
ಮುಂಬಯಿಯಲ್ಲಿ ತಾಲಿಬಾನ್ ದಾಳಿ: ಎನ್ ಐಎಗೆ ಬೆದರಿಕೆ ಮೇಲ್
Team Udayavani, Feb 3, 2023, 3:12 PM IST

ಮುಂಬಯಿ : ತಾಲಿಬಾನ್‌ನೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಯೊಬ್ಬ ಮುಂಬೈನಲ್ಲಿ ದಾಳಿ ನಡೆಸುತ್ತೇನೆ ಎಂದು ಹೇಳುವ ಇಮೇಲ್ ಅನ್ನು ಎನ್‌ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಸ್ವೀಕರಿಸಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ತನಿಖಾ ಸಂಸ್ಥೆಯ ಮುಂಬೈ ಕಚೇರಿಗೆ ಗುರುವಾರ ಬೆದರಿಕೆ ಮೇಲ್ ಬಂದಿದ್ದು, ನಗರ ಪೊಲೀಸರು ಮತ್ತು ಎಟಿಎಸ್ (ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ)ಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬೆದರಿಕೆ ಸಂದೇಶವನ್ನು ಕಳುಹಿಸಲು ಬಳಸಿದ ಇಮೇಲ್ ವಿಳಾಸದಲ್ಲಿ “ಸಿಐಎ” ಇತ್ತು ಮತ್ತು ಕಳುಹಿಸುವ ತಾಲಿಬಾನ್‌ನೊಂದಿಗೆ ಸಂಪರ್ಕ ಹೊಂದಿದ್ದು ನಗರದಲ್ಲಿ ದಾಳಿ ನಡೆಸುವುದಾಗಿ ಹೇಳಿದ್ದಾನೆ.
ಟಾಪ್ ನ್ಯೂಸ್
