ಐ ನಿಗ್ರಹ ಕಾರ್ಯಾಚರಣೆ : ಬಿಹಾರದಲ್ಲಿ ಮತ್ತೊಬ್ಬನನ್ನ ಬಂಧಿಸಿದ ಎನ್‌ಐಎ
ನಿಷೇಧ ಬಳಿಕವೂ ಮುಂದುವರಿದ ದೇಶದ್ರೋಹಿ ಚಟುವಟಿಕೆಗಳು
Team Udayavani, Mar 19, 2023, 4:20 PM IST
ನವದೆಹಲಿ: ಪಿಎಫ್‌ಐನ ಫುಲ್ವಾರಿ ಶರೀಫ್ ಘಟಕದ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಬಿಹಾರದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿರುವುದಾಗಿ ಎನ್‌ಐಎ ಭಾನುವಾರ ತಿಳಿಸಿದೆ.
ಆರೋಪಿ ಎಂಡಿ ಇರ್ಷಾದ್ ಆಲಂ ಪೂರ್ವ ಚಂಪಾರಣ್ ಜಿಲ್ಲೆಯ ನಿವಾಸಿಯಾಗಿದ್ದು, ಬಿಹಾರ ಪೊಲೀಸರ ನೆರವಿನೊಂದಿಗೆ ಶನಿವಾರ ಪಾಟ್ನಾದ ಫುಲ್ವಾರಿ ಶರೀಫ್‌ನಿಂದ ಬಂಧಿಸಲಾಗಿದೆ ಎಂದು ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಹೇಳಿಕೆಯಲ್ಲಿ ತಿಳಿಸಿದೆ.
“ತನಿಖಾ ಮಾರ್ಗದರ್ಶನಗಳನ್ನು ಅನುಸರಿಸಿ, ಕಳೆದ ವರ್ಷ ಸೆಪ್ಟೆಂಬರ್ 27 ರಂದು ಪಿಎಫ್‌ಐ ಮೇಲೆ ನಿಷೇಧ ಹೇರಿದ ಹೊರತಾಗಿಯೂ, ಅದರ ನಾಯಕರು, ಕಾರ್ಯಕರ್ತರು ಹಿಂಸಾತ್ಮಕ ಉಗ್ರವಾದದ ಸಿದ್ಧಾಂತವನ್ನು ಪ್ರಚಾರ ಮಾಡುವುದನ್ನು ಮುಂದುವರೆಸಿದ್ದಾರೆ. ಅಪರಾಧಗಳನ್ನು ಮಾಡಲು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಹ ವ್ಯವಸ್ಥೆಗೊಳಿಸುತ್ತಿದ್ದಾರೆ ಎಂದು ಎನ್‌ಐಎ ಕಂಡುಹಿಡಿದಿದೆ” ಎಂದು ಹೇಳಿಕೆ ತಿಳಿಸಿದೆ.
2022 ರ ಜುಲೈ ನಲ್ಲಿ ನಾಲ್ವರು ಆರೋಪಿಗಳನ್ನು ಫುಲ್ವಾರಿಶರೀಫ್ ಪ್ರದೇಶದಿಂದ ಬಂಧಿಸಲಾಗಿತ್ತು. ಅವರು ತರಬೇತಿಗಾಗಿ ಮತ್ತು ಭಯೋತ್ಪಾದನೆ ಮತ್ತು ಹಿಂಸಾಚಾರದ ಕೃತ್ಯಗಳನ್ನು ನಡೆಸಲು ಒಟ್ಟುಗೂಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು.ಈ ವರ್ಷ ಫೆಬ್ರವರಿಯಲ್ಲಿ ಇನ್ನೂ ಮೂವರನ್ನು ಬಂಧಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆದ್ದಾರಿಯಲ್ಲಿ ಪ್ರಯಾಣಿಸಿದಷ್ಟೇ ದೂರಕ್ಕೆ ಮಾತ್ರ ಟೋಲ್; 6 ತಿಂಗಳಲ್ಲಿ ಬರಲಿದೆ GPS ಸಿಸ್ಟಮ್
ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಎ.5 ಕ್ಕೆ ಮುಂದೂಡಿಕೆ
‘ನನ್ನ ಮುಂದಿನ ಭಾಷಣಕ್ಕೆ ಪ್ರಧಾನಿ ಮೋದಿ ಹೆದರಿ ಅನರ್ಹಗೊಳಿಸಿದ್ದಾರೆ’: ರಾಹುಲ್ ಗಾಂಧಿ
ಕಮರಿದ ಕನಸು:Policeಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆಗೆ ಹಾಜರಾದ ಯುವಕ ಕುಸಿದುಬಿದ್ದು ಮೃತ್ಯು
ರಾಹುಲ್ ಗಾಂಧಿ ಅನರ್ಹತೆ ಖಂಡಿಸಿದ ಅಮೆರಿಕ ಕಾಂಗ್ರೆಸ್ ನಾಯಕರು