ಸೆನ್ಸೆಕ್ಸ್ 531 ಅಂಕ ಕುಸಿತ, ನಿಫ್ಟಿ 133 ಅಂಕ ಇಳಿಕೆ ; IT ಕ್ಷೇತ್ರದ ಷೇರುಗಳಿಗೆ ನಷ್ಟ
Team Udayavani, Jan 25, 2021, 8:00 PM IST
ಮುಂಬೈ: ಇಂಧನ ಮತ್ತು ಐಟಿ ಕ್ಷೇತ್ರಗಳ ಷೇರುಗಳ ಭಾರೀ ಮಾರಾಟವು ಸೆನ್ಸೆಕ್ಸ್ ಅನ್ನು ಸತತ 3ನೇ ದಿನವೂ ಕುಸಿಯುವಂತೆ ಮಾಡಿದೆ. ಜಾಗತಿಕ ಬೆಳವಣಿಗೆಗಳು ಹಾಗೂ ಭಾರತ-ಚೀನಾ ಸೈನಿಕರ ನಡುವಿನ ಘರ್ಷಣೆಯ ಸುದ್ದಿಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ಆಸಕ್ತಿ ತೋರಲಿಲ್ಲ. ಪರಿಣಾಮ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರ 530.95 ಅಂಕ ಕುಸಿತ ದಾಖಲಿಸಿ, 48,347.59ರಲ್ಲಿ ಅಂತ್ಯಗೊಂಡಿದೆ.
ಇದೇ ವೇಳೆ, ನಿಫ್ಟಿ ಕೂಡ 133 ಅಂಕ ಕುಸಿದು, ದಿನಾಂತ್ಯಕ್ಕೆ 14,238.90ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಕಳೆದ ಮೂರು ವಹಿವಾಟಿನ ದಿನಗಳಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಒಟ್ಟಾರೆ 1,444.53 ಅಂಕಗಳಷ್ಟು ಪತನಗೊಂಡಿದ್ದರೆ, ನಿಫ್ಟಿ 405.80 ಅಂಕ ಕುಸಿದಿದೆ.
ಚಿನ್ನದ ದರ ಇಳಿಕೆ
ದೆಹಲಿ ಚಿನಿವಾರ ಮಾರುಕಟ್ಟೆಯಲ್ಲಿ ಹಳದಿ ಲೋಹದ ದರ 141 ರೂ. ಇಳಿಕೆಯಾಗಿ, 10 ಗ್ರಾಂಗೆ 48,509 ರೂ. ಆಗಿದೆ. ಬೆಳ್ಳಿ ದರ 43 ರೂ. ಹೆಚ್ಚಳವಾಗಿ, ಕೆಜಿಗೆ 66,019 ರೂ. ಆಗಿದೆ. ಇನ್ನು, ಡಾಲರ್ ಎದುರು ರೂಪಾಯಿ ಮೌಲ್ಯ 3 ಪೈಸೆ ಏರಿಕೆಯಾಗಿ, 72.94 ರೂ. ಆಗಿದೆ.
ಇದನ್ನೂ ಓದಿ:ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ಸ್ವಾತಂತ್ರ್ಯ ಸೇನಾನಿ “ಅಹ್ಮದುಲ್ಲಾ ಶಾ’ ಹೆಸರು
2020ರಲ್ಲಿ ಎಫ್ಡಿಐ ಹೆಚ್ಚಳ
ಕಳೆದ ವರ್ಷ ಭಾರತಕ್ಕೆ ಶೇ.13ರಷ್ಟು ಹೆಚ್ಚು ವಿದೇಶಿ ನೇರ ಬಂಡವಾಳ (ಎಫ್ಡಿಐ) ಹರಿದುಬಂದಿದೆ. ಕೊರೊನಾ ಸೋಂಕಿನಿಂದಾಗಿ ಅಮೆರಿಕ, ಯು.ಕೆ. ಮತ್ತು ರಷ್ಯಾದಂತಹ ದೇಶಗಳಲ್ಲಿ ಬಂಡವಾಳದ ಪ್ರಮಾಣವು ಗಣನೀಯವಾಗಿ ಕುಗ್ಗಿದ್ದರೆ, ಅದರ ಲಾಭವನ್ನು ಭಾರತ ಮತ್ತು ಚೀನಾ ಪಡೆದವು ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. 2019ಕ್ಕೆ ಹೋಲಿಸಿದರೆ 2020ರಲ್ಲಿ ಜಾಗತಿಕ ವಿದೇಶಿ ನೇರ ಬಂಡವಾಳದ ಪ್ರಮಾಣ ಶೇ.42ರಷ್ಟು ಕುಸಿದಿದೆ. ಆದರೆ, ಭಾರತದಲ್ಲಿ ಈ ಪ್ರಮಾಣ ಶೇ.13ರಷ್ಟು ಹೆಚ್ಚಳವಾಗಿದೆ ಎಂದಿದೆ ವರದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್ಬಿಐ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರ ಇಳಿಕೆ
ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಇಂದಿನಿಂದ ಸಿಗುತ್ತಿದೆ ಈ ಸುವರ್ಣಾವಕಾಶ…!?
ಕೋವಿಡ್ ಲಾಕ್ ಡೌನ್ ಆಘಾತದಿಂದ ಇನ್ನೂ ಚೇತರಿಕೆಯಾಗಿಲ್ಲ ಹೌಸ್ ಹೋಲ್ಡ್ ಇನ್ ಕಮ್ ..!
ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 700 ಅಂಕ ಏರಿಕೆ, 15,000 ಗಡಿ ದಾಟಿದ ನಿಫ್ಟಿ
“ತೈಲ ಬೆಲೆ ಜಿಎಸ್‌ಟಿ ವ್ಯಾಪ್ತಿಗೆ ಬರಲಿ’ : ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣ್ಯನ್ ಬೆಂಬಲ