ರಾಹುಲ್‌ ಗಾಂಧಿ ವಿಡಿಯೋ ವೈರಲ್‌: ವಿವಾಹದಲ್ಲಿ ಪಾಲ್ಗೊಳ್ಳುವುದು ಅಪರಾಧವಲ್ಲ; ಕಾಂಗ್ರೆಸ್‌

Team Udayavani, May 3, 2022, 8:19 PM IST

ರಾಹುಲ್‌ ಗಾಂಧಿ ವಿಡಿಯೋ ವೈರಲ್‌: ವಿವಾಹದಲ್ಲಿ ಪಾಲ್ಗೊಳ್ಳುವುದು ಅಪರಾಧವಲ್ಲ; ಕಾಂಗ್ರೆಸ್‌

ನವದೆಹಲಿ: ಸ್ನೇಹಿತನ ಮದುವೆಗಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇಪಾಳಕ್ಕೆ ಭೇಟಿ ನೀಡಿದ್ದು ,ಮಂಗಳವಾರ ಬಿಜೆಪಿ ಟ್ವೀಟ್‌ ಗಳ ಸುರಿಮಳೆಗೆ ಕಾರಣವಾಯಿತು.

ರಾಹುಲ್‌ ಗಾಂಧಿ ಪಬ್‌ ನಲ್ಲಿ ಪಾರ್ಟಿ ಮಾಡುತ್ತಾ ,ಮಹಿಳೆಯೊಂದಿಗೆ ಮಾತನಾಡುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನೇಪಾಳಕ್ಕೆ ತೆರಳಿರುವ ರಾಹುಲ್‌ ಗಾಂಧಿ ಅವರು ನೈಟ್‌ ಪಾರ್ಟಿ ಮಾಡಿ ಮೋಜು ಮಸ್ತಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ರಾಹುಲ್ ಗಾಂಧಿ ಪಾರ್ಟಿ ಮಾಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅವರು ಸ್ವಂತ ಪಕ್ಷವನ್ನು ನಡೆಸುವುದಕ್ಕಿಂತ ಹೆಚ್ಚಾಗಿ ಪಕ್ಷಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಾವು ನಮ್ಮ ರಾಜಕೀಯ ಪಕ್ಷಗಳಿಗಾಗಿ ಕೆಲಸ ಮಾಡುತ್ತೇವೆ, ಆದರೆ ಅವರು ಪಾರ್ಟಿಗಳಿಗೆ ಹಾಜರಾಗುತ್ತಾರೆ” ಎಂದು ಬಿಜೆಪಿ ನಾಯಕ ಮತ್ತು ಬಿಹಾರ ಸಚಿವ ಸೈಯದ್ ಶಹನವಾಜ್ ಹುಸೇನ್ ಹೇಳಿದರು.

ಬಿಜೆಪಿ ವ್ಯಂಗ್ಯ
ರಾಹುಲ್‌ ಗಾಂಧಿ ಸಂಗೀತ ರಾತ್ರಿಯ ಪಾರ್ಟಿಯೊಂದರಲ್ಲಿ ಭಾಗಿಯಾಗಿರುವ ವೀಡಿಯೋವನ್ನು ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್‌ ಮಾಳವೀಯ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. “ಮುಂಬಯಿ ದಾಳಿ ವೇಳೆಯಲ್ಲೂ ಅವರು ಪಾರ್ಟಿ ಮಾಡುತ್ತಿದ್ದರು. ಈಗ ಕಾಂಗ್ರೆಸ್‌ನಲ್ಲಿ ಸ್ಫೋಟ ಸದೃಶ ವಾತಾವರಣ ಇರುವಾಗಲೂ ರಾಹುಲ್‌ ಪಾರ್ಟಿ ಮಾಡುತ್ತಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನವನ್ನು ಹೊರಗುತ್ತಿಗೆಗೆ ನೀಡಲು ಕಾಂಗ್ರೆಸ್‌ ನಿರಾಕರಿಸಿದ್ದು, ಇಂಥ ಹೊತ್ತಿನಲ್ಲೇ ಅವರ ಪ್ರಧಾನಿ ಅಭ್ಯರ್ಥಿ ತಮ್ಮ ಕೆಲಸ ಮುಂದುವರಿಸಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

