ವಿಐಎಸ್ಎಲ್ ವಿಚಾರದಲ್ಲಿ ರಾಜಕೀಯ ಬೆಳೆಸುವ ಅವಶ್ಯಕತೆ ಇಲ್ಲ: ಸಿಎಂ ಬೊಮ್ಮಾಯಿ
ಜಾತಿ ಆಧಾರಿತ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ಜನ ಕಿಮ್ಮತ್ತು ಕೊಡುವುದಿಲ್ಲ
Team Udayavani, Feb 8, 2023, 4:15 PM IST
ಶಿವಮೊಗ್ಗ:ವಿಐಎಸ್ಎಲ್ ವಿಚಾರದಲ್ಲಿ ರಾಜಕೀಯ ಬೆಳೆಸುವ ಅವಶ್ಯಕತೆ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಯಿ ಅವರು ಬುಧವಾರ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗ ದಲ್ಲಿ ವಿವಿಧ ಕಾರ್ಯಕ್ರಮ ಉದ್ಘಾಟನೆ ಗೆ ಬಂದಿದ್ದೇನೆ,ವಿಐಎಸ್ಎಲ್ ಅವರ ನಿಯೋಗ ನನ್ನ ಬಳಿ ಬಂದಿತ್ತು. ಕೇಂದ್ರದ ಸಚಿವರಿಗೂ ಕೂಡ ಮಾಹಿತಿ ರವಾನೆ ಮಾಡಲಾಗಿದೆ. ಇದೇ ವಾರದಲ್ಲಿ ಸಭೆ ಕರೆಯುತ್ತೇನೆ. ಖಾಸಗಿ ಯವರ ಜೊತೆ ಕೂಡ ಮಾತನಾಡುತ್ತೇನೆ. ಪರಿಹಾರ ಕೊಡುವಂತಹ ಕೆಲಸವನ್ನು ಮಾಡುತ್ತೇವೆ. ಎಲ್ಲಾ ವಿವರಗಳೊಂದಿಗೆ ಬೆಂಗಳೂರಿನ ಲ್ಲಿ ಸಭೆ ಕರೆದು ಕೆಲ ನಿರ್ಣಯ ತೆಗೆದುಕೊಂಡು ಕೇಂದ್ರಕ್ಕೆ ಕಳುಹಿಸುಸುತ್ತೆವೆ. ಮ್ಮ ಮನವಿ ಸ್ವೀಕರಿಸಿ ಒಪ್ಪಿಗೆ ನೀಡುತ್ತಾರೆ ಎಂದು ಒಂದು ನಂಬಿಕೆ ಇದೆ. ಈ ವಿಚಾರದಲ್ಲಿ ರಾಜಕೀಯ ಬೆಳೆಸುವ ಅವಶ್ಯಕತೆ ಇಲ್ಲ ಎಂದರು.
ಇದನ್ನೂ ಓದಿ : ವಿಐಎಸ್ಎಲ್ ವಿಚಾರದಲ್ಲಿ ಬಿಜೆಪಿಯವರು ಕೊಟ್ಟ ಮಾತು ಉಳಿಸಿಕೊಂಡಿಲ್ಲ: ಡಿ.ಕೆ. ಶಿವಕುಮಾರ್
ಬ್ರಾಹ್ಮಣ ಸಿಎಂ ವಿಚಾರ ದ ಬಗ್ಗೆ ಪ್ರತಿಕ್ರಿಯಿಸಿ, ನಾನು ಜಾತಿ ಆಧಾರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ.ಜನ ಜಾತಿ, ವೈಯಕ್ತಿಕತೆ ಮೇಲೆ ಕಿಮ್ಮತ್ತು ಕೊಡುವುದಿಲ್ಲ.ಇಂತಹ ಮಾತುಗಳಿಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಜನ ನಮ್ಮ ಸಾಮರ್ಥ್ಯದ ಮೇಲೆ ಅಧಿಕಾರದ ಆಧಾರದ ಮೇಲೆ ಮತ ಹಾಕುತ್ತಾರೆ. ಮತದಾರರು ಈಗ ಪ್ರಬುದ್ದರಾಗಿದ್ದಾರೆ ಎಂದರು. ರಾಜ್ಯ ಬಜೆಟ್ ಬಗ್ಗೆ ಕಾದು ನೋಡಿ ಎಂದು ಈ ವೇಳೆ ಸಿಎಂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ ಮರುಸ್ಥಾಪನೆ : ಡಿಕೆಶಿ
ಕೆಕೆಆರ್ ಟಿಸಿ ಗೆ 802 ಬಸ್ ಸೇರ್ಪಡೆ: 28ರಂದು ಸೇಡಂದಲ್ಲಿ ಲೋಕಾರ್ಪಣೆ
ಕುತೂಹಲ ಮೂಡಿಸಿದ ಭೇಟಿ: ಸಿಎಂ ಬೊಮ್ಮಾಯಿ ಜತೆ ಒಂದು ಗಂಟೆ ಚರ್ಚಿಸಿದ ಸಾಹುಕಾರ್
ಬಿಸಿಲ ಬೇಗೆಗೆ ರಾಜ್ಯದ ಜನ ತತ್ತರ! ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ…
ಕೋವಿಡ್ ಮಹಾಮಾರಿ ಮತ್ತೆ ಸದ್ದು; ರಾಜ್ಯದಲ್ಲಿ 155 ಹೊಸ ಪ್ರಕರಣ ಪತ್ತೆ