“ರಾಹುಲ್‌ ಅವರ ರಜೆ, ಪಾರ್ಟಿ, ಪ್ರವಾಸ, ಸಂತಸದ ಟ್ರಿಪ್‌, ಖಾಸಗಿ ವಿದೇಶ ಪ್ರವಾಸ ಇತ್ಯಾದಿಗಳು ಹೊಸದೇನಲ್ಲ. ಇವೆಲ್ಲವೂ ದೇಶಕ್ಕೆ ಗೊತ್ತಿರುವಂಥದ್ದೇ’ ಎಂದು ಕಾನೂನು ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ಗೆಳತಿಯ ವಿವಾಹಕ್ಕೆ ರಾಹುಲ್‌
ರಾಹುಲ್‌ ಗಾಂಧಿ ತಮ್ಮ ಸ್ನೇಹಿತೆ ಸುಮ್ನಿಯಾ ಉದಾಸ್‌ ಅವರ ವಿವಾಹಕ್ಕಾಗಿ ನೇಪಾಲಕ್ಕೆ ತೆರಳಿದ್ದಾರೆ. ಮಂಗಳವಾರವೇ ವಿವಾಹ ನಡೆದಿದ್ದು, ಗುರುವಾರ ಆರತಕ್ಷತೆ ಸಮಾರಂಭವಿದೆ. ರಾಹುಲ್‌ ಸೋಮವಾರ ಸಂಜೆ ಕಾಠ್ಮಂಡುವಿಗೆ ತೆರಳಿದ್ದು, ಅಲ್ಲಿನ ಹೊಟೇಲ್‌ ಒಂದರಲ್ಲಿ ಉಳಿದುಕೊಂಡಿದ್ದಾರೆ ಎಂದು ನೇಪಾಲಿ ಪತ್ರಿಕೆಯೊಂದರ ಮೂಲಗಳು ಹೇಳಿವೆ. ಅಂದ ಹಾಗೆ, ಸುಮ್ನಿಯಾ ಅವರು ಸಿಎನ್‌ಎನ್‌ ಸುದ್ದಿಸಂಸ್ಥೆಯ ಮಾಜಿ ಉದ್ಯೋಗಿ. ಇವರ ತಂದೆ ಭೀಮ್‌ ಉದಾಸ್‌ ಮ್ಯಾನ್ಮಾರ್‌ನಲ್ಲಿ ನೇಪಾಲದ ರಾಯಭಾರಿಯಾಗಿದ್ದರು.

ಕಾಂಗ್ರೆಸ್‌ ತಿರುಗೇಟು
ಅತ್ಯಾಪ್ತ ದೇಶವೊಂದಕ್ಕೆ, ಅದೂ ವಿವಾಹಕ್ಕಾಗಿ ಪ್ರವಾಸ ಹೋಗುವುದು ತಪ್ಪೇ ಎಂದು ಕಾಂಗ್ರೆಸ್‌, ಬಿಜೆಪಿ ನಾಯಕರನ್ನು  ಪ್ರಶ್ನಿಸಿದೆ. ಇದು 2015ರಲ್ಲಿ ಪ್ರಧಾನಿ ಮೋದಿ ಅವರು ಪಾಕ್‌ ಆಗಿನ ಪ್ರಧಾನಿ ನವಾಜ್‌ ಷರೀಫ್ ಅವರ ಪುತ್ರಿಯ ವಿವಾಹಕ್ಕೆ ಹೋದದ್ದಕ್ಕಿಂತ ಅಪರಾಧವೇನಲ್ಲ ಎಂದು ತಿರುಗೇಟು ನೀಡಿದೆ. ರಾಹುಲ್‌ ಗಾಂಧಿಯವರೇನೂ ಪಾಕಿಸ್ಥಾನಕ್ಕೆ ಹೋಗಿಲ್ಲ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ ಹೇಳಿದ್ದಾರೆ.

ಟಾಪ್ ನ್ಯೂಸ್

ಮಾಪನ ಇಲಾಖೆಗೆ ಇಲ್ಲ ಕಾನೂನು ಬಲ: ತೂಕ, ಅಳತೆ ವಂಚನೆ; ಕ್ರಮ ದಂಡಕ್ಕಷ್ಟೇ ಸೀಮಿತ

ಮಾಪನ ಇಲಾಖೆಗೆ ಇಲ್ಲ ಕಾನೂನು ಬಲ: ತೂಕ, ಅಳತೆ ವಂಚನೆ; ಕ್ರಮ ದಂಡಕ್ಕಷ್ಟೇ ಸೀಮಿತ

ಬುಧವಾರದ ರಾಶಿ ಫಲ… : ಇಲ್ಲಿದೆ ನಿಮ್ಮ ರಾಶಿಯ ಗ್ರಹ ಗತಿ

ಬುಧವಾರದ ರಾಶಿ ಫಲ… : ಇಲ್ಲಿದೆ ನಿಮ್ಮ ರಾಶಿಯ ಗ್ರಹ ಗತಿ

ನಮ್ಮ ರಾಜ್ಯದಲ್ಲಿಯೂ ಹೆಚ್ಚಿನ ಪ್ರೋತ್ಸಾಹ ನೀಡಿ: ಗುರುರಾಜ್‌ ಪೂಜಾರಿ ಮನವಿ

ನಮ್ಮ ರಾಜ್ಯದಲ್ಲಿಯೂ ಹೆಚ್ಚಿನ ಪ್ರೋತ್ಸಾಹ ನೀಡಿ: ಗುರುರಾಜ್‌ ಪೂಜಾರಿ ಮನವಿ

ಪ್ರಕ್ಷುಬ್ಧಗೊಂಡಿದ್ದ ಶಿವಮೊಗ್ಗ ಶಾಂತ; ಚಾಕು ಇರಿದು ಹಲ್ಲೆ ನಡೆಸಿದ್ದ ನಾಲ್ವರ ಬಂಧನ

ಶಿವಮೊಗ್ಗ ಶಾಂತ: ನಾಲ್ವರ ಬಂಧನ; ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಆರೋಪಿ ಕಾಲಿಗೆ ಗುಂಡು

ವಾರಾಂತ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ

ವಾರಾಂತ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ

ಭಾರತೀಯ ಸೇನೆಗೆ ಮತ್ತಷ್ಟು “ಸ್ವದೇಶಿ’ ಬಲ

ಭಾರತೀಯ ಸೇನೆಗೆ ಮತ್ತಷ್ಟು “ಸ್ವದೇಶಿ’ ಬಲ

ಮುಂದಿನ ಅಧಿವೇಶನದಲ್ಲಿ ಮರಳು ನೀತಿಗೆ ತಿದ್ದುಪಡಿ: ಸಚಿವ ಹಾಲಪ್ಪ ಆಚಾರ್‌

ಮುಂದಿನ ಅಧಿವೇಶನದಲ್ಲಿ ಮರಳು ನೀತಿಗೆ ತಿದ್ದುಪಡಿ: ಸಚಿವ ಹಾಲಪ್ಪ ಆಚಾರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತೀಯ ಸೇನೆಗೆ ಮತ್ತಷ್ಟು “ಸ್ವದೇಶಿ’ ಬಲ

ಭಾರತೀಯ ಸೇನೆಗೆ ಮತ್ತಷ್ಟು “ಸ್ವದೇಶಿ’ ಬಲ

ಹಾಟ್‌ಸ್ಪಾಟ್‌ ಬೆಂಗಳೂರು! ಇಲ್ಲೇ ಬಂದು ಸ್ಟಾರ್ಟಪ್‌ ಆರಂಭಿಸುತ್ತಿರುವ ವಿದೇಶಿಯರು

ಹಾಟ್‌ಸ್ಪಾಟ್‌ ಬೆಂಗಳೂರು! ಇಲ್ಲೇ ಬಂದು ಸ್ಟಾರ್ಟಪ್‌ ಆರಂಭಿಸುತ್ತಿರುವ ವಿದೇಶಿಯರು

ದೇಸೀ ಪಠ್ಯಕ್ಕೆ ಸಲಹೆ ನೀಡಿ: ಆನ್‌ಲೈನ್‌ ಸಲಹೆ ನೀಡಲು ದೇಶವಾಸಿಗಳಿಗೆ ಕೇಂದ್ರದ ಮನವಿ

ದೇಸೀ ಪಠ್ಯಕ್ಕೆ ಸಲಹೆ ನೀಡಿ: ಆನ್‌ಲೈನ್‌ ಸಲಹೆ ನೀಡಲು ದೇಶವಾಸಿಗಳಿಗೆ ಕೇಂದ್ರದ ಮನವಿ

ರಾಜಸ್ಥಾನ: ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಕಾಂಗ್ರೆಸ್‌ ಸದಸ್ಯರ ಸಾಮೂಹಿಕ ರಾಜೀನಾಮೆ

ರಾಜಸ್ಥಾನ: ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಕಾಂಗ್ರೆಸ್‌ ಸದಸ್ಯರ ಸಾಮೂಹಿಕ ರಾಜೀನಾಮೆ

ಹಿರಿಯರಿಗಾಗಿ ಮಾಡಿರುವ ಸ್ಟಾರ್ಟ್‌ಅಪ್‌ಗೆ ಟಾಟಾ ಹೂಡಿಕೆ

ಹಿರಿಯರಿಗಾಗಿ ಮಾಡಿರುವ ಸ್ಟಾರ್ಟ್‌ಅಪ್‌ಗೆ ಟಾಟಾ ಹೂಡಿಕೆ

MUST WATCH

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಆಳವಾದ ಕಂದಕಕ್ಕೆ ಬಸ್ ಉರುಳಿ ಬಿದ್ದು, ಐಟಿಬಿಪಿಯ 6 ಯೋಧರು ಸಾವು

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

ಹೊಸ ಸೇರ್ಪಡೆ

ಮಾಪನ ಇಲಾಖೆಗೆ ಇಲ್ಲ ಕಾನೂನು ಬಲ: ತೂಕ, ಅಳತೆ ವಂಚನೆ; ಕ್ರಮ ದಂಡಕ್ಕಷ್ಟೇ ಸೀಮಿತ

ಮಾಪನ ಇಲಾಖೆಗೆ ಇಲ್ಲ ಕಾನೂನು ಬಲ: ತೂಕ, ಅಳತೆ ವಂಚನೆ; ಕ್ರಮ ದಂಡಕ್ಕಷ್ಟೇ ಸೀಮಿತ

ಬುಧವಾರದ ರಾಶಿ ಫಲ… : ಇಲ್ಲಿದೆ ನಿಮ್ಮ ರಾಶಿಯ ಗ್ರಹ ಗತಿ

ಬುಧವಾರದ ರಾಶಿ ಫಲ… : ಇಲ್ಲಿದೆ ನಿಮ್ಮ ರಾಶಿಯ ಗ್ರಹ ಗತಿ

ನಮ್ಮ ರಾಜ್ಯದಲ್ಲಿಯೂ ಹೆಚ್ಚಿನ ಪ್ರೋತ್ಸಾಹ ನೀಡಿ: ಗುರುರಾಜ್‌ ಪೂಜಾರಿ ಮನವಿ

ನಮ್ಮ ರಾಜ್ಯದಲ್ಲಿಯೂ ಹೆಚ್ಚಿನ ಪ್ರೋತ್ಸಾಹ ನೀಡಿ: ಗುರುರಾಜ್‌ ಪೂಜಾರಿ ಮನವಿ

ಪ್ರಕ್ಷುಬ್ಧಗೊಂಡಿದ್ದ ಶಿವಮೊಗ್ಗ ಶಾಂತ; ಚಾಕು ಇರಿದು ಹಲ್ಲೆ ನಡೆಸಿದ್ದ ನಾಲ್ವರ ಬಂಧನ

ಶಿವಮೊಗ್ಗ ಶಾಂತ: ನಾಲ್ವರ ಬಂಧನ; ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಆರೋಪಿ ಕಾಲಿಗೆ ಗುಂಡು

ವಾರಾಂತ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ

ವಾರಾಂತ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